ಇತ್ತೀಚಿನ ಸುದ್ದಿರಾಜ್ಯ

ಬೀಕನಹಳ್ಳಿ ಈರೇಗೌಡರಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಸಮವಸ್ತ್ರ

ಕೆ.ಆರ್.ಪೇಟೆ : ಬೀರುವಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಬಿಕನಹಳ್ಳಿ ಈರೇಗೌಡರ ಸಂಯುಕ್ತ ಆಶ್ರಯದಲ್ಲಿ ಕೆ.ಆರ್.ಪೇಟೆ ತಾಲ್ಲೂಕಿನ ಕಸಬಾ ಹೋಬಳಿಯ ಕರೋಟಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಉಚಿತವಾಗಿ ಸಮವಸ್ತ್ರ ( ಟ್ರ್ಯಾಕ್ ಸೂಟ್ ) ವಿತರಿಸಲಾಯಿತು.

ಉಚಿತ ಸಮವಸ್ತ್ರ ವಿತರಿಸುತ್ತಿರುವ ಈರೇಗೌಡರ ಶೈಕ್ಷಣಿಕ ಕಾರ್ಯವನ್ನು ಶ್ಲಾಘಿಸಿ ಮಾತನಾಡಿದ ಶಾಲಾ ಮುಖ್ಯ ಶಿಕ್ಷಕ ಡಿ.ಮಂಜೇಗೌಡ ನಮ್ಮ ಸಮಾಜದಲ್ಲಿ ನೊಂದು-ಬೆಂದು ಸೋತು- ಸವೆದು ಹೋದ ಎಲ್ಲಾ ಸಮಾಜದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂದು, ಅವರನ್ನು ಶಿಕ್ಷಣವಂತರನ್ನಾಗಿ, ಹೊಸ ಸಮಾಜದ ನಿರ್ಮಾಣಕ್ಕಾಗಿ, ಸರ್ಕಾರ ಶ್ರಮವಹಿಸುತ್ತಿದೆ ಹಾಗೂ ದೇಶದ ಉತ್ತಮ ಸತøಜೆಯನ್ನಾಗಿ ಮಾಡುವ ಮಹದಾಸೆಯಿಂದ ಹುಟ್ಟಿಕೊಂಡಿರುವ ಸಂದರ್ಭದಲ್ಲಿ ಸರ್ಕಾರಿ ಶಾಲೆ ಎಂಬ ತಾತ್ಸಾರ ಪೋಷಕರಲ್ಲಿ ಮಾತ್ರ ಇರಬಾರದು. ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳು ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚು ಹೊತ್ತು ನೀಡುತ್ತಿದ್ದಾರೆ.ಮಾಡುವ ಕೆಲಸವನ್ನು ಎಲ್ಲರೂ ಒಗ್ಗೂಡಿ ಮಾಡಬೇಕು. ಸರ್ಕಾರ ನೀಡುವ ಸವಲತ್ತುಗಳ ಜೊತೆಯಲ್ಲಿ ಗ್ರಾಮಸ್ಥರು, ಹಳೆಯ ವಿದ್ಯಾರ್ಥಿಗಳು, ಪೋಷಕರು, ಸಮಾಜ ಸೇವಕರು,ಈರೇಗೌಡರಂತಹ ದಾನಿಗಳು ಜೊತೆಗೂಡಿದಾಗ ಸರ್ಕಾರಿ ಶಾಲೆಗಳು ಉತ್ತಮವಾಗಿ ಮಕ್ಕಳ ಭವಿಷ್ಯ ಉಜ್ವಲಗೊಳ್ಳಲು ಸಹಕಾರಿ ಹಾಗುತ್ತವೆ ಎಂದು ಹೇಳಿದರು.

ಮಕ್ಕಳಿಗೆ ಸಮುದ್ರ ವಿತರಿಸಿ ಮಾತನಾಡಿದ ಬಿಕನಹಳ್ಳಿ ಈರೇಗೌಡ ಶಿಕ್ಷಣವು ಮನುಷ್ಯನಿಗೆ ಮನುಷ್ಯತ್ವವನ್ನು, ಮಾನವೀಯತೆಯ ಗುಣ-ಮೌಲ್ಯ ಗಳನ್ನು ಧಾರೆ ಎರೆಯುತ್ತದೆ. ಅಜ್ಞಾನದಿಂದ -ಸುಜ್ಞಾನದೆಡೆಗೆ, ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ಯುವ ಶಿಕ್ಷಣದ ದಿವ್ಯವಾದ ಹೊಂಬೆಳಕಿನಿಂದ ಸಮಾಜದಲ್ಲಿ ಆದರ್ಶ ವ್ಯಕ್ತಿಗಳಾಗಿ, ರಾಷ್ಟ್ರದ ಸತøಜೆಗಳಾಗಿ ಗುರುತಿಸಿ ಕೊಂಡರೆ, ಸರ್ವೋದಯದ, ಸರ್ವತೋ ಮುಖದ ವ್ಯಕ್ತಿತ್ವದ ವೈಶಾಲ್ಯತೆಯನ್ನು ಪ್ರಬುದ್ಧ ಗೊಳಿಸಬಹುದು ಎಂಬ ಮನೋಭಾವನೆಯಿಂದ ನನ್ನ ಕೈಲಾದ ಅಳಿಲು ಸೇವೆ ಸಲ್ಲಿಸಿದ್ದೇನೆ ಎಂದರು.

ಈ ಸಂದರ್ಭದಲ್ಲಿ ಶಿಕ್ಷಣ ಸಂಯೋಜಕರ ಹರೀಶ್, ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಶೇಖರ್,ಹಿರಿಯ ಮುಖಂಡ ಹುಚ್ಚೇಗೌಡ,ಶಿಕ್ಷಣ ಸಂಪನ್ಮೂಲ ವ್ಯಕ್ತಿಗಳಾದ ಧನೇಂದ್ರ ಗೌಡ ಅಂಗನವಾಡಿ ಕಾರ್ಯಕರ್ತೆ ಜ್ಯೋತಿ ಕುಮಾರ್, ಯೋಗೇಶ್ ಸೇರಿದಂತೆ ಶಾಲಾ ವಿದ್ಯಾರ್ಥಿಗಳಿದ್ದರು.

Related Articles

Leave a Reply

Your email address will not be published. Required fields are marked *

Back to top button