ಕ್ರೈಂ
Trending

ಡೆತ್‌ನೋಟ್ ಬರೆದಿಟ್ಟು ಮಹಿಳಾ ಟೆಕ್ಕಿ - ತಾಯಿ ಸಾವು

ಖಿನ್ನತೆಯಿಂದ ಬಳಲುತ್ತಿದ್ದ ಮಹಿಳಾ ಟೆಕ್ಕಿ ಹಾಗೂ ಆಕೆಯ ತಾಯಿ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆೆ ಮಾಡಿಕೊಂಡಿರುವ ಘಟನೆ ವೈಟ್‌ಫೀಲ್ಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ನಡೆದಿದೆ.

ನಾಗಗೊಂಡನಹಳ್ಳಿ ನಿವಾಸಿ ಶ್ರೀಜಾರೆಡ್ಡಿ (25) ಅವರ ತಾಯಿ ರಚಿತಾ ರೆಡ್ಡಿ(48) ಆತ್ಮಹತ್ಯೆೆ ಮಾಡಿಕೊಂಡವರು.

ಖಾಸಗಿ ಕಂಪನಿಯಲ್ಲಿ ಎಂಜಿನಿಯರ್ ಆಗಿರುವ ಶ್ರೀಧರ್ ರೆಡ್ಡಿ ತಮ್ಮ ಪತ್ನಿ ರಚಿತಾ ರೆಡ್ಡಿ, ಪುತ್ರಿ ಶ್ರೀಜಾ ಜತೆ ನಾಗಗೊಂಡನಹಳ್ಳಿಯ ಸ್ವಂತ ಮನೆಯಲ್ಲಿ ವಾಸಿಸುತ್ತಿದ್ದರು. ಎಂಜಿನಿಯರಿಂಗ್ ವ್ಯಾಸಂಗ ಮಾಡಿರುವ ಶ್ರೀಜಾರೆಡ್ಡಿ ಖಾಸಗಿ ಕಂಪನಿಯಲ್ಲಿ ಡೇಟಾ ಅನಾಲಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ರಚಿತಾರೆಡ್ಡಿ ಗೃಹಿಣಿಯಾಗಿದ್ದರು.

ಸೋಮವಾರ ಬೆಳಗ್ಗೆೆ ಎಂದಿನಂತೆ ಶ್ರೀಧರ್ ರೆಡ್ಡಿ ಕೆಲಸಕ್ಕೆೆ ಹೋಗಿದ್ದರು. ರಚಿತಾ ರೆಡ್ಡಿ ಹಾಗೂ ಶ್ರೀಜಾ ಮನೆಯಲ್ಲಿ ಇದ್ದರು. ಸೋಮವಾರ (ಜು.14) ಮಧ್ಯಾಹ್ನ 12 ಗಂಟೆ ಸುಮಾರಿಗೆ ಪತ್ನಿ ಹಾಗೂ ಮಗಳು ಕರೆ ಸ್ವೀಕರಿಸದಿದ್ದಕ್ಕೆೆ ಆತಂಕಗೊಂಡ ಶ್ರೀಧರ್ ರೆಡ್ಡಿ, ಅಕ್ಕ-ಪಕ್ಕದ ಮನೆಯವರಿಗೆ ತಿಳಿಸಿದ್ದು, ಅವರು ಮನೆ ಬಳಿ ಹೋದಾಗ ಆತ್ಮಹತ್ಯೆೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಮನೆಯ ಬಾಗಿಲು ಒಡೆದು ಒಳ ಪ್ರವೇಶಿಸಿದಾಗ ಕೊಠಡಿಯಲ್ಲಿ ತಾಯಿ-ಮಗಳಿಬ್ಬರು ನೇಣುಬಿಗಿದುಕೊಂಡು ಪ್ರತ್ಯೇಕವಾಗಿ ಆತ್ಮಹತ್ಯೆೆ ಮಾಡಿಕೊಂಡಿರುವುದು ಕಂಡು ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

Related Articles

Leave a Reply

Your email address will not be published. Required fields are marked *

Back to top button