ನಿಖಿಲ್ ಕುಮಾರಸ್ವಾಮಿ ಮೈತ್ರಿ ಅಭ್ಯರ್ಥಿ?

ಚನ್ನಪಟ್ಟಣ: ಚನ್ನಪಟ್ಟಣ ಉಪ ಚುನಾವಣೆ ರಾಜಕೀಯ ಅಖಾಡ ಆರಂಭವಾಗಿದೆ. ಜೆಡಿಎಸ್ ಪಕ್ಷದ ಮುಖಂಡರ ಸಭೆಯಲ್ಲಿ ಸೋಮವಾರ ಮೈತ್ರಿ ಅಭ್ಯರ್ಥಿ ಆಯ್ಕೆಯನ್ನು ಮಾಡಲಾಗುವುದು ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ತಿಳಿಸಿದರು
ಬಿಡದಿ ಕೇತುಗಾನಹಳ್ಳಿ ತೋಟದ ಮನೆ ಬಳಿ ಜೆಡಿಎಸ್ ಮುಖಂಡರ ಸಭೆ ನಡೆಸಿದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಮಾಧ್ಯಮದವ ರೊಂದಿಗೆ ಮಾತನಾಡಿ. ಈಗಾಗಲೆ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ. ಶಿಗ್ಗಾಂವಿ, ಸಂಡೂರಲ್ಲಿ ನಮ್ಮ ಪಕ್ಷಕ್ಕೆ ಬೆಂಬಲ ಕಡಿಮೆ ಇರಬಹುದು. ಆದರೆ ಒಂದೊಂದು ಮತ ಕೂಡಾ ಮುಖ್ಯ ಆಗುತ್ತದೆ. ಎಲ್ಲವನ್ನೂ ಒಳಗೊಂಡಂತೆ ಚರ್ಚೆ ಮಾಡಲು ಕೆಲ ಸೆಲೆಕ್ಟೆಡ್ ನಾಯಕರ ಸಭೆ ಕರೆದಿದ್ದೇನೆ ಎಂದರು.
ನಿಖಿಲ್ ಹಾಗು ಜಯಮುತ್ತು ಅಭ್ಯರ್ಥಿ: ಚನ್ನಪಟ್ಟಣ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಕೂಡ ಚರ್ಚೆ ಮಾಡಲಾಯಿತು. ಆದರೆ ಅಂತಿಮವಾಗಿ ಚನ್ನಪಟ್ಟಣ ಇನ್ನೂ ಏನೂ ಆಗಿಲ್ಲ, ಅಲ್ಲೇ ಇದೆ. ನಾನು ಬಿಜೆಪಿಯ ರಾಜ್ಯ ನಾಯಕರ ಜೊತೆ ಕೂತು ಚರ್ಚೆ ಮಾಡ್ತೀನಿ. ದೆಹಲಿಯಲ್ಲಿ ಕ್ಷೇತ್ರದ ತೀರ್ಮಾನವನ್ನ ನನಗೆ ಬಿಟ್ಟಿದ್ದಾರೆ.
ನಮಗೆ ಎನ್‌ಡಿಎ ಸೀಟ್ ಗೆಲ್ಲ ಬೇಕು ಅನ್ನೋದು ಅಷ್ಟೇ ಇದೆ. ಇದರಲ್ಲಿ
ದುಡುಕಲ್ಲ, ರಾಜಕೀಯ ವಾಸ್ತವಾಂಶ ಗಳ ಬಗ್ಗೆ ಲೆಕ್ಕಾಚಾರ ಮಾಡಿ ತೀರ್ಮಾನ ಮಾಡಲಾಗುವುದು ಎಂದರು.
ಯಾರು ಏನೇ ಹೇಳಿಕೆ ಕೊಟ್ಟರು ಕೂಡ ಅಭ್ಯರ್ಥಿ ಆಯ್ಕೆ ಮಾಡುವುದು ಎನ್ ಡಿಎ ವರಿಷ್ಟರು. ನಾನು ಹಾಗು ವಿರಿಷ್ಟರು ತಿರ್ಮಾನ ತೆಗೆದುಕೊಂಡು ಅಂತಿಮವಾಗಿ ಅಭ್ಯರ್ಥಿ ಆಯ್ಕೆ ಮಾಡಲಾಗುವುದು. ನಮ್ಮ ಪಕ್ಷದ ಒಂದೊಂದು ಓಟು ಕೂಡ ಮುಖ್ಯವಾಗಿದೆ ಎಂದು ಬಿಜೆಪಿ ಹೈಕಮಾಂಡ್ ರವರಿಗೂ ಕೂಡ ಸಂದೇಶ ರವಾನಿಸಿದ್ದಾರೆ.
ನಿಖಿಲ್ ಅಭ್ಯರ್ಥಿಯಾದರೆ ಉತ್ತಮ: ಪ್ರಸನ್ನಗೌಡ: ಚನ್ನಪಟ್ಟಣ ಉಪಚುನಾವಣೆ ಗೆಲ್ಲಬೇಕಾದರೆ ಎನ್ ಡಿಎ ಅಭ್ಯರ್ಥಿಯಾಗಿ ನಿಖಿ ಕುಮಾರಸ್ವಾಮಿ ನಿಂತರೆ ಗೆಲ್ಲಬಹುದು ಎಂದು ಜೆಡಿಎಸ್ ಮುಖಂಡರ ಪ್ರಸನ್ನಪಿ ಗೌಡ ತಿಳಿಸಿದರು. ಬಿಡದಿಯಲ್ಲಿ ಅವರು ಮಾತನಾಡಿ, ಈಗಾಗಲೆ ಚುನಾವಣೆ ಘೋಷಣೆಯಾಗಿದ್ದು, ಇನ್ನುಬ ಕೇವಲ ೨೦ ದಿನಗಳು ಮಾತ್ರ ಇದ್ದು, ನಿಖಿಲ್ ರವರನ್ನ ಎನ್ ಡಿಎ ಅಭ್ಯರ್ಥಿಯನ್ನಾಗಿ ಮಾಡಿದೆ ಒಳ್ಳೆಯದು. ನಾವೆಲ್ಲರೂ ಕೂಡ ಒಗ್ಗಟ್ಟಿನಿಂದ ಹೋರಾಟ ಮಾಡಲು ಅನುಕೂಲವಾಗಲಿದೆ. ಯೋಗೇಶ್ವರ್ ರವರು ವೈಯಕ್ತಿಕ ಅಭಿಪ್ರಾಯ ಹೇಳಿದ್ದಾರಷ್ಟೆ ಅಂತಿಮವಾಗಿ ಎನ್ ಡಿಎ ಅಭ್ಯರ್ಥಿಯೇ ಕಣಕ್ಕಿಳಿಯಲಿದ್ದಾರೆ ಎಂದು ತಿಳಿಸಿದರು.
ನಿಖಿಲ್ ಅಭ್ಯರ್ಥಿಮಾಡುವಂತೆ ಮುಖಂಡರ ಮನವಿ: ಸತತ ಮೂರು ಗಂಟೆಗಳ ಕಾಲ ನಡೆದ ಜೆಡಿಎಸ್ ಕಾರ್ಯಕರ್ತರ ಹಾಗೂ ಪ್ರಮುಖರ ಸಭೆ ಅಂತ್ಯಗೊಂಡಿದ್ದು, ನಿಖಿಲ್ ಅಭ್ಯರ್ಥಿ ಮಾಡುವಂತೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಮನವಿ ಮಾಡಿದರು.
ಬಿಡದಿಯ ಹೆಚ್.ಡಿ.ಕುಮಾರಸ್ವಾಮಿ ಅವರ ತೋಟದ ಮನೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಚನ್ನಪಟ್ಟಣ ತಾಲ್ಲೂಕಿನ ಪ್ರಮುಖ ಮುಖಂಡರಾದ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಜಯಮುತ್ತು, ನಗರ ಜೆಡಿಎಸ್ ಅಧ್ಯಕ್ಷ ಅಜಯ್‌ಕುಮಾರ್, ಪ್ರಸನ್ನ ಪಿ.ಗೌಡ, ಹಾಪ್‌ಕಾಮ್ಸ್ ದೇವರಾಜು, ಗೋವಿಂದಹಳ್ಳಿ ನಾಗರಾಜು, ಕುಕ್ಕೂರುದೊಡ್ಡಿ ಜಯರಾಮು, ನಿಡಗೋಡಿ ಬಾಬು, ಬೆಳಕೆರೆ ಕುಮಾರ್ ಇನ್ನೂ ಹಲವಾರು ಪ್ರಮುಖ ಮುಖಂಡರು ಬಿಜೆಪಿ ನಾಯಕರ ಜೊತೆ ನಿಖಿಲ್ ಸ್ಪರ್ಧೆ ಮಾಡೋದಾಗಿ ತಿಳಿಸುವಂತೆ ಆಗ್ರಹಿಸಿದರು.
ಈಗ ರಾಜ್ಯದಲ್ಲಿ ನಡೆಯುತ್ತಿರುವ ಮೂರು ಕ್ಷೇತ್ರದಲ್ಲಿ ಎರಡು ಕ್ಷೇತ್ರ ಬಿಜೆಪಿ ಬಿಟ್ಟುಕೊಟ್ಟು, ಚನ್ನಪಟ್ಟಣ ಕ್ಷೇತ್ರವನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಡುವಂತೆ ಮನವರಿಕೆ ಮಾಡುವಂತೆ ವರಿಷ್ಠರಿಗೆ ಸೂಕ್ತ ಸಲಹೆ ನೀಡಿದರು.
ಯೋಗೇಶ್ವರ್ ಮನ ಒಲಿಸುವಂತೆ ಸಲಹೆ: ಮಾಜಿ ಶಾಸಕರಾದ ಸಾ.ರಾ.ಮಹೇಶ್, ಅನ್ನದಾನಿ ಅವರ ಜೊತೆಗೂಡಿ ಸಿ.ಪಿ.ಯೋಗೇಶ್ವರ್ ಅವರನ್ನು ಭೇಟಿ ಮಾಡಿ ಅವರ ಮನ ವೊಲಿಸುವ ಜವಾಬ್ದಾರಿಯನ್ನು ಹೆಚ್.ಡಿ.ಕುಮಾರಸ್ವಾಮಿ ಸಾ.ರಾ.ಮಹೇಶ್‌ಗೆ ನೀಡಿದ್ದು, ನಾಳೆಯೇ ಸಿ.ಪಿ.ಯೋಗೇಶ್ವರ್ ಅವರನ್ನು ಭೇಟಿ ಮಾಡಿ ಮೈತ್ರಿ ಅಭ್ಯರ್ಥಿ
ಗೊಂದಲಕೆ ತೆರೆ ಎಳೆಯುವಂತೆ ಸೂಚಿಸಿದರು.



