ರಾಜ್ಯ
Trending

ಅವಾಚ್ಯ ಶಬ್ದಗಳಿಂದ ನಿಂದಿಸಿದ ಬಸ್ ಕಂಡಕ್ಡರ್ ಮತ್ತು ಡ್ರೈವರ್ ವಿರುದ್ದ ಐಚನಹಳ್ಳಿ ಗ್ರಾಮಸ್ಥರ ಪ್ರತಿಭಟನೆ.

ಬೂಕನಕೆರೆ ಮಾರ್ಗವಾಗಿ ಐಚನಹಳ್ಳಿ ಹೋಗದೆ ಮಾರ್ಗ ಮಧ್ಯೆ ವಿದ್ಯಾರ್ಥಿನಿಯರು‌ ಮತ್ತು ವಯೋವೃದ್ದರನ್ನು ಇಳಿಯುವಂತೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಬಸ್ ಕಂಡಕ್ಡರ್ ಮತ್ತು ಡ್ರೈವರ್ ವಿರುದ್ದ ಐಚನಹಳ್ಳಿ ಗ್ರಾಮಸ್ಥರ ಪ್ರತಿಭಟನೆ…ಸುಮಾರು ಎಂಟು ಮಂದಿ ಪ್ರಯಾಣಿಕರಿದ್ದರೂ ಸಹ ಐಚನಹಳ್ಳಿ ಗ್ರಾಮಕ್ಕೆ ಹೋಗಲು‌ ನಿರಾಕರಿಸಿದ ಕಂಡಕ್ಟರ್ ಪ್ರಭಾಕರ್ ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ.ಮಕ್ಕಳನ್ನು ಇಳಿಸದೇ ವಾಪಸ್ ಹೆಣ್ಣು ಮಕ್ಕಳು, ವಯೋವೃದ್ದರನ್ನು ಕೃಷ್ಣರಾಜಪೇಟೆ ಗೆ ಕರೆದುಕೊಂಡು ಹೋಗುತ್ತಿದ್ದರು. ಇದನ್ನು ವಿದ್ಯಾರ್ಥಿನಿಯರು ತಮ್ಮ ಪೋಷಕರಿಗೆ ಮಾಹಿತಿ ನೀಡಿದ್ದಾರೆ.

ಕೂಡಲೇ ದೌಡಾಯಿಸಿದ ಐಚನಹಳ್ಳಿ ಗ್ರಾಮಸ್ಥರು ಬೊಮ್ಮೇಗೌಡನಕೊಪ್ಪಲು ಗ್ರಾಮದ ಬಳಿ ಬಸ್ಅನ್ನು ತಡೆದು ಪ್ರತಿಭಟನೆ ನಡೆಸಿದರು.ಐಚನಹಳ್ಳಿ ಗ್ರಾಮಸ್ಥರನ್ನು‌ ಕಂಡು ಬಸ್ಸನ್ನು ಬಿಟ್ಟು ಪರಾರಿಯಾದ ಡ್ರೈವರ್ ಮನು, ಕಂಡಕ್ಟರ್ ಪ್ರಭಾಕರ್.

ಗ್ರಾಮದ ಮುಖಂಡರಾದ ಮನು ಮಾತನಾಡಿ ಇದೇ ರೀತಿ ಹಲವು ಭಾರಿ ಮಾರ್ಗ ಮದ್ಯೆ ವಿದ್ಯಾರ್ಥಿಗಳನ್ನು‌ ಕೆಳಗಿಳಿಸಿ ಹೋಗಿರುವ ಡ್ರೈವರ್ ಮತ್ತು‌ ಕಂಡಕ್ಟರ್. ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳಾದ ನಿಸರ್ಗ, ಭೂಮಿಕಾ, ರಜಿನಿ, ಮುಖಂಡರಾದ ರಾಮಕೃಷ್ಣೇಗೌಡ, ಮನು, ಕೃಷ್ಣ, ಶ್ರೀನಿವಾಸ್, ಪುಷ್ಪ, ಗಿರೀಶ್, ಕಮಲಮ್ಮ, ಭರತ್, ಚೇತನ್, ಪ್ರಜ್ವಲ್, ಶಿವಮಲ್ಲ, ನವೀನ್, ದರ್ಶನ್, ಅಭಿ, ಕಾಂತರಾಜು, ಸೇರಿದಂತೆ ನೂರಾರು ಐಚನಹಳ್ಳಿ ಗ್ರಾಮಸ್ಥರು ಹಾಗೂ ಬೊಮ್ಮೇಗೌಡನಕೊಪ್ಪಲು ಗ್ರಾಮಸ್ಥರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಗ್ರಾಮಸ್ಥರ ಪ್ರತಿಭಟನೆ ವಿಚಾರ ತಿಳಿದುಬಸ್ಥಳಕ್ಕೆ ಬಂದ ಕೃಷ್ಣರಾಜಪೇಟೆ ಡಿಪೋ ಇನ್ಸ್ ಪೆಕ್ಟರ್ ರವಿ ಅವರು ಬಸ್ಸನ್ನು ತೆಗೆದುಕೊಂಡು ಹೋಗಲು ಪ್ರಯತ್ನಿಸಿದಾಗ ಗ್ರಾಮಸ್ಥರು ರವಿ ಅವರನ್ನು ತರಾಟೆಗೆ ತೆಗೆದುಕೊಂಡು ಸ್ಥಳಕ್ಕೆ ಬಸ್ ಡ್ರೈವರ್ ಮತ್ತು ಕಂಡಕ್ಡರ್ ಕರೆಸಬೇಕು. ಇಲ್ಲದಿದ್ದರೆ ಸ್ಥಳದಲ್ಲೆ ಅಮಾನತ್ತು ಆದೇಶ ಮಾಡಬೇಕು ಅಲ್ಲಿಯವರೆಗೆ ಬಸ್ಸನ್ನು ತೆಗೆದುಕೊಂಡು ಹೋಗಕೂಡಲು ಎಂದು ಪಟ್ಟು ಹಿಡಿದಿರುವ ಐಚನಹಳ್ಳಿ ಗ್ರಾಮಸ್ಥರು ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button