ರಾಜ್ಯ
Trending

ಜ್ಞಾನ ದೇವಿಯ ದೇಗುಲಕ್ಕೆ ಬೀದಿ ರಂಪಾಟದ ರಗಳೆ: ಶಾಲೆ ಹಿಡಿತಕ್ಕೆ ಶಿಕ್ಷಣ ಇಲಾಖೆ ಮೌನ

ನಾಗಮಂಗಲ:ಪಟ್ಟಣದ ಜಿ.ಜೆ.ಸಿ ಕಾಲೇಜಿನ ಅದ್ವಾನಗಳು ದಿನದಿಂದ ದಿನಕ್ಕೆ ರಂಪಾಟವಾಗಿ ಬೀದಿಗೆ ಬಂದಿದೆ ಅಧ್ಯಾಪಕ ವರ್ಗ ಮತ್ತು ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ವಕೀಲ ಕೊಣನೂರು ಧನಂಜಯ ನವರ ನಡುವೆ ನಡೆದ ಮಾತಿನ ಚಕಮಕಿ ಪಟ್ಟಣದ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಉಪನ್ಯಾಸಕ ಮತ್ತು ತಾಲೂಕು ನೌಕರರ ಸಂಘದ ನಿರ್ದೇಶಕ ಸುರೇಶ ರವರು ಕಾಲೇಜು ಶಾಲಾ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ವಕೀಲ ಕೊಣನೂರು ಧನಂಜಯ ಅವರ ಮೇಲೆ ಅಟ್ರಾಸಿಟಿ ಕೇಸು ದಾಖಲು ಮಾಡಿದ್ದಾರೆ.

ನಾಗಮಂಗಲ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಪ್ರಸ್ತುತ ರಾಜ್ಯಾದ್ಯಂತ ಉನ್ನತ ಹುದ್ದೆಯಲ್ಲಿದ್ದಾರೆ ಹಾಗೂ ರಾಜ್ಯಕ್ಕೆ ಪ್ರಥಮ ಅಂಕ ಪಡೆದು ಈ ಕಾಲೇಜಿಗೆ ಹೆಸರು ತಂದುಕೊಟ್ಟಂತಹ ವಿದ್ಯಾರ್ಥಿಗಳು ಮತ್ತು ಉಪಾಧ್ಯಾಯರನ್ನು ನೀಡಿದಂತಹ ಜಿ.ಜೆ.ಸಿ ಕಾಲೇಜ್ ಇತ್ತೀಚಿನ ದಿನಗಳಲ್ಲಿ ಕಾಲೇಜಿನ ಒಂದೊಂದು ಪ್ರಕರಣಗಳು ಪ್ರಜ್ಞಾವಂತರ ವಿದ್ಯಾವಂತರ ತಲೆತಗ್ಗಿಸುವಂತಹ ಕಾಲೇಜಿನ ಪ್ರಕರಣಗಳು ಹೆಚ್ಚು ತಲೆ ಇದ್ದು ಆದರೆ ಇವುಗಳಿಗೆ ನಾಂದಿ ಇಲ್ಲವೇ ಎಂಬುದು ವಿಚಾರವಂತರ ಪ್ರಶ್ನೆಗಳೇ ಪ್ರಶ್ನೆಗಳಾಗಿ ಉಳಿದಿವೆ.ಕಳೆದ ವರ್ಷ ರಾಜ್ಯದ ಸುದ್ದಿಯಾಗಿ ಈ ಕಾಲೇಜಿನಲ್ಲಿ ಖಾಸಗಿಯಾಗಿ ಸಂಭ್ರಮಚರಣೆ ಮಾಡಿದ್ದು ದೊಡ್ಡ ಸುದ್ದಿಯಾಗಿ ಮಾಸಿಹೋಗಿದೆ.

ಇತ್ತೀಚಿನ ದಿನಗಳಲ್ಲಿ ಕಾಲೇಜು ಆಡಳಿತ ಶಿಕ್ಷಕವರ್ಗ ಮತ್ತು ಶಾಲಾ ಅಭಿವೃದ್ಧಿ ಸಮಿತಿ ಉತ್ತಮ ಒಡನಾಟವಿಲ್ಲದೆ ವೈಯಕ್ತಿಕ ಹಿತಾಶಕ್ತಿ ಗೋಸ್ಕರ ಶಾಲೆಯ ಅಭಿವೃದ್ಧಿ ಕುಂಠಿತವಾಗಿದೆ ಕಾಲೇಜಿನ ಅತಿಥಿ ಉಪನ್ಯಾಸಕ ಶಿಕ್ಷಕರ ನೇಮಕ ವಿಚಾರವಾಗಿ ಮಾತಿನ ಚಕಮಕ್ಕಿ ನಡೆದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಉಪನ್ಯಾಸಕ ಸುರೇಶ್ ಪರವಾಗಿ ನೂರಾರು ಜನ ದಲಿತ ಮುಖಂಡರು ಪೊಲೀಸ್ ಠಾಣೆ ಮುಂಭಾಗ ಜಮಾಯಿಸಿದ್ದರೆ ಶಾಲಾ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಧನಂಜಯ್ ಪರವಾಗಿ ವಕೀಲರ ಸಂಘವು ನಿಂತಿತ್ತು ಪೊಲೀಸ್ ಠಾಣೆಯಲ್ಲಿ ಮಾತಿನ ಚಕಮಕಿ ನಡುವೆ ಪ್ರಕರಣ ವಿಕೋಪಕ್ಕೆ ಹೋಗಿ ಧನಂಜಯ್ ರವರ ಮೇಲೆ ಅಟ್ರಾಸಿಟಿ ಕೇಸು ದಾಖಲಾಗಿರುತ್ತದೆ.

ನಾಗಮಂಗಲ ಕಾಲೇಜಿನ ಉನ್ನತ ಅಭಿವೃದ್ಧಿ ಮಾಡಬೇಕಾಗಿದ್ದು ಕೇವಲ ವೈಯಕ್ತಿಕ ವಿಚಾರಗಳು ಮುಂದಿಟ್ಟುಕೊಂಡು ಕಾಲೇಜಿನ ಹೆಸರು ಕೆಡಿಸುವ ಪ್ರಯತ್ನ ಮಾಡದೆ ಕಾಲೇಜಿನ ಬೆಳವಣಿಗೆಗೆ ಪ್ರಯತ್ನ ಮಾಡುವ ಕೆಲಸ ಅತಿಬುದ್ದಿಯಾಗಿ ವರ್ತಿಸದೆ ಶಿಕ್ಷಕ ವರ್ಗ ಆಡಳಿತ ಮಂಡಳಿ ನಡುವೆ ಸಾಮರಸ್ಯದಿಂದ ಪ್ರಯತ್ನ ಮಾಡಬೇಕಾಗಿದೆ ಎಂದು ಸಾರ್ವಜನಿಕರ ಆಗ್ರಹವಾಗಿದೆ.

Related Articles

Leave a Reply

Your email address will not be published. Required fields are marked *

Back to top button