ರಾಜ್ಯ
Trending

ಜೆಡಿಎಸ್ ಗೆ ಮತ್ತಷ್ಟು ಬಲ ತುಂಬಲು ಮುಂದಾದ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ "ನಿಖಿಲ್ ಕುಮಾರಸ್ವಾಮಿ"

ಕುಣಿಗಲ್ : ಮೊದಲನೇ ದಿನದ ಪ್ರವಾಸ ಪರಮಪೂಜ್ಯ ಜಗದ್ಗುರುಗಳಾದ ಶ್ರೀ ಡಾ ” ಶಿವಕುಮಾರ ಮಹಾಸ್ವಾಮಿಜಿಗಳ ಗದ್ದುಗೆಯ ದಿವ್ಯದರ್ಶನ ಪಡೆದು ಪರಮಪೂಜ್ಯ ಜಗದ್ಗುರುಗಳಾದ ಶ್ರೀ ಸಿದ್ದಲಿಂಗ ಮಹಾಸ್ವಾಮಿಜಿಯವರ ಆಶೀರ್ವಾದ ಪಡೆದು ರಾಜ್ಯ ಪ್ರವಾಸ ಹಾಗೂ ಮಿಸ್ ಕಾಲ್ ಸದಸ್ಯತ್ವ ಅಭಿಯಾನಕ್ಕೆ ಜೆಡಿಎಸ್ ನ ಯುವ ಘಟಕ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿಯವರು ದೀಪ ಬೆಳಗುವುದರ ಮುಖೇನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಪಟ್ಟಣದ ನಕ್ಷತ್ರ ಪ್ಯಾಲೇಸ್ ನಲ್ಲಿ ಆಯೋಜಿಸಲಾಗಿದ್ದ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿದ ಜೆಡಿಎಸ್ ಪಕ್ಷದ ಯುವ ನಾಯಕ “ನಿಖಿಲ್ ಕುಮಾರಸ್ವಾಮಿ ” ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಇಂದಿನಿಂದ ಪಕ್ಷದ ಸಂಘಟನೆಯ ದೃಷ್ಟಿಯಿಂದ ನಿರಂತರವಾಗಿ 58 ದಿನಗಳ ಕಾಲ ಇಡಿ ರಾಜ್ಯಾದ್ಯಂತ ಬಹುತೇಕ ಜಿಲ್ಲೆಗಳಿಗೆ ಹಾಗೂ ತಾಲೂಕುಗಳಿಗೆ ಮೊದಲನೇ ಹಂತದಲ್ಲಿ ಪ್ರವಾಸವನ್ನು ಕೈಗೊಂಡಿದ್ದೇನೆ, ಎಲ್ಲಾ ನಮ್ಮ ಪಕ್ಷದ ಹಿರಿಯ ಮುಖಂಡರುಗಳು ಹಾಗೂ ಕಾರ್ಯಕರ್ತರನ್ನು ವಿಶ್ವಾಸವಾಗಿ ತೆಗೆದುಕೊಂಡು ಜಾತ್ಯಾತೀತ ಜನತಾದಳ ಪಕ್ಷವನ್ನು ಮತ್ತೆ ಗಟ್ಟಿಗೊಳಿಸುವುದರ ಮೂಲಕ ಎಚ್ ಡಿ ಕುಮಾರಸ್ವಾಮಿ ಅವರನ್ನು 2028ಕ್ಕೆ ಮತ್ತೊಮ್ಮೆ ಮುಖ್ಯಮಂತ್ರಿ ಆಗಿ ಮಾಡಬೇಕು ಎನ್ನುವುದೇ ನಮ್ಮ ಪಕ್ಷದ ಮುಖ್ಯ ಉದ್ದೇಶ ಎಂದು ತಿಳಿಸಿದರು.ನಾನು ಬಯಸುವುದು ನನ್ನ ಕಾರ್ಯಕರ್ತರ ಹಾಗೂ ಪಕ್ಷದ ಎಲ್ಲಾ ಮುಖಂಡರ ಒಳ್ಳೆಯ ವಿಶ್ವಾಸ ಹಾಗೂ ಸಂಬಂಧ ಎಂದು ಕಾರ್ಯಕ್ರಮ ಒಂದು ಗಂಟೆಗೆ ಪ್ರಾರಂಭವಾಗಬೇಕಿತ್ತು, ಆದರೆ ಗುಬ್ಬಿಯಿಂದ ಕುಣಿಗಲ್ ಗೆ ಬರಲು ಸ್ವಲ್ಪ ತಡವಾಗಿದ್ದ ಕಾರಣ ನನ್ನ ಎಲ್ಲಾ ಪಕ್ಷದ ಮುಖಂಡರಿಗೆ ಹಾಗೂ ಕಾರ್ಯಕರ್ತರಿಗೆ ಕ್ಷಮೆ ಇರಲಿ, ಜೆಡಿಎಸ್ ಪಕ್ಷದ ಕಾರ್ಯಕರ್ತರು ಬಹಳ ತಾಳ್ಮೆಯಿಂದ ಗೌರವದಿಂದ ನಡೆದುಕೊಂಡಿರುವುದಕ್ಕೆ ನಾನು ಅಭಿನಂದನೆಯನ್ನು ತಿಳಿಸುತ್ತೇನೆ ಎಂದು ಮಾತನಾಡಿದರು.

ಮಾಜಿ ಪ್ರಧಾನಿ ಸನ್ಮಾನ್ಯ ಎಚ್ ಡಿ ದೇವೇಗೌಡರ ಮಾರ್ಗದರ್ಶನದಂತೆ ಜೆಡಿಎಸ್ ಪಕ್ಷವನ್ನು ಮತ್ತಷ್ಟು ಸದೃಢಗೊಳಿಸುವುದರ ಮೂಲಕ ಈಗಿನ ಕೇಂದ್ರ ಮಂತ್ರಿಗಳು ಹಾಗೂ ನನ್ನ ಪೂಜ್ಯ ತಂದೆಯವರಾದ ಎಚ್ ಡಿ ಕುಮಾರಸ್ವಾಮಿ ಯವರನ್ನು ಸಹ ರಾಜ್ಯದಲ್ಲಿ 2028 ಕ್ಕೆ ಮತ್ತೊಮ್ಮೆ ಮುಖ್ಯಮಂತ್ರಿ ಆಗಬೇಕು, ಎನ್ನುವುದೇ ಪಕ್ಷದ ಆಸೆ ಈ ರಾಜ್ಯದಲ್ಲಿ ಮತ್ತೊಮ್ಮೆ ನನ್ನ ತಂದೆಯವರು ಮುಖ್ಯಮಂತ್ರಿಯಾದರೆ ರೈತರ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯ ನೀವೆಲ್ಲರೂ ನನ್ನನ್ನು ಮನೆ ಮಗ ಹಾಗೂ ನಿಮ್ಮ ಅಣ್ಣ ತಮ್ಮ ನಿಮ್ಮಗಳ ಸೇವೆ ಮಾಡಲು ನಿಮ್ಮ ಜೊತೆ ಇರಲು ಅವಕಾಶ ಮಾಡಿಕೊಡಬೇಕು,ಇಂದು ಒಂದು ಲಕ್ಷಕ್ಕೂ ಹೆಚ್ಚು ಡಿಜಿಟಲ್ ನೋಂದಾವಣಿ (ಸದಸ್ಯತ್ವ )ಆಗಿದೆ ಎಂದು ಮಾಹಿತಿ ಬಂದಿದೆ ಎಂದು ಮಾತನಾಡಿದರು.ರಾಜ್ಯದ ಎಲ್ಲಾ ಕ್ಷೇತ್ರಗಳಿಗೂ ಭೇಟಿ ನೀಡಿ ಅಭಿಯಾನ ಕಾರ್ಯಕ್ರಮಗಳನ್ನು ಮಾಡುತ್ತಿದ್ದು ಇದರ ಮೂಲಕ ತಳಮಟ್ಟದಲ್ಲಿ ಈ ಪಕ್ಷದ ಸಂಘಟನೆಯನ್ನು ನಮ್ಮ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಇನ್ನಷ್ಟು ಸದೃಢಗೊಳಿಸಿ ಉತ್ತಮ ಕೆಲಸ ಮಾಡುವ ಉದ್ದೇಶವನ್ನು ನಮ್ಮ ಜೆಡಿಎಸ್ ಪಕ್ಷ ಹೊಂದಿದೆ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ರವಿ ಡಿ ನಾಗರಾಜಯ್ಯನವರು ಮಾತನಾಡಿ ನಾನು ನಂಬಿರುವ ದೇವರೆಂದರೆ ಅದು ನನ್ನ ಮನೆಯ ದೇವರು ಜಾತ್ಯತೀತ ಜನತಾದಳ 2028ಕ್ಕೆ ಎಚ್ ಡಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಯನ್ನಾಗಿ ಮಾಡಿ ಕುಣಿಗಲ್ ನಲ್ಲಿ ಮತ್ತೆ ಜೆಡಿಎಸ್ ಪುಟ್ಟಿ ಉದರ ಮೂಲಕ ನಾವೆಲ್ಲರೂ ಸೇರಿ ವಿಜೃಂಭಣೆಯಿಂದ ವಿಜಯೋತ್ಸವ ಆಚರಿಸಬೇಕು ಎಂದರು, ಪಕ್ಷದ ಕಾರ್ಯಕರ್ತರ ಒಂದು ಶಕ್ತಿ, ಜೆಡಿಎಸ್ ಪಕ್ಷ ಗಟ್ಟಿಗೊಳಿಸಬೇಕಾದರೆ ಸದಸ್ಯತ್ವ ಪುನರ್ಜನ್ಮ ತಾಳಬೇಕು, ಈಗಾಗಲೇ 1 ಲಕ್ಷಕ್ಕೂ ಕ್ಕೂ ಹೆಚ್ಚು ಸದಸ್ಯತ್ವ ನೋಂದಾವಣೆಯಾಗಿದೆ, 9964002028,ನ ನಂಬರಿಗೆ ಮಿಸ್ ಕಾಲ್ ಕೊಟ್ಟು ನಂತರ ಲಿಂಕ್ ಬಳಸಿ ನೋಂದಾಯಿಸಿಕೊಂಡರೆ ಅದು ಬೆಂಗಳೂರು ಕೇಂದ್ರ ಕಚೇರಿಯಲ್ಲಿ ನೊಂದಣಿ ಆಗುತ್ತದೆ , ಇನ್ನು ಆರು ತಿಂಗಳಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಇದ್ದು ಸಮಯಕ್ಕೆ ತಕ್ಕಂತೆ ಪಕ್ಷದ ಕಾರ್ಯಕರ್ತರು ಸದಸ್ಯತ್ವ ನೋಂದಾಯಿಸಿಕೊಳ್ಳಬೇಕು, ಯಾವುದೇ ಗೊಂದಲಗಳಿಗೆ ಅವಕಾಶ ಕೊಡದಂತೆ, ಈ ಬಾರಿ ಜೆಡಿಎಸ್ ಪಕ್ಷವನ್ನು ಮತ್ತಷ್ಟು ಸದೃಢಗೊಳಿಸಬೇಕು, ರಾಜ್ಯದಲ್ಲಿ ಸದೃಢವಾದ ಸರ್ಕಾರಕ್ಕೆ ಕಾರ್ಯಕರ್ತರು ಬೆಂಬಲ ನೀಡಬೇಕು,ಹಾಗೂ ಪಕ್ಷ ಸಂಘಟನೆಗೆ ಹೊತ್ತು ಕೊಟ್ಟು ಕೆಲಸ ಮಾಡಬೇಕು ಎಂದು ಮಾತನಾಡಿದರು.

ಮಧ್ಯಾಹ್ನ 12 ಗಂಟೆಯಿಂದ ತಾಲೂಕಿನ ನಾನಾ ಕಡೆಗಳಿಂದ ನಮ್ಮ ಪಕ್ಷದ ಸಾವಿರಾರು ಕಾರ್ಯಕರ್ತರು ಇದ್ದಂತಹ ಕೆಲಸ ಕಾರ್ಯಗಳನ್ನು ಬಿಟ್ಟು ಪಕ್ಷದ ಸಮಾವೇಶಕ್ಕೆ ಬಂದಿರುವುದು ನನಗೆ ತುಂಬಾ ಹೆಮ್ಮೆಯಾಗುತ್ತಿದೆ ಹಾಗೂ ಪಕ್ಷದ ಗೌರವವನ್ನು ಕಾಪಾಡುತ್ತಿದೆ, ಎಚ್ ಡಿ ಕುಮಾರಸ್ವಾಮಿ ಯವರಿಗೆ ಹಲವಾರು ಜನ ಟೀಕೆ ಮಾಡುತ್ತಿದ್ದರು, ಆ ಟೀಕೆ ಮಾಡುತ್ತಿದ್ದವರಿಗೆ ಇಂದು ನನ್ನ ತಾಲೂಕಿನ ಪಕ್ಷದ ಮುಖಂಡರ ಮೂಲಕ ಅವರಿಗೆ ಉತ್ತರ ಸಿಕ್ಕಿದೆ, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರುಗಳಿಗೆ ನಾವು ಕರೆಕೊಟ್ಟಿದ್ದೆವು, ಆದರೆ ನಿಖಿಲ್ ಅಣ್ಣನವರ ಮೇಲೆ ಪಕ್ಷದ ಕಾರ್ಯಕರ್ತರು ಇಷ್ಟೊಂದು ಅಭಿಮಾನ ಇಟ್ಟಿರುವುದು ಇನ್ನು ಮುಂದೆ ನಮ್ಮ ಜೆಡಿಎಸ್ ಪಕ್ಷ ಸದೃಢಗೊಳ್ಳುತ್ತದೆ,ಎಂದು ತಿಳಿಸಿದರು, ಬೂತ್ ಮಟ್ಟದಲ್ಲಿ ಸಂಘಟನೆಯನ್ನು ಕಟ್ಟಬೇಕು, 2028 ರಲ್ಲಿ ಈ ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಆಗಬೇಕು, ಎಂಬುದು ನಮ್ಮೆಲ್ಲರ ಕನಸು ನನಸಾಗಬೇಕಾದರೆ ನಾವು ಪಕ್ಷವನ್ನು ಸದೃಢಗೊಳಿಸಬೇಕು ಎಂದು ಮಾತನಾಡಿದರು, ಜೆಡಿಎಸ್ ಪಕ್ಷದ ಮೇಲೆ ಹೈಕಮಾಂಡ್ ಇಟ್ಟಂತಹ ಪ್ರೀತಿ ನಂಬಿಕೆ.ವಿಶ್ವಾಸ ಮುಖ್ಯ ಕಾರಣವಾಗಿದೆ, ಹಾಗೂ ಕುಣಿಗಲ್ ತಾಲೂಕಿನಲ್ಲಿ ಪೂಜ್ಯ ತಂದೆಯವರಾದ ನಾಗರಾಜಯ್ಯನವರ ಸಾರಥ್ಯದಲ್ಲಿ ಈ ಒಂದು ಪಕ್ಷ ಜೀವಂತವಾಗಿದೆ ಹಾಗೂ ಗಟ್ಟಿಯಾಗಿದೆ ಎಂದು ನನಗೆ ಹೆಮ್ಮೆಯಾಗುತ್ತದೆ,ಇವತ್ತಿನಿಂದ ಒಂದು ಹೊಸ ಇತಿಹಾಸ ಸೃಷ್ಟಿಯಾಗಿದೆ ಎಂದು ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಡಿ ನಾಗರಾಜಯ್ಯ, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ರವಿ ಡಿ ನಾಗರಾಜಯ್ಯ, ತಾಲೂಕು ಜೆಡಿಎಸ್ ಅಧ್ಯಕ್ಷ ಜಗದೀಶ್ ನಾಗರಾಜಯ್ಯ, ಮಾಜಿ ವಿಧಾನ ಪರಿಷತ್ ಸದಸ್ಯ ತಿಪ್ಪೇಸ್ವಾಮಿ, ಕಲ್ಲನಾಯಕನಹಳ್ಳಿ ಶಿವಣ್ಣ, ಹಲುವಾಗಲು ಶ್ರೀನಿವಾಸ್, ಕೆ ಎಲ್ ಹರೀಶ್, ಎಸ ಎಚ್ ಗೋಪಾಲ್, ಹರೀಶ್ ನಾಯ್ಕ್, ಮಾಜಿ ತಾಲಕ್ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷರು ಜಿಯಾ ಉಲ್ಲಾ, ಟಿ ಹೊಸಹಳ್ಳಿ ಜಯಣ್ಣ, ನಾಗಣ್ಣ, ಹಾಗೂ ಅನೇಕ ಮುಖಂಡರು ಪಕ್ಷದ ಕಾರ್ಯಕರ್ತರು ಸೇರಿದಂತೆ ಉಪಸ್ಥಿತರಿದ್ದರು,,,

Related Articles

Leave a Reply

Your email address will not be published. Required fields are marked *

Back to top button