ರಾಜ್ಯ
Trending

ಡಿಕೆಶಿ ಸಿಎಂ ಆಗೋದು ಸಾಧ್ಯವೋ, ಅಸಾಧ್ಯವೋ?

ರಾಜ್ಯ ಕಾಂಗ್ರೆಸ್ ನಲ್ಲಿ ಇದೀಗ ನಾಯಕತ್ವ ಬದಲಾವಣೆಯದ್ದೇ ಸದ್ದು. ಈ ನಡುವೆ ಸಿದ್ದರಾಮಯ್ಯ ನಾನೇ 5 ವರ್ಷ ಸಿಎಂ ಎಂದು ಗುಡುಗಿದರೆ, ‘ನನಗೆ ಬೇರೆ ಆಯ್ಕೆ ಏನಿದೆ’ ಎಂದು ಪ್ರಶ್ನಿಸುವ ಮೂಲಕ ಡಿಕೆಶಿ ಅಸಾಯಕತೆಯ ಕಾರ್ಡ್ ಪ್ಲೇ ಮಾಡಿದ್ದಾರೆ. ಅಷ್ಟಕ್ಕೂ ಡಿಕೆ ಶಿವಕುಮಾರ್ ಭವಿಷ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಅಲಂಕರಿಸಲು ಸಾಧ್ಯವೇ? ಕನಕಪುರ ಬಂಡೆ ಎಂದು ಗುರುತಿಸಲ್ಪಟ್ಟ ಡಿಕೆಶಿಗೆ ಹಿನ್ನಡೆ ಆಗುತ್ತಿರುವ ಅಂಶಗಳೇನು? ಅವರ 5 ಪ್ಲಸ್ ಮತ್ತು 5 ಮೈಸನ್ ಇಲ್ಲಿದೆ.

ಡಿಕೆಶಿ ಪ್ಲಸ್ ಏನೇನು?

1- ಆಕ್ರಮಣಕಾರಿ ರಾಜಕಾರಣಿ

ಡಿಕೆ ಶಿವಕುಮಾರ್ ಅವರು “ಆಕ್ರಮಣಕಾರಿ ರಾಜಕಾರಣಿ” ಎಂದೇ ಪ್ರಸಿದ್ದಿ ಗಳಿಸಿದವರು. ರಾಜಕೀಯ ಪರಿಭಾಷೆಯಲ್ಲಿ ಆಕ್ರಮಣಕಾರಿ ರಾಜಕಾರಣಿ ಎಂದರೆ ಎದುರಾಳಿಗಳೇ ತಿರುಗಿ ನೋಡುವಂತಹ ವ್ಯಕ್ತಿತ್ವ. ಈ ವ್ಯಕ್ತಿತ್ವ ಉಳ್ಳ ರಾಜಕಾರಣಿಗಳು ತಮ್ಮ ಉದ್ದೇಶಗಳನ್ನು ಸಾಧಿಸಲು, ವಿರೋಧಿಗಳನ್ನು ಎದುರಿಸಲು ಅಥವಾ ತಮ್ಮ ನಿಲುವನ್ನು ಸಮರ್ಥಿಸಿಕೊಳ್ಳಲು ನೇರ, ದೃಢ ಮತ್ತು ಕೆಲವೊಮ್ಮೆ ಕಟು ಶೈಲಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಈ ವ್ಯಕ್ತಿತ್ವ ಡಿಕೆ ಶಿವಕುಮಾರ್ ಅವರಲ್ಲಿದೆ. ಎದುರಾಳಿಗಳನ್ನು ಮಣಿಸಲು ಎಲ್ಲ ತಂತ್ರಗಾರಿಕೆಯನ್ನು ಮಾಡುವಲ್ಲಿ ಅವರು ಎತ್ತಿದ ಕೈ.

2- ಪಕ್ಷ ನಿಷ್ಠೆ, ಮೂಲ ಕಾಂಗ್ರೆಸಿಗ ಎಂಬ ಹೆಗ್ಗಳಿಕೆ

ಡಿಕೆ ಶಿವಕುಮಾರ್ ಅವರು ಮೂಲ ಕಾಂಗ್ರೆಸ್‌ ಮೆನ್. ವಿದ್ಯಾರ್ಥಿ ಸಂಘಟನೆಯಲ್ಲಿ ಆಕ್ಟೀವ್ ಆಗಿದ್ದವರು. ಗಾಂಧಿ ಕುಟುಂಬಕ್ಕೆ ಹತ್ತಿರವಾದವರು. ಕಾಂಗ್ರೆಸ್ ನಲ್ಲಿ ಶಾಸಕನಾಗಿ, ವಿವಿಧ ಜವಾಬ್ದಾರಿ ನಿರ್ವಹಿಸಿ, ಸಚಿವನಾಗಿ, ಇದೀಗ ಡಿಸಿಎಂ ಆಗಿದ್ದಾರೆ. ಪಕ್ಷಕ್ಕೆ ಅನೇಕ ಸಂದರ್ಭದಲ್ಲಿ ಹೆಗಲಾಗಿದ್ದಾರೆ. ಸಂಕಷ್ಟದ ಸಂದರ್ಭದಲ್ಲಿ ಟ್ರಬಲ್ ಶೂಟರ್ ಆಗಿ ಕೆಲಸ ಮಾಡಿದ್ದಾರೆ. ಈ ಕಾರಣಕ್ಕಾಗಿ ಅವರ ಪಕ್ಷ ನಿಷ್ಠೆಯ ಬಗ್ಗೆ ಹೈಕಮಾಂಡ್ ಮಟ್ಟದಲ್ಲಿ ಮೆಚ್ಚುಗೆ ಇದೆ.

3 -ಕಾಂಗ್ರೆಸ್ ಯುವ ಸಮೂಹದ ಬೆಂಬಲ

ಡಿಕೆ ಶಿವಕುಮಾರ್ ಕಾಂಗ್ರೆಸ್ ಯುವ ಸಮೂಹದಲ್ಲಿ ನೆಚ್ಚಿನ ನಾಯಕರಾಗಿದ್ದಾರೆ. ರಾಜ್ಯಾದ್ಯಂತ ಡಿಕೆಶಿಗೆ ಕಾಂಗ್ರೆಸ್ ಯುವ ಬಳಗದಲ್ಲಿ ದೊಡ್ಡ ಮಟ್ಟಿನ ಅಭಿಮಾನಿಗಳಿದ್ದಾರೆ. ಡಿಕೆಶಿ ಮುಖ್ಯಮಂತ್ರಿ ಆಗಬೇಕು ಎಂದು ಬಯಸುವ ಯುವ ವರ್ಗವಿದೆ. ಇದು ಡಿಕೆಶಿಗೆ ಪ್ಲಸ್ ಪಾಯಿಂಟ್. ಕಾಂಗ್ರೆಸ್ ನಲ್ಲಿ ಯುವ ಸಮೂಹವನ್ನು ತನ್ನತ್ತ ಆಕರ್ಷಣೆ ಮಾಡುವ ನಿಟ್ಟಿನಲ್ಲಿ ಆದ್ಯತೆ ನೀಡಲಾಗುತ್ತಿದೆ. ಹೀಗಾಗಿ ಡಿಕೆಶಿಗೆ ಇದು ಅನುಕೂಲ.

4- ಕೆಪಿಸಿಸಿ ಸಂಘಟನೆಯ ಅನುಭವ

ಡಿಕೆ ಶಿವಕುಮಾರ್ ಅವರಿಗೆ ಪಕ್ಷ ಸಂಘಟನೆಯ ಅನುಭವ ಇದೆ. ಕೆಪಿಸಿಸಿ ಅಧ್ಯಕ್ಷರಾಗಿ ಕಾಂಗ್ರೆಸ್ ವಿರೋಧ ಪಕ್ಷದಲ್ಲಿದ್ದಾಗ ಗಮನ ಸೆಳೆಯುವ ಕೆಲಸ ಮಾಡಿದ್ದಾರೆ. ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಶ್ರಮ ಹಾಕಿದ್ದಾರೆ. ಪಕ್ಷ ಹಲವಾರು ಕಾರ್ಯಕ್ರಮಗಳನ್ನು, ಹೋರಾಟಗಳನ್ನು ನಡೆಸಿದ್ದ ಸಂದರ್ಭದಲ್ಲಿ ಅದನ್ನು ಮುನ್ನಡೆಸಿದ್ದಾರೆ. ಸಹಜವಾಗಿ ಇದೆಲ್ಲವೂ ಡಿಕೆಶಿಗೆ ರಾಜಕೀಯವಾಗಿ ಮುಂದೆ ಬರಲು ದೊಡ್ಡ ಅವಾಕಾಶ ಕಲ್ಪಿಸಿತ್ತು.

5- ಹೈಕಮಾಂಡ್ ಜೊತೆಗೆ ಉತ್ತಮ ನಂಟು

ಡಿಕೆಶಿ ಹೈಕಮಾಂಡ್ ನಾಯಕರ ಜೊತೆಗೆ ಉತ್ತಮ ನಂಟು ಹೊಂದಿದ್ದಾರೆ. ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಜೊತೆಗೆ ಒನ್ ಟು ಒನ್ ಸಂಪರ್ಕ ಹೊಂದಿದ್ದಾರೆ. ರಾಜ್ಯದ ಇತರ ನಾಯಕರಿಗಿಂತ ಹೈಕಮಾಂಡ್ ಜೊತೆಗೆ ಡಿಕೆಶಿ ಹೆಚ್ಚಿನ ಸಂಪರ್ಕ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ದೆಹಲಿಯ ಈ ಸಂಬಂಧ ಮತ್ತು ಸಂಪರ್ಕ ಡಿಕೆಶಿಗೆ ಬಹುದೊಡ್ಡ ಅನುಕೂಲವಾಗಿದೆ.

ಡಿಕೆಶಿ ಮೈನಸ್ ಏನೇನು?

1 -ವೈಯಕ್ತಿಕ ನಡವಳಿಕೆ ಬಗ್ಗೆ ಅಸಮಾಧಾನ

ಡಿಕೆಶಿಗೆ ದೊಡ್ಡ ಹಿನ್ನಡೆ ಆಗಿರುವುದು ಅವರ ವೈಯಕ್ತಿಕ ನಡವಳಿಕೆ ಬಗ್ಗೆ ಇರುವ ಆರೋಪಗಳು. ಡಿಕೆಶಿ ಅಗ್ರೆಸ್ಯೂ ನಡೆ ಹಾಗೂ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ಶೈಲಿ ಅವರಿಗೆ ಬಹುದೊಡ್ಡ ನೆಗೆಟ್ಯೂ ಪಾಯಿಂಟ್. ಕಾಂಗ್ರೆಸ್ ಪಕ್ಷದಲ್ಲಿ ಬಹುತೇಕ ಶಾಸಕರು ಇದೇ ಅಭಿಪ್ರಾಯವನ್ನು ಹೊಂದಿದ್ದಾರೆ. ಕೆಲವು ಆಪ್ತರನ್ನು ಹೊರತು ಪಡಿಸಿ ಇತರರು ಡಿಕೆಶಿ ನಡವಳಿಕೆಯ ಬಗ್ಗೆ ಅಸಮಾಧಾನ ಇದೆ. ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ಅವರು ಈ ಕುರಿತಾಗಿ ನೀಡಿರುವ ಹೇಳಿಕೆಯೇ ಇದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದೆ. ಡಿ.ಕೆ.ಶಿವಕುಮಾರ್ ಸಾರ್ವಜನಿಕ ಸಂಪರ್ಕದಲ್ಲಿ ವಿಫಲರಾಗಿದ್ದಾರೆ ಹಾಗೂ ಶಾಸಕರನ್ನು ಕಡೆಗಣಿಸುತ್ತಾರೆ ಎಂಬುವುದು ಅವರ ಆರೋಪವಾಗಿದೆ. ಅಲ್ಲದೆ, ಡಿಕೆ ಶಿವಕುಮಾರ್‌ಗೆ ವಿರೋಧಿಗಳು ಹೆಚ್ಚಿದ್ದಾರೆ ಹಾಗೂ ಅವರ ನಡವಳಿಕೆಗಳೇ ತೊಡಕಾಗಿವೆ ಎಂದಿರುವುದು ಗಮನಾರ್ಹ.

2- ಪಕ್ಷ ನಿಷ್ಠೆ, ಮೂಲ ಕಾಂಗ್ರೆಸಿಗ ಎಂಬ ಹೆಗ್ಗಳಿಕೆ

ಡಿಕೆ ಶಿವಕುಮಾರ್ ಅವರು ಮೂಲ ಕಾಂಗ್ರೆಸ್‌ ಮೆನ್. ವಿದ್ಯಾರ್ಥಿ ಸಂಘಟನೆಯಲ್ಲಿ ಆಕ್ಟೀವ್ ಆಗಿದ್ದವರು. ಗಾಂಧಿ ಕುಟುಂಬಕ್ಕೆ ಹತ್ತಿರವಾದವರು. ಕಾಂಗ್ರೆಸ್ ನಲ್ಲಿ ಶಾಸಕನಾಗಿ, ವಿವಿಧ ಜವಾಬ್ದಾರಿ ನಿರ್ವಹಿಸಿ, ಸಚಿವನಾಗಿ, ಇದೀಗ ಡಿಸಿಎಂ ಆಗಿದ್ದಾರೆ. ಪಕ್ಷಕ್ಕೆ ಅನೇಕ ಸಂದರ್ಭದಲ್ಲಿ ಹೆಗಲಾಗಿದ್ದಾರೆ. ಸಂಕಷ್ಟದ ಸಂದರ್ಭದಲ್ಲಿ ಟ್ರಬಲ್ ಶೂಟರ್ ಆಗಿ ಕೆಲಸ ಮಾಡಿದ್ದಾರೆ. ಈ ಕಾರಣಕ್ಕಾಗಿ ಅವರ ಪಕ್ಷ ನಿಷ್ಠೆಯ ಬಗ್ಗೆ ಹೈಕಮಾಂಡ್ ಮಟ್ಟದಲ್ಲಿ ಮೆಚ್ಚುಗೆ ಇದೆ.

3 -ಕಾಂಗ್ರೆಸ್ ಯುವ ಸಮೂಹದ ಬೆಂಬಲ

ಡಿಕೆ ಶಿವಕುಮಾರ್ ಕಾಂಗ್ರೆಸ್ ಯುವ ಸಮೂಹದಲ್ಲಿ ನೆಚ್ಚಿನ ನಾಯಕರಾಗಿದ್ದಾರೆ. ರಾಜ್ಯಾದ್ಯಂತ ಡಿಕೆಶಿಗೆ ಕಾಂಗ್ರೆಸ್ ಯುವ ಬಳಗದಲ್ಲಿ ದೊಡ್ಡ ಮಟ್ಟಿನ ಅಭಿಮಾನಿಗಳಿದ್ದಾರೆ. ಡಿಕೆಶಿ ಮುಖ್ಯಮಂತ್ರಿ ಆಗಬೇಕು ಎಂದು ಬಯಸುವ ಯುವ ವರ್ಗವಿದೆ. ಇದು ಡಿಕೆಶಿಗೆ ಪ್ಲಸ್ ಪಾಯಿಂಟ್. ಕಾಂಗ್ರೆಸ್ ನಲ್ಲಿ ಯುವ ಸಮೂಹವನ್ನು ತನ್ನತ್ತ ಆಕರ್ಷಣೆ ಮಾಡುವ ನಿಟ್ಟಿನಲ್ಲಿ ಆದ್ಯತೆ ನೀಡಲಾಗುತ್ತಿದೆ. ಹೀಗಾಗಿ ಡಿಕೆಶಿಗೆ ಇದು ಅನುಕೂಲ.

4- ಕೆಪಿಸಿಸಿ ಸಂಘಟನೆಯ ಅನುಭವ

ಡಿಕೆ ಶಿವಕುಮಾರ್ ಅವರಿಗೆ ಪಕ್ಷ ಸಂಘಟನೆಯ ಅನುಭವ ಇದೆ. ಕೆಪಿಸಿಸಿ ಅಧ್ಯಕ್ಷರಾಗಿ ಕಾಂಗ್ರೆಸ್ ವಿರೋಧ ಪಕ್ಷದಲ್ಲಿದ್ದಾಗ ಗಮನ ಸೆಳೆಯುವ ಕೆಲಸ ಮಾಡಿದ್ದಾರೆ. ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಶ್ರಮ ಹಾಕಿದ್ದಾರೆ. ಪಕ್ಷ ಹಲವಾರು ಕಾರ್ಯಕ್ರಮಗಳನ್ನು, ಹೋರಾಟಗಳನ್ನು ನಡೆಸಿದ್ದ ಸಂದರ್ಭದಲ್ಲಿ ಅದನ್ನು ಮುನ್ನಡೆಸಿದ್ದಾರೆ. ಸಹಜವಾಗಿ ಇದೆಲ್ಲವೂ ಡಿಕೆಶಿಗೆ ರಾಜಕೀಯವಾಗಿ ಮುಂದೆ ಬರಲು ದೊಡ್ಡ ಅವಾಕಾಶ ಕಲ್ಪಿಸಿತ್ತು.

5- ಹೈಕಮಾಂಡ್ ಜೊತೆಗೆ ಉತ್ತಮ ನಂಟು

ಡಿಕೆಶಿ ಹೈಕಮಾಂಡ್ ನಾಯಕರ ಜೊತೆಗೆ ಉತ್ತಮ ನಂಟು ಹೊಂದಿದ್ದಾರೆ. ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಜೊತೆಗೆ ಒನ್ ಟು ಒನ್ ಸಂಪರ್ಕ ಹೊಂದಿದ್ದಾರೆ. ರಾಜ್ಯದ ಇತರ ನಾಯಕರಿಗಿಂತ ಹೈಕಮಾಂಡ್ ಜೊತೆಗೆ ಡಿಕೆಶಿ ಹೆಚ್ಚಿನ ಸಂಪರ್ಕ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ದೆಹಲಿಯ ಈ ಸಂಬಂಧ ಮತ್ತು ಸಂಪರ್ಕ ಡಿಕೆಶಿಗೆ ಬಹುದೊಡ್ಡ ಅನುಕೂಲವಾಗಿದೆ.

Related Articles

Leave a Reply

Your email address will not be published. Required fields are marked *

Back to top button