ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಶಾಂತ ಕುಮಾರ್ ರವರಿಂದ ಸಹಾಯಹಸ್ತ
ದೇವನಹಳ್ಳಿ: ಪಟ್ಟಣದ ಲಯನ್ಸ್ ಕ್ಲಬ್ ವತಿಯಿಂದ ಸುಮಾರು ವರ್ಷಗಳಿಂದ ಅಂಧರಿಗೆ ಮತ್ತು ಕಣ್ಣಿನ ಸಮಸ್ಯೆ ಹೊಂದಿರುವವರಿಗೆ ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿಸಲಾಗುತ್ತಿದ್ದು, ಚಿಕಿತ್ಸೆಗೆ ಅವಶ್ಯಕವಾದ ಸಹಾಯಧನವನ್ನು ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಸೇವಾಕಾಂಕ್ಷಿ ಹಾಗೂ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರು ಶಾಂತಕುಮಾರ್ ರವರು ನೀಡಿದ್ದಾರೆ.
ದೇವನಹಳ್ಳಿ ಪಟ್ಟಣದ ಲಯನ್ಸ್ ಸಂಸ್ಥೆಯ ವತಿಯಿಂದ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಹಾಗೂ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಸೇವಾಕಾಂಕ್ಷಿ ಶಾಂತಕುಮಾರ್ ಅವರನ್ನು ಸನ್ಮಾನಿಸಿ ಕೃತಜ್ಞತೆಯನ್ನು ಸಲ್ಲಿಸಲಾಯಿತು.
ಲಯನ್ಸ್ ಸಂಸ್ಥೆಯ ಅಧ್ಯಕ್ಷ ನಾರಾಯಣ್ ಆಚಾರ್ ರವರು ಮಾತನಾಡಿ ನಮ್ಮ ಸಂಸ್ಥೆಯ ಪರವಾಗಿ ಹೃದಯ ಚಿಕಿತ್ಸೆ ಹಾಗೂ ಅಂಗವಿಕಲರಿಗೂ ಸಹಾಯ ಮಾಡಿದರು ಇಂತಹ ಸೇವಾ ಮನೋಭಾವ ಹೊಂದಿರುವವರಿಗೆ ಇನ್ನಷ್ಟು ಒಳ್ಳೆಯದಾಗಲಿ ಮತ್ತು ಇಂತಹ ಸೇವಾಕಾರ್ಯಗಳು ಇನ್ನೂ ಹೆಚ್ಚಾಗಿ ಮುಂದೆಯೂ ಮಾಡಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಎಸ್. ಆರ್ .ರವಿಕುಮಾರ್ ,ಬಚ್ಚೇಗೌಡರು, ನಿವೃತ್ತ ಶಿಕ್ಷಕ ಶ್ರೀ ರಾಮಯ್ಯ ಬಿಕೆ ನಾರಾಯಣಸ್ವಾಮಿ ಶ್ರೇಯಸ್ ಗುರುರಾಜ್ ಸೇರಿದಂತೆ ಲಯನ್ ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು.



