ಕ್ರೈಂ
Trending

ತಂದೆಯ ಪಿಸ್ತೂಲ್​ನಿಂದ ಗುಂಡು ಹಾರಿಸಿಕೊಂಡು ಮಗ ಆತ್ಮಹತ್ಯೆ

ವಿಜಯಪುರ: ಪಿಸ್ತೂಲ್​ನಿಂದ ತಲೆಗೆ ಗುಂಡು ಹಾರಿಸಿಕೊಂಡು ಯುವಕ ಆತ್ಮಹತ್ಯೆ (death) ಮಾಡಿಕೊಂಡಿರುವಂತಹ ಘಟನೆ ನಗರದ ಶಿಕಾರಿ ಖಾನೆ ಏರಿಯಾದಲ್ಲಿ ನಡೆದಿದೆ. ಅಶನಾಮ್ ಪ್ರಕಾಶ್​ ಮಿರ್ಜಿ(22) ಆತ್ಮಹತ್ಯೆ ಮಾಡಿಕೊಂಡ ಯುವಕ (boy). ಅಶನಾಮ್ ತಂದೆ ಮಾಜಿ ಪಾಲಿಕೆ ಸದಸ್ಯ ಪ್ರಕಾಶ್​ ಮಿರ್ಜಿ ಹೆಸರಿನಲ್ಲಿ ಪಿಸ್ತೂಲ್ ಲೈಸೆನ್ಸ್​ ಇದೆ. ತಂದೆ, ತಾಯಿ ಮತ್ತು ಸಂಬಂಧಿಗಳು ಮನೆಯಲ್ಲಿದ್ದಾಗಲೇ ಬೆಡ್​​ ರೂಂನಲ್ಲಿ ತಲೆಗೆ ಗುಂಡು ಹಾರಿಸಿಕೊಂಡು ಅಶನಂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.ಗುಂಡಿನ ಶಬ್ದ ಕೇಳಿ ಕುಟುಂಬಸ್ಥರು ಬೆಡ್​ ರೂಂ ಬಾಗಿಲು ತೆರೆದಿದ್ದಾರೆ. ತಕ್ಷಣ ಅಶನಂ ನನ್ನು ಬಿಎಲ್​ಇಡಿ ಆಸ್ಪತ್ರೆಗೆ ಕುಟುಂಬಸ್ಥರು ಸ್ಥಳಾಂತರ ಮಾಡಿದ್ದಾರೆ. ಆದರೆ ಅಶನಂ ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದ್ದಾರೆ. ಬಿಎಲ್​ಇಡಿ ಆಸ್ಪತ್ರೆ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ಮಾಡಲಾಗಿದೆ. ಅಶನಂ ಆತ್ಮಹತ್ಯೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು, DySP ಬಸವರಾಜ್​ ಯಲಿಗಾರ್​, ಸಿಪಿಐ ಮಲ್ಲಯ್ಯ ಮಠಪತಿ, ಎಪಿಎಂಸಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button