ಜನವರಿ 16 ರಿಂದ್ದ ಚಿಕ್ಕಅಂಕನಹಳ್ಳಿ ಶ್ರೀ ನಂದಿ ಬಸವೇಶ್ವರ ಸ್ವಾಮಿಯ ಭಾರಿ ದನಗಳ ಜಾತ್ರಾಮಹೋತ್ಸವ

ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಹೂತಗರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕ ಅಂಕನಹಳ್ಳಿ ಗ್ರಾಮದಲ್ಲಿ ನೆಲೆಸಿರುವ ಉದ್ಬವ ಮೂರ್ತಿ ಶ್ರೀ ನಂದಿ ಬಸವೇಶ್ವರ ಸ್ವಾಮಿಯ ಜಾತ್ರಾಮಹೋತ್ಸವವು ವಿಜೃಂಭಣೆಯಿಂದ ಪ್ರತಿ ವರ್ಷದ ಸಂಕ್ರಾಂತಿ ಹಬ್ಬದ ಮಾರನೇ ದಿಂದ ಪ್ರಾರಂಭವಾಗಿ ಹತ್ತು ದಿನಗಳ ವರಗೆ ವಿಜೃಭಣೆಯಿಂದ ನಡೆಯಲಿದೆ. ಈ ದೇವಸ್ಥಾನಕ್ಕೆ ಸುಮಾರು 800 ವರ್ಷಗಳ ಇತಿಹಾಸ ಹೊಂದಿದೆ, ಈ ದೇವಸ್ಥಾನದ ಅಕ್ಕ ಪಕ್ಕದ ಗ್ರಾಮಗಳ ಜನರು ಭಕ್ತರುಗಳು ಪ್ರತಿ ಕಾರ್ತಿಕ ಸೋಮವಾರಗಳಂದು ಇಲ್ಲಿಗೆ ಬಂದು ಈ ಸ್ವಾಮಿಗೆ ವಿಶೇಷ ಪೂಜೆ ಅಭಿಷೇಕ ಮಾಡಿಸುತ್ತಾರೆ ಸ್ವಾಮಿಗೆ ಅಭಿಷೇಕ ಮಾಡಿದ ತಿರ್ಥಪ್ರಸಾದವನ್ನು ಜಾನುವಾರುಗಳಿಗೆ ಪ್ರೋಕ್ಷಣೆ ಮಾಡಿದರೇ ರೋಗ ರುಜಿಗಳನ್ನು ವಾಸಿಯಾಗುತ್ತವೆ ಎಂಬ ನಂಬಿಕೆ ಇದೆ.ಈ ಜಾತ್ರೆಗೆ ಮಂಡ್ಯ ಜಿಲ್ಲೆಯ ಜೊತೆಗೆ ಅಕ್ಕಪಕ್ಕದ ಜಿಲ್ಲೆಗಳಿಂದ ಜಾನುವಾರುಗಳನ್ನು ಮಾರಾಟ ಮಾಡಲು ಮತ್ತು ಕೊಂಡುಕೊಳ್ಳಲು ರೈತರು ಆಗಮಿಸುತ್ತಾರೆ,ಗ್ರಾಮೀಣ ಸಂಸ್ಕೃತಿ ಪರಂಪರೆ ಇರುವ ಈ ಜಾತ್ರೆಗೆ ಹಳ್ಳಿಕಾರ್ ತಳಿಯ ಜಾನುವಾರುಗಳು ಹೆಚ್ಚು ಹೆಚ್ಚು ಸೇರುತ್ತವೆ ,ಪ್ರತಿ ವರ್ಷದಿಂದ ವರ್ಷಕೆ ಜಾತ್ರೆ ಕಳೆ ಗುಂದುತ್ತಿದೆ ದನಗಳನ್ನು ಸಾಕುವವರ ಸಂಖ್ಯೆ ಕ್ಷೀಣಿಸುತ್ತಿದೆ ಉಳುಮೆಗೆ ಯಂತ್ರೋಪಕರಣ ಬಳಕೆ ಮಾಡುತ್ತಿರುವ ಪರಿಣಾಮ ರಾಸುಗಳ ಸಂಖ್ಯೆ ಕ್ಷೀಣಿಸಿ ಭಾರಿ ದನಗಳ ಜಾತ್ರೆ ತನ್ನ ಹೊಳಪನ್ನು ಕಳೆದು ಕೊಳ್ಳುತ್ತಿದೆ, ಈ ದೇವಸ್ಥಾನವು ಮುಜಾರಾಯಿ ಇಲಾಖೆಗೆ ಸೇರಿದ್ದು ಸುತ್ತ ಸುಮಾರು 100 ಎಕರೆ ಗಿಂತ ಹೆಚ್ಚು ವಿಶಲವಾದ ಸ್ಥಳವಿದ್ದು ಉತ್ತಮವಾದ ರಸ್ತೆ , ಜಾನುವಾರುಗಳಿಗೆ ಕುಡಿಯುವ ನೀರು,ನೇರಳಿನ ವ್ಯವಸ್ಥೆ ವಿದ್ಯುತ್ ವ್ಯವಸ್ಥೆ,ತಾತ್ಕಾಲಿಕ ಆಸ್ಪತ್ರೆ ,ಪಶು ಆಸ್ಪತ್ರೆ ,ಪೊಲೀಸ್ ಬಂದು ಬಸ್ತು ವ್ಯವಸ್ಥೆಯನ್ನು ತಾಲ್ಲೂಕು ಆಡಳಿತ ವತಿಯಿಂದ ಹಾಗೂ ಹೂತಗೆರೆ ಗ್ರಾಮ ಪಂಚಾಯಿತಿ ವತಿಯಿಂದ ಬೇಕಾದ ಎಲ್ಲಾ ಸಕಲ ಸಿದ್ದತೆ ಮತ್ತು ವ್ಯವಸ್ಥೆಯನ್ನು ಮಾಡಿಕೊಂಡಿದೆ, ಮೊದಲು ಜಾನುವಾರಗಳ ಸುಂಕವನ್ನು ಮಾಲೀಕರೆ ಭರಿಸಬೇಕಿತ್ತು ಆದರೆ ಇವಾಗ ಕಳೆದ ಎರಡು ವರ್ಷಗಳಿಂದ ಸ್ಥಳೀಯ ಶಾಸಕರಾದ ಕೆಎಂ ಉದಯ್ ರವರು ತಮ್ಮ ಟ್ರಸ್ಟ್ ವತಿಯಿಂದ ಬರಿಸುತ್ತಿದ್ದಾರೆ ,ಅಧಿಕಾರಿಗಳ ಜೊತೆ ಸಭೆ ನಡೆಸಿ ಜಾತ್ರೆಗೆ ಬೇಕಾದ ಸಕಲ ಸಿದ್ದತೆ ವ್ಯವಸ್ಥೆ ಮಾಡಿಕೊಳ್ಳಲು ಸೂಚನೆ ನೀಡಿರುತ್ತಾರೆ .ಈ ಭಾರಿ ವಿಶೇಷವೆನ್ನೆಂದರೆ ಹಳ್ಳಿಕಾರ್ ತಳಿಯನ್ನು ಉಳಿಸಿ ಬೆಳೆಸುತ್ತಿರುವ ಬಿಗ್ ಬಾಸ್ ಖ್ಯಾತಿಯ ವರ್ತರೂ ಸಂತೋಷ್ ದಿನಾಂಕ ಜನವರಿ 18 ರ ಭಾನುವಾರ ಭೇಟಿ ನೀಡುತ್ತಿದ್ದಾರೆ ,ಜಾನುವಾರು ಮಾಲೀಕರು ತಮ್ಮ ತಮ್ಮ ರಾಸುಗಳಿಗೆ ಶೃಂಗಾರ ಮಾಡಿಕೊಂಡು ನಾದಸ್ವರ ,ತಮಟೆ, ಡಿಜೆ ನೃತ್ಯ ದೊಂದಿಗೆ ಮೆರವಣಿಗೆ ಮೂಲಕ ತೆರಳಿ ಶ್ರೀ ನಂದಿ ಬಸವೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸುತ್ತಾರೆ ಈ ಜಾತ್ರೆ ಅಂಗಡಿ ಮುಂಗಟ್ಟುಗಳು ಸೇರುತ್ತವೆ ದನಗಳ ಜಾತ್ರೆ ಮುಗಿದ ನಂತರ ಸುತ್ತಮುತ್ತಲಿನ ಜನರು ತಂಡೋಪ ತಂಡವಾಗಿ ಬಂದು ಪೂಜೆ ಸಲ್ಲಿಸುವ ವಾಡಿಕೆ ಇದೆ.

ಶ್ರೀ ನಂದಿ ಬಸವೇಶ್ವರ ದೇವಾಲಯವು ಸುಮಾರು 800 ವರ್ಷಗಳ ಇತಿಹಾಸ ಹೊಂದಿದ್ದು ರಾಸುಗಳ ಆರೋಗ್ಯ ವೃದ್ಧಿಗಾಗಿ ಮೈಸೂರು ಅರಸರಿಂದ ನಿರ್ಮಿಸ ಲ್ಪಟ್ಟಿದ್ದು ಈ ದೇವಾಲಯದಲ್ಲಿ ಪ್ರತಿ ವರ್ಷ ಮಕರ ಸಂಕ್ರಾಂತಿ ಜಾತ್ರಾ ಮಹೋತ್ಸವ ಶಿವರಾತ್ರಿ ಯುಗಾದಿ ಶ್ರೀ ರಾಮನವಮಿ ಬಸವ ಜಯಂತಿ ಗಣಪತಿ ಹಬ್ಬ ರಥಸಪ್ತಮಿ ಧನುರ್ಮಾಸ ಆಯುಧ ಪೂಜೆ ವಿಜಯದಶಮಿ ಮತ್ತು ನವರಾತ್ರಿಯಲ್ಲಿ ವಿಶೇಷ ಪೂಜೆ ಮತ್ತು ಉತ್ಸವಗಳು ನಡೆಯುತ್ತವೆ ವಿಶೇಷ ಅಲಂಕಾರಗಳಿಂದ ಶ್ರೀ ನಂದಿ ವಿಗ್ರಹವನ್ನು ಅಲಂಕರಿಸಿ ಪೂಜೆ ನೆರವೇರಿಸಲಾಗುತ್ತದೆ ಈ ದೇವಸ್ಥಾನಕ್ಕೆ ಬಂದು ಪೂಜೆ ಮಾಡಿಸಿ ಅಭಿಷೇಕ ತೀರ್ಥ ಪ್ರಸಾದವನ್ನು ರಾಸುಗಳಿಗೆ ಪ್ರೋಕ್ಷಣೆ ಮಾಡಿದರೆ ರಾಸುಗಳ ಎಲ್ಲಾ ರೋಗರು ದಿನಗಳು ಪರಿಹಾರವಾಗುತವಪ್ರತಿವರ್ಷದಂತೆ ಈ ಬಾರಿಯೂ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯಲಿದೆ ಇದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿದ್ದು ,ಹತ್ತು ದಿನಗಳು ಸ್ವಾಮಿಗೆ ವಿಶೇಷ ಅಲಂಕಾರ ಪೂಜಾ ಕೈಂಕರಗಳು ನಡೆಯಲಿವೆ ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ಜಾತ್ರೆಯನ್ನು ಯಶಸ್ವಿಗೊಳಿಸಲು ಕೋರಿದ್ದಾರೆ
ಶ್ರೀ ಕಲ್ಲೇಶ್ ಕುಮಾರ್ ಪ್ರಧಾನ ಅರ್ಚಕರು ಶ್ರೀ ನಂದಿ ಬಸವೇಶ್ವರ ಸ್ವಾಮಿ ಚಿಕ್ಕ ಅಂಕನಹಳ್ಳಿ
ವರದಿ ಜನಾರ್ಧನ ಹೂತಗರೆ



