ಇತ್ತೀಚಿನ ಸುದ್ದಿ
Trending

ಜೀವನದಲ್ಲಿ ಶಿಸ್ತು, ನಾಯಕತ್ವ ಗುಣ ಬೆಳೆಸಲು ಕ್ರೀಡೆ ಸಹಕಾರಿ ಬಿಇಓ ಧನಂಜಯ

ಜೀವನದಲ್ಲಿ ಆರೋಗ್ಯಕರವಾಗಿರಬೇಕಾದರೆ,ಜೀವನದಲ್ಲಿ ಶಿಸ್ತನ್ನು ಬೆಳೆಸಿಕೊಳ್ಳಬೇಕಾದರೆ ಹಾಗೂ ನಾಯಕತ್ವ ಗುಣಗಳನ್ನು ಬೆಳಸಿಕೊಳ್ಳಲು ಕ್ರೀಡೆಯೂ ಪ್ರಮುಖ ಪಾತ್ರ ವಹಿಸುತ್ತದೆ ಆ ನಿಟ್ಟಿನಲ್ಲಿ ಮಕ್ಕಳು ಓದಿನ ಜೊತೆಗೆ ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮದ್ದೂರು ತಾಲೂಕು ಕ್ಷೇತ್ರಾ ಶಿಕ್ಷಣಧಿಕಾರಿ ಧನಂಜಯರವರು ಎಂದು ತಿಳಿಸಿದರು.

ಕೆ.ಎಂ ದೊಡ್ಡಿ ಸಮೀಪದ ಮೇಣಸಗೆರೆ ಗ್ರಾಮ ಜ್ಞಾನಮುದ್ರ ವಿದ್ಯಾಸಂಸ್ತೆಯಲ್ಲಿ ಸಿ.ಎ ಕೆರೆ ಹೋಬಳಿ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.

ಮಕ್ಕಳು ಶಾಲೆಯಲ್ಲಿ ಕಲಿಕೆಯ ಜೊತೆ ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸಬೇಕು ಮಕ್ಕಳಲ್ಲಿ ವಿದ್ಯೆಯ ಜೊತೆಗೆ ಹಲವು ಕ್ರೀಡಾ ಕೌಶಲ್ಯಗಳನ್ನು ಹೊಂದಿರುತ್ತಾರೆ ಅಂತಹ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಅವರನ್ನ ಪ್ರೋತ್ಸಾಹಿಸುವ ಕೆಲಸವನ್ನು ಶಿಕ್ಷಕರು ಹಾಗೂ ಪೋಷಕರು ಮಾಡಬೇಕು, ಕ್ರೀಡೆಯಲ್ಲಿ ಪಾಲ್ಗೊಳ್ಳುವ ಮಕ್ಕಳು ಸೋಲು ಗೆಲವುನ್ನ ಸಮಾನ ಸ್ವೀಕರಿಸುವ ಗುಣಗಳನ್ನು ಬೆಳೆಸಿಕೊಳ್ಳಬೇಕು,ಕ್ರೀಡೆಯಲ್ಲಿ ಸಾಧನೆ ಮಾಡಲು ಕಠಿಣವಾದ ಶ್ರಮವನ್ನು ಹಾಕಿ ಉತ್ತಮವಾಗಿ ಅಭ್ಯಾಸವನ್ನು ಕೈಗೊಂಡು ಮುನ್ನಡೇಬೇಕು, ಸರ್ಕಾರ ಕ್ರೀಡಾ ಚಟುವಟಿಕೆಯಲ್ಲಿ ಸಾಧನೆ ಮಾಡಲು ಸಾಕಷ್ಟು ಯೋಜನೆಗಳನ್ನು ರೂಪಿಸಿದ್ದಾರೆ ಅವುಗಳನ್ನು ಸದ್ಬಳಕೆ ಮಾಡಿಕೊಂಡು ಮುನ್ನುಗ್ಗಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ರಾಷ್ಟ್ರೀಯ ಈಜುಪಟು ಡಾ.ಉತ್ತರ ರಮೇಶ್ ರವರು ಮಾತನಾಡಿ ಮಕ್ಕಳಿಗೆ ವಿದ್ಯೆಯ ಜೊತೆಗೆ ಕ್ರೀಡೆಯನ್ನು ಕಲಿಸಬೇಕು,ಮಕ್ಕಳಲ್ಲಿರುವ ಕೌಶಲ್ಯಗಳನ್ನು ಗುರುತಿಸಿ ಅವರಿಗೆ ಉತ್ತಮ ತರಬೇತಿಯನ್ನು ನೀಡಿದರೆ ಗ್ರಾಮೀಣ ಭಾಗದ ಶಾಲಾ ಮಕ್ಕಳು ಸಹ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈಯಲು ಸಹಕಾರಿಯಾಗುತ್ತದೆ .

ನಾನು ಮೂರು ವರ್ಷಗಳಲಿದ್ದ ಸಂದರ್ಭದಲ್ಲಿ ನನ್ನ ಪೋಷಕರು ನನ್ನನ್ನು ಈಜು ಕಲಿಯಲು ತರಬೇತಿ ನೀಡಿ ನನ್ನ ನ್ನು ಈಜುಪಟುವಾಗಿ ರೂಪಿಸಿ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಲು ಸಹಕಾರಿಯಾಗಿದ್ದಾರೆ ಅದುದ್ದರಿಂದ ಶಾಲಾ ಶೈಕ್ಷಣಿಕ ವರ್ಷಗಲ್ಲಿ ಆಯೋಜಿಸುವ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಕ್ರೀಡೆಗಳಲ್ಲಿ ಮುನ್ನಗ್ಗಬೇಕು ಎಂದು ತಿಳಿಸಿದರು.
ಇತ್ತೀಚೆಗೆ ನಡೆದ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ 14 ವರ್ಷದ ಬಾಲಕ ಇಡೀ ವಿಶ್ವವೇ ತನ್ನತ್ತ ನೋಡುವ ಹಾಗೆ ಮಾಡಿದ್ದು ಇಂದಿನ ಮಕ್ಕಳಿಗೆ ಸ್ಫೂರ್ತಿಯಾಗಿದ್ದಾರೆ ಆ ನಿಟ್ಟಿನಲ್ಲಿ ಚಿಕ್ಕ ವಯಸ್ಸಿನಲ್ಲಿ ಕ್ರೀಡೆಯಲ್ಲಿ ತೊಡಗಿಸಿಕೊಂಡು ಸಾಧನೆಯನ್ನು ಮಾಡಬೇಕು ಎಂದು ತಿಳಿಸಿದರು.

ಇದೆ ಸಂದರ್ಭದಲ್ಲಿ ರಾಷ್ಟ್ರೀಯ ಕ್ರೀಡಾಪಟು ಡಾ.ಉತ್ತರಸುರೇಶ್, ಬಿಇಓ ಧನಂಜಯರವರನ್ನು ಕ್ರೀಡಾಕೂಟದ ಪರವಾಗಿ ಅಭಿನಂದಸಿ ಸನ್ಮಾನಿಸಿದರು.

ಇದೆ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಪಾರ್ವತಮ್ಮ ,ಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ಶಿವಮ್ಮ ಶಿವಕುಮಾರ್, ಟ್ರಸ್ಟಿಗಳಾದ ತೇಜಸ್ವಿನಿತಿಪ್ಪೂರೇಗೌಡ,ಪ್ರಭಾಸುರೇಶ್, ನಿವೃತ್ತ ಪ್ರಾಧ್ಯಾಪಕ ಬಿ.ಎಸ್.ಬೋರೇಗೌಡ, ಶಿಕ್ಷಣ ಸಂಯೋಜಕ ರಮೇಶ್,ಸಮೂಹ ಸಂಪನ್ಮೂಲ ವ್ಯಕ್ತಿ ನಂದೀಶ್,ಬೋರಯ್ಯ,ದೈಹಿಕ ಶಿಕ್ಷಕ ಸಂಘದ ಶಿವಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು..

Related Articles

Leave a Reply

Your email address will not be published. Required fields are marked *

Back to top button