ನಾನು ಚುನಾವಣೆಯಲ್ಲಿ ಸೋತಿರಬಹುದು ಆದರೆ ಜನರ ಮನಸ್ಸಿನಲ್ಲಿ ಗೆದ್ದಿದ್ದೇನೆ: ಹೂಡಿ ವಿಜಯಕುಮಾರ್

ಮಡಿವಾಳ:
ಮಾಲೂರು ತಾಲೂಕಿನಲ್ಲಿ ಹೊಸ ಸಂಚಲನ ಹೂಡಿ ವಿಜಯಕುಮಾರ್ ಅವರಿಂದ ಸ್ವಾಭಿಮಾನಿ ಜನತಾ ಪಕ್ಷದ ಪದಾಧಿಕಾರಿಗಳ ಆಯ್ಕೆ.
ತಾಲೂಕಿನ ಜನತೆ ನಾನು ಮಾಡಿದ ಸಮಾಜಮುಖಿ ಕಾರ್ಯಗಳನ್ನು ನೋಡಿ ನನಗೆ ಅತಿ ಹೆಚ್ಚು ಮತಗಳನ್ನು ನೀಡಿದ್ದರು. ಚುನಾವಣೆ ಮುಗಿದು 8-10 ತಿಂಗಳು ಕಳೆದಿದೆ. ನಾನು ಚುನಾವಣೆಯಲ್ಲಿ ಸೋತಿರಬಹುದು ಆದರೆ ಜನರ ದೃಷ್ಟಿಯಲ್ಲಿ ಗೆದ್ದಿದ್ದೇನೆ ಎಂದು ಹೂಡಿ ವಿಜಯಕುಮಾರ್ ರವರು ತಿಳಿಸಿದ್ದಾರೆ.
ಮಾಲೂರು-ಹೊಸಕೋಟೆ , ರಸ್ತೆಯಲ್ಲಿರುವ ತಮ್ಮ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ನಾವು ಯಾವ ಪಕ್ಷಕ್ಕೆ ಸೇರಬೇಕು, ಯಾವ ಪಕ್ಷಕ್ಕೆ ಸೇರಬಾರದು ಎಂಬುದರ ಬಗ್ಗೆ ಚರ್ಚಿಸಲು ಈ ಸಭೆಯನ್ನು ಕರೆಯಲಾಗಿದೆ ಎಂದು ತಿಳಿಸಿದರು.
ನಮ್ಮ ಜೊತೆ ನಿಷ್ಪಕ್ಷಪಾತವಾಗಿ ದುಡಿದಂತ ಕಾರ್ಯಕರ್ತರನ್ನು ಕೈ ಬಿಡಬಾರದು ಎಂದು ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ನಿಮ್ಮ ಆಶೀರ್ವಾದ ಇದ್ದರೆ ಮುಂದಿನ ಚುನಾವಣೆಯಲ್ಲಿ ಖಂಡಿತ ಜಯಶಾಲಿ ಆಗುತ್ತೇನೆ ಎಂದರು. ನಮ್ಮ ಸ್ವಾಭಿಮಾನಿ ಜನತಾ ಪಕ್ಷವನ್ನು ಬಲಪಡಿಸುತ್ತಾ, ಒಳ್ಳೆಯ ಆಡಳಿತವನ್ನು ನೀಡೋಣ ಎಂದು ತಿಳಿಸಿದರು.
ನೂತನ ತಾಲ್ಲೂಕು ಅಧ್ಯಕ್ಷರಾದ
ಆರ್.ಪ್ರಭಾಕರ್ ಮಾತನಾಡಿ ಪಕ್ಷಕ್ಕೆ ಆಯ್ಕೆಯಾದ ಎಲ್ಲಾ ಪದಾಧಿಕಾರಿಗಳು ತಮ್ಮ ಬೂತ್ ಮಟ್ಟದಲ್ಲಿ , ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯಿತ್, ಪುರಸಭೆ ಸೇರಿದಂತೆ, ಪಕ್ಷ ಸಂಘಟನೆ ಮಾಡಬೇಕೆಂದು ತಿಳಿಸಿದರು. ಅಷ್ಟೇ ಅಲ್ಲದೆ ಮಾಲೂರಿನ ಮುಂದಿನ ಶಾಸಕರಾಗಿ ಹೂಡಿ ವಿಜಯಕುಮಾರ್ ರವರನ್ನು ಆಯ್ಕೆ ಮಾಡುವ ಗುರಿ ಇಟ್ಟುಕೊಳ್ಳುವಂತೆ ಕಾರ್ಯಕರ್ತರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಮಾಲೂರು ತಾಲೂಕು ಸ್ವಾಭಿಮಾನಿ ಜನತಾ ಪಕ್ಷದ ತಾಲೂಕು ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಆರ್.ಪ್ರಭಾಕರ್, ಪ್ರಧಾನ ಕಾರ್ಯದರ್ಶಿಗಳಾಗಿ ಬಿ.ಆರ್. ವೆಂಕಟೇಶ್, ಅಂಬರೀಶ್ ರೆಡ್ಡಿ, ದಿಬ್ಬಯ್ಯ, ವಕ್ತರರಾಗಿ ಡಿ.ವಿ ವೆಂಕಟೇಶ್ ಗೌಡ, ಉಪಾಧ್ಯಕ್ಷರಾಗಿ. ರಾಮಮೂರ್ತಿ ಸೇರಿದಂತೆ ಗೌರಿಶಂಕರ್, ಎಸ್.ಪ್ರಭಾಕರ್ ಸುರೇಶ್ ರೆಡ್ಡಿ, ಕೆ.ಬಿ.ಮುನಿಸ್ವಾಮಿಗೌಡ, ಬಾಬುರೆಡ್ಡಿ, ಸತೀಶ್ ಆರಾಧ್ಯ, ಕೆ.ಗೋಪಾಲಗೌಡ, ಎಚ್.ವೆಂಕಟೇಶ, ಕಾಂತಮ್ಮ ಅಮರಾವತಿ, ವೆಂಕಟಗಿರಿಯಪ್ಪ, ಬೋರ್ ಮಂಜುನಾಥ, ಕೆ.ಕೆ.ಕೃಷ್ಣಪ್ಪ ಚಂದ್ರಪ್ಪ ಹಾಗೂ ಕಲೀಲ್ ರವರನ್ನು ಪದಾಧಿಕಾರಿಗಳಾಗಿ ಆಯ್ಕೆ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಎಸ್. ನಾರಾಯಣ ಸ್ವಾಮಿ, ಮೋಹನ್ ಬಾಬು, ಭಾನುತೇಜ ಪುರಸಭೆ ಸದಸ್ಯರು, ರಾಜಾರಾಮ್, ದೇವರಾಜ ರೆಡ್ಡಿ, ಮಂಜುಳಮ್ಮ, ರತ್ನಮ್ಮ ಹಾಗೂ ಇತರರು ಇದ್ದರು.



