
ಮಳವಳ್ಳಿ: ಸಭೆಗೆ ಹಾಜರಾಗದ ನಿರ್ಮಿತಿ ಕೇಂದ್ರ ಅಧಿಕಾರಿರವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ತಹಶಿಲ್ದಾರ ಲೋಕೇಶ ತಿಳಿಸಿದರು.
ಮಳವಳ್ಳಿ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ತಾಲ್ಲೂಕು ಆಡಳಿತದವತಿಯಿಂದ ನಡೆದ ಎಸ್ ಸಿ/ ಎಸ್ ಟಿ ಕುಂದುಕೊರತೆ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ ಎರಡೂವರೆ ವರ್ಷದಿಂದ ಕುಂದುಕೊರತೆ ಸಭೆ ನಡೆದಿಲ್ಲ ನಾನು ಬಂದ ಮೇಲೆ ಸಭೆ ಕರೆದಿದ್ದು, ದಲಿತ ಸಮುದಾಯ ಜನರಿಗೆ ಅನುಕೂಲವಾಗುವ ದೃಷ್ಠಿಯಿಂದ ಸಮಸ್ಯೆ ತಿಳಿದುಕೊಂಡು ಬಗೆಹರಿಸುವ ನಿಟ್ಟಿನಲ್ಲಿ ಸಭೆಯನ್ನು ಕರೆದಿದ್ದು, ಗೊಂದಲವನ್ನು ಮಾಡಿಕೊಳ್ಳದೆ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದರು.
ಈ ವೇಳೆ ತಾ.ಪಂ ಮಾಜಿ ಉಪಾಧ್ಯಕ್ಷ ಹಾಗೂ ದಲಿತ ಮುಖಂಡ ಮಾರ್ಕಾಲು ಮಾಧು ಮಾತನಾಡಿ, ಸಮಸ್ಯೆಯನ್ನು ಕೇಳುವುದು ಮಾತ್ರ ಅದನ್ನು ಬಗೆಹರಿಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು. ಮುಂದಿನ ಸಭೆಗೆ ಎಲ್ಲಾ ಇಲಾಖೆಯ ಅಧಿಕಾರಿಗಳು ಕಡ್ಡಾಯವಾಗಿ ಹಾಜರು ಆಗಬೇಕು, ಗ್ರಾಮಗಳಲ್ಲಿ ಅದೂ ದಲಿತರ ಕಾಲೋನಿಗಳಲ್ಲಿ ಮದ್ಯದ ಹಾವಳಿ ಹೆಚ್ಚಾಗಿದ್ದು, ಪ್ರತಿ ಪೆಟ್ಟಿಅಂಗಡಿಗಳಲ್ಲೂ ಇದೆ ಇದಕ್ಕೆ ಅಬಕಾರಿ ಇಲಾಖೆಯೇ ಕಾರಣ ಎಂದು ಆರೋಪಿಸಿದರು.
ಸಭೆಯಲ್ಲಿ ತಹಶಿಲ್ದಾರ್ ಲೋಕೇಶ್, ಸಮಾಜಕಲ್ಯಾಣಾಧಿಕಾರಿ ಸಂತೋಷಕುಮಾರ್, ಪುರಸಭಾಧ್ಯಕ್ಷ ಪುಟ್ಟಸ್ವಾಮಿ, ತಾ.ಪಂ ಇಒ ಶ್ರೀನಿವಾಸ್, ಬಿಇಒ ಉಮಾ, ಹಲಗೂರು ಸರ್ಕಲ್ ಇನ್ಸ್ ಪೆಕ್ಟರ್ ಶ್ರೀಧರ್, ಇನ್ಸ್ ಪೆಕ್ಟರ್ ರವಿಕುಮಾರ, ಮಹೇಶ್, ಪುರಸಭೆ ಮುಖ್ಯಾಧಿಕಾರಿ ನಾಗರತ್ನ, ಡಾ. ವೀರಭದ್ರಪ್ಪ, ಸೇರಿದಂತೆ ಹಲವರು ಇದ್ದರು.



