
ಸಿಡಿಲು ಬಡಿದು ಮೃತಪಟ್ಟಿದ್ದ ತಾಲೂಕಿನ ಬಳಗಾನೂರ ಗ್ರಾಮದ ರೈತ ಅಯ್ಯಣ್ಣ ಸಜ್ಜನ ಅವರ ಕುಟುಂಭಕ್ಕೆ ಸರ್ಕಾರದಿಂದ ಬಿಡುಗಡೆಗೊಂಡ ೫ ಲಕ್ಷ ರೂ. ಪರಿಹಾರಧನ ಚೆಕ್‌ನ್ನು ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಅವರು ಮಂಗಳವಾರರಂದು ಕುಟುಂಬದವರಿಗೆ ನೀಡಿ ಸಾಂತ್ವಾನ ಹೇಳಿದರು.
ಪರಿಹಾರ ಚೆಕ್ ವಿತರಿಸಿ ಮಾತನಾಡಿದ ಶಾಸಕ ನಾಡಗೌಡ ಅವರು ರೈತ ಅಯ್ಯಣ್ಣ ಸಜ್ಜನ ಅವರು ಸಿಡಿಲು ಬಡಿದು ಮೃತಪಟ್ಟಿರುವದರಿಂದ ಪ್ರಕೃತಿ ವಿಕೋಪದಡಿ ಸರ್ಕಾರವು ಅವರ ಕುಟುಂಭಕ್ಕೆ ನೆರವಾಗುವ ದೃಷ್ಠಿಯಿಂದ ೫ ಲಕ್ಷ ರೂ. ಪರಿಹಾರದನವನ್ನು ನೀಡಿದೆ ಮೃತ ಅಯ್ಯಣ್ಣ ಸಜ್ಜನ ಅವರು ಇಡೀ ಕುಟುಂವಕ್ಕೆ ಆಧಾರವಾಗಿದ್ದರು ಅವರ ಅಗಲಿಕೆ ಇಡೀ ಕುಟುಂಭಕ್ಕೆ ದುಃಖವನ್ನು ತರಿಸಿದೆ ಇಂತಹ ಸಮಯದಲ್ಲಿ ನಾನು ಒಳಗೊಂಡು ಎಲ್ಲರೂ ನಿಮ್ಮ ಜೊತೆಯಲ್ಲಿದ್ದೇವೆ ಕುಟುಂಭಸ್ಥರು ದೈರ್ಯಕಳೆದುಕೊಳ್ಳಲು ಮುನ್ನಡೆಯಿರಿ ದೇವರು ಮುಂದೆ ಎಲ್ಲವೂ ಒಳ್ಳೆಯದನ್ನೇ ಮಾಡುತ್ತಾನೆಂದರು.ರೂ.೫ ಲಕ್ಷ ಮೊತ್ತದ ಚೆಕ್‌ನ್ನು ಮೃತನ ಧರ್ಮಪತ್ನಿ ಶ್ರೀಮತಿ ಸುವರ್ಣಾ ಸಜ್ಜನ ಅವರಿಗೆ ಹಸ್ತಾಂತರಿಸಲಾಯಿತು.
ಈ ಸಮಯದಲ್ಲಿ ತಹಸಿಲ್ದಾರ್ ಡಾ.ವಿನಯಾ ಹೂಗಾರ, ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಸಿದ್ದನಗೌಡ ಪಾಟೀಲ(ನಾವದಗಿ), ಪುರಸಭೆ ಮಾಜಿ ಸದಸ್ಯ ಪ್ರಭುಗೌಡ ಮದರಕಲ್ಲ, ಸಂಗನಗೌಡ ಅಸ್ಕಿ, ಗ್ರಾಮದ ಗಣ್ಯರಾದ ಮಲ್ಲಣ್ಣ ದೋರನಹಳ್ಳಿ, ಚನ್ನಣ್ಣ ದೇಸಾಯಿ, ಪ್ರಭುಗೌಡ ಬಿರಾದಾರ, ಎಸ್.ಐ. ಕಡಕೋಳ, ಆರ್.ಎಸ್.ವಾಲಿಕಾರ, ಅಮರಪ್ಪ ಬಿರಾದಾರ ಹಾಗೂ ಗ್ರಾಮಸ್ಥರು ಇದ್ದರು.



