ಕೊತ್ವಾಲ್ ನ್ಯೂಸ್ ವರದಿಗಾರರ ಜೊತೆ ಅಳಲು ತೋಡಿಕೊಂಡ ಅಂಗವಿಕಲ ಯುವತಿಸಾರ್ ನಮಗೊಂದು ತ್ರಿಚಕ್ರ ವಾಹನದ ಸೌಲಭ್ಯ ಕೊಡಿಸಿ.
ಕೊಪ್ಪಳ ಕಾರಟಗಿ: ಕಾರಟಗಿಯ ಗಂಗಾವತಿ ರಸ್ತೆಯಲ್ಲಿ ಬಿರು ಬಿಸಿಲಿನಲ್ಲಿ ಅಂಗವಿಕಲ ಯುತಿಯೊಬ್ಬರು ಕೈಚಾಲಿತ ಬೈಸಿಕಲ್ ಅನ್ನು ಚಲಿಸಿಕೊಂಡು ಬರುತ್ತಿರುವುದು ಪತ್ರಕರ್ತರಾದ ಮಂಜುನಾಥ್ ವುಂತಗಲ್ ಮತ್ತು ಸುಂದರರಾಜ್ ಇವರ ಕಣ್ಣಿಗೆ ಬಿದ್ದಿದ್ದರು. ಬಿರು ಬಿಸಿಲಲ್ಲಿ ಕೈಯಿಂದ ಬೈಸಿಕಲ್ ಅನ್ನು ಚಲಿಸಿಕೊಂಡು ಬರಲು ಆ ಯುವತಿ ಪಡುತ್ತಿರುವ ಕಷ್ಟವನ್ನು ಕಣ್ಣಾರೆ ಕಂಡಿದ್ದಾರೆ. ಆ ಸಂದರ್ಭದಲ್ಲಿ ಯುವತಿಯನ್ನು ರಸ್ತೆಯ ಪಕ್ಕದ ಮರದ ನೆರಳಿಗೆ ಬರುವಂತೆ ಸೂಚನೆ ನೀಡಿ ಅವರನ್ನು ಅಲ್ಲಿ ನಿಲ್ಲಿಸಿ ಅವರನ್ನು ಮಾತನಾಡಿಸಿದರು. ಯಾಕಮ್ಮ ನಿನಗೀ ಕಷ್ಟಾ..? ಎಂದು ಪತ್ರಕರ್ತರು ಕೇಳಿದ್ದಾರೆ.ಗ್ರಾಮ ಪಂಚಾಯತಿ ಸೇರಿದಂತೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳಿಂದ ವಂಚಿತರಾಗಿರುವುದು ಆ ಯುವತಿಯ ಮಾತಿನಲ್ಲಿ ಅವರಿಗೆ ಅರ್ಥವಾಯಿತು. ತಾಲೂಕಿನ ಮರ್ಲಾನಹಳ್ಳಿ ಗ್ರಾ. ಪಂ. ವ್ಯಾಪ್ತಿಯ ಹಳೇ ಜೂರಟಗಿಯ ಅಂಗವಿಕಲ ಯುವತಿ ಸುನೀತಾ ತಂದೆ ಏಬಣ್ಣ ಇವರು ಸರ್ಕಾರದಿಂದ ಸಿಗುವ ಹಲವು ಸೌಲಭ್ಯಗಳಿಂದ ವಂಚಿತರಾಗಿದ್ದಾರೆ, ಸರ್ಕಾರಿ ಕಚೇರಿಗಳಿಗೆ ಅಲೆದಾಡಿ ಸುಸ್ತಾಗಿದ್ದಾರೆ. ಇವರ ಎರಡು ಕಾಲುಗಳು ಸಂಪೂರ್ಣವಾಗಿ ನಿಶಕ್ತವಾಗಿವೆ ಶೇಕಡ 100ರಷ್ಟು ಕಾಲುಗಳು ದುರ್ಬಲವಾಗಿವೆ ಇದರಿಂದಾಗಿ ಈ ಯುವತಿ ನಡೆದಾಡಲು ಕೂಡ ಬಾರದ ಪರಿಸ್ಥಿತಿ ಇದೆ, ಹುಟ್ಟಿನಿಂದಲೂ ಅಂಗವಿಕಲರಾಗಿ ಹುಟ್ಟಿದ ಈ ಯುವತಿ ಈಗ ಜೀವನದಲ್ಲಿ ಹಲವು ಕಷ್ಟಗಳ ಎದುರಿಸುತ್ತಿದ್ದಾರೆ. ಅಂಗವಿಕಲರ ಕಲ್ಯಾಣ ನಿಧಿಯಿಂದ ಸಿಗಬೇಕಾದ ತ್ರಿಚಕ್ರ ಮೋಟರ್ ಸೈಕಲ್ ಗಾಗಿ ಹಲವು ಬಾರಿ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಆದರೆ ಒಮ್ಮೆಯೂ ಕೂಡ ಇವರಿಗೆ ತ್ರಿಚಕ್ರ ಮೋಟಾರ್ ಬೈಕ್ ಸಿಗಲೇ ಇಲ್ಲ ಇನ್ನೊಬ್ಬರು ಬಳಸಿ ದುರಸ್ತಿಯಲ್ಲಿದ್ದ ತ್ರಿಚಕ್ರ ಬೈಸಿಕಲ್ ರಿಪೇರಿ ಮಾಡಿಸಿಕೊಂಡು ನಿತ್ಯವೂ ಇದರಲ್ಲಿಯೇ ತಿರುಗಾಡುತ್ತಿದ್ದಾರೆ. ದ್ವಿತೀಯ ಪಿಯುಸಿವರೆಗೆ ವಿದ್ಯಾಭ್ಯಾಸ ಮಾಡಿದ ಈ ಯುವತಿ ಯಾವುದಾದರೂ ಒಂದು ಸ್ವಯಂ ಉದ್ಯೋಗಕ್ಕಾಗಿ ಮರ್ಲನಹಳ್ಳಿ ಗ್ರಾಮ ಪಂಚಾಯತಿ ಸೇರಿದಂತೆ ಹಲವು ಇಲಾಖೆಗಳಿಗೆ ಅರ್ಜಿ ಸಲ್ಲಿಸಿದ್ದರು. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಸಂದರ್ಭದಲ್ಲಿ ಮಾತನಾಡಿದ ಯುವತಿ ಸುನಿತಾ ಇವರುಕನಕಗಿರಿ ಕ್ಷೇತ್ರದ ಶಾಸಕ ಶಿವರಾಜ್ ಎಸ್ ತಂಗಡಗಿ ಕ್ಷೇತ್ರದ ಉಸ್ತುವಾರಿ ಸಚಿವರಾಗಿರುವುದರಿಂದ ಅವರನ್ನು ಒಮ್ಮೆ ಭೇಟಿ ಮಾಡಿ ಕೇಳಲೆಂದು ಇಚ್ಛಿಸಿದ್ದೆ ಆದರೆ ಸಚಿವ ಶಿವರಾಜ್ ತಂಗಡಗಿ ಅವರೇ ಕೆಲವು ಕಾಮಗಾರಿಗಳಿಗೆ ಉದ್ಘಾಟನೆ ಮತ್ತು ಭೂಮಿ ಪೂಜೆ ನೆರವೇರಿಸಲು ನಮ್ಮ ಗ್ರಾಮ ಹಳೆ ಜೂರಟಗಿಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ನಮಗೇನಾದರೂ ನೆರವಾಗುತ್ತಾರೆ ಎಂದು ಅವರನ್ನು ಭೇಟಿ ಮಾಡಿದ್ದೆ ಸರ್ ಸುಮಾರು ವರ್ಷಗಳಿಂದ ನಾನು ತ್ರಿಚಕ್ರ ವಾಹನಕ್ಕೆ ಗ್ರಾ. ಪಂ ಗೆ ಅರ್ಜಿ ಸಲ್ಲಿಸಿದ್ದೆ ಇಲ್ಲಿಯವರೆಗೂ ಸರ್ಕಾರ ನಮಗೆ ಯಾವುದೇ ಸೌಲಭ್ಯವನ್ನು ನೀಡಿಲ್ಲ ಎಂದು ಅಂಗಲಾಚಿ ಅವರನ್ನು ಬೇಡಿಕೊಂಡೆ ಆದರೆ ಸಚಿವ ಶಿವರಾಜ್ ತಂಗಡಗಿ ಅವರು ನನ್ನ ಹತ್ತಿರ ಮಾತನಾಡಿ ನಾನು ಕಾಮಗಾರಿಗಳ ಪೂಜೆ ನೆರವೇರಿಸಲು ಇಲ್ಲಿಗೆ ಬಂದಿದ್ದೇನೆ ಎಂದು ಮಾತನ್ನಾಡಿದರು ಅದು ನನಗೆ ತುಂಬಾ ನೋವನ್ನುಂಟು ಮಾಡಿದೆ, ಎಂದು ಭಾವನಾತ್ಮಕವಾಗಿ ಮಾತನಾಡಿದಳು. ಸುಮಾರು ವರ್ಷಗಳಿಂದ ಮರ್ಲಾನಹಳ್ಳಿ ಗ್ರಾಮ ಪಂ.ಗೆ ತ್ರಿ ಚಕ್ರವಾಹನಕ್ಕೆ ಅರ್ಜಿ ಸಲ್ಲಿಸಿ ಅಲೆದಾಡಿ ಸಾಕಾಗಿದೆ ನೀವಾದರೂ ನಮ್ಮ ಕಷ್ಟಕ್ಕೆ ನೆರವಾಗಿ ಸಾರ್ ಎಂದು ಪತ್ರಿಕಾ ಮಾಧ್ಯಮದವರೊಂದಿಗೆ ಅಳಲನ್ನು ತೋಡಿಕೊಂಡರು. ಮಾಜಿ ಶಾಸಕ ಬಸವರಾಜ್ ದಡೇಸುಗೂರು ಕೂಡ ತ್ರಿಚಕ್ರ ವಾಹನ ನೀಡಲಿಲ್ಲ ಮತ್ತು ಸಚಿವ ಶಿವರಾಜ್ ತಂಗಡಗಿ ಇವರಾದರು ನಮ್ಮಂತ ಅಂಗವಿಕಲರಿಗೆ ನೆರವಾಗಬೇಕು ಎಂದರು. ಪತ್ರಕರ್ತರು 14ನೇ ಹಣಕಾಸಿನಲ್ಲಿ ವಿಶೇಷವಾಗಿ ವಿಕಲಚೇತನರಿಗೆ ತ್ರಿಚಕ್ರ ವಾಹನ ಒದಗಿಸುತ್ತಾರೆ. ನಿಮಗೆ ಯಾರು ಮಾಹಿತಿ ನೀಡಿಲ್ಲವೆ..? ಎಂದು ಯುವತಿಯನ್ನು ಕೇಳಿದ್ದಾರೆ ಇಲ್ಲ ಸರ್ ಯಾವುದೇ ಮಾಹಿತಿ ನೀಡಿಲ್ಲ ಎಂದಿದ್ದಾರೆ ಯುವತಿ. ಜನಪ್ರತಿನಿಧಿಗಳು ಮತದಾನ ಕೇಳುವುದಕ್ಕಷ್ಟೇ ಬರುತ್ತಾರೆ ಆದರೆ ಬಡಜನರ ಹಾಗೂ ನಮ್ಮಂತ ಅಂಗವಿಕಲರ ಸಮಸ್ಯೆಗಳನ್ನು ಆಲಿಸುವುದಿಲ್ಲ ಎಂದು ದುಃಖದಿಂದ ಅಳಲು ತೋಡಿಕೊಂಡರು.



