ರಾಜ್ಯ
Trending

ಡಾ. ಬಿ.ಆರ್. ಅಂಬೇಡ್ಕರ್ ವಿಶ್ವಕ್ಕೆ ಮಾದರಿ ವ್ಯಕ್ತಿತ್ವ ಹೊಂದಿರುವ ಆಧುನಿಕ ಮಹಾನ್ ಪುರುಷ ಎಂದು ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್

ಕೆ.ಆರ್.ಪೇಟೆ ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಅಲಂಬಾಡಿ ಕಾವಲ್ ಗ್ರಾಮದಲ್ಲಿ ಡಾ:ಬಿ.ಆರ್ ಅಂಬೇಡ್ಕರ್ ಯುವಕರ ಬಳಗದಿಂದ ಸಂಘದ ನೂತನ ನಾಮಫಲಕ ಅನಾವರಣ ಹಾಗೂ ಭಾರತ ರತ್ನ,ಸಂವಿಧಾನ ಶಿಲ್ಪಿ, ಡಾ:ಬಿ.ಆರ್.ಅಂಬೇಡ್ಕರ್ ಅವರ 134ನೇ ಜಯಂತೋತ್ಸವ ಅರ್ಥಪೂರ್ಣವಾಗಿ ಜರುಗಿತು.

ಬಿ ಆರ್ ಡಾ: ಅಂಬೇಡ್ಕರ್ ಯುವಕರ ಸಂಘದ ನೂತನ ನಾಮಫಲಕ ಅನಾವರಣಗೊಳಿಸಿ ಮಾತನಾಡಿದ ಸಮಾಜ ಸೇವಕರಾದ ಆರ್‌.ಟಿ.ಓ ಮಲ್ಲಿಕಾರ್ಜುನ್ ಅಂಬೇಡ್ಕ‌ರ್ ಒಂದು ಸಮುದಾಯಕ್ಕೆ ಮೀಸಲಾದವರಲ್ಲ. ಅವರು ಭಾರತದ ಸರ್ವ ಜನಾಂಗದ ಮಾಹನಾಯಕ ಜಯಂತಿಯನ್ನು ನನ್ನ ಹುಟ್ಟೂರಿನಲ್ಲಿ ಅದ್ದೂರಿ ಯಾಗಿ ಸಂಭ್ರಮದಿಂದ ಮಾಡುತ್ತಿರುವುದು ನಿಜಕ್ಕೂ ಶ್ಲಾಘನಿಯ. ಬಾಬಾ ಸಾಹೇಬ್ ಅವರು ಸಂವಿಧಾನದಲ್ಲಿ ಎಲ್ಲರಿಗೂ ಸಮಾನತೆ ನೀಡಿದ್ದು,ಇಂದಿನ ದಿನದಲ್ಲಿ ಹಿಂದುಳಿದ ಜನಾಂಗ ಸಮಾಜದಲ್ಲಿ ಉತ್ತಮ ಸ್ಥಾನ ಪಡೆಯಲು ಸಂವಿಧಾನ ಕಾರಣವಾಗಿದೆ.ಆದ್ದರಿಂದ ನಾವು ಸಂವಿಧಾನನ್ನು ಸಮರ್ಪಕವಾಗಿ ಬಳಸಿಕೊಳ್ಳ ಬೇಕಿದೆ ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಜಯಂತಿ ಆಚರಣೆಗೆ ಅರ್ಥ ಬರುತ್ತದೆ ಎಂದರು.

ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಶಾಸಕ ಹೆಚ್.ಟಿ ಮಂಜು ಅಂಬೇಡ್ಕರ್ ರಚಿಸಿದ ಸಂವಿಧಾನದಿಂದ ಎಲ್ಲರಿಗೂ ಸಮಾನವಾಗಿ ಸಾಮಾಜಿಕ ನ್ಯಾಯ ದೊರಕಿದೆ. ದೇಶದ ಪ್ರತಿಯೊಬ್ಬರಿಗೂ ಚುನಾವಣೆಯಲ್ಲಿ ಸ್ಪರ್ಧಿಸುವ ಹಾಗೂ ಮತದಾನದ ಹಕ್ಕು, ದೊರಕಿಸಿ ಕೊಟ್ಟಿದ್ದಾರೆ. ಅವರ ಆದರ್ಶವನ್ನು ಮೈಗೂಡಿಸಿಕೊಂಡರೆ ಜಾತಿ, ಮತ, ಧರ್ಮಗಳ ನಡುವೆ ಐಕ್ಯತೆಯಿಂದ ಬದುಕಿದರೆ ಮಾತ್ರ ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದ ಅವರು ಸಮಾನತೆ ತರುವ ಸಲುವಾಗಿ ದೇಶಕ್ಕೆ ಸಂವಿಧಾನವನ್ನು ಕೊಡುಗೆ ನೀಡಿದ್ದಾರೆ. ಈ ಮೂಲಕ ಸರ್ಕಾರ ಆಡಳಿತ ನಡೆಸುತ್ತಿದೆ. ಹಾಗಾಗಿ ಅಂಬೇಡ್ಕ‌ರ್ ಅವರು ಒಂದು ವರ್ಗಕ್ಕೆ ಮಾತ್ರ ಸೀಮಿತವಲ್ಲ. ಎಲ್ಲರೂ ಅವರ ಆದರ್ಶಗಳನ್ನು ಗೌರವಿಸಬೇಕು. ಮೊದಲ ಬಾರಿಗೆ ಗ್ರಾಮದಲ್ಲಿ ನಾಮಫಲಕ ಉದ್ಘಾಟಿಸುತ್ತಿರುವುದು ಸಂತಸದ ಸಂಗತಿ. ಬಳಗದ ವತಿಯಿಂದ ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಮಕ್ಕಳ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಯುವಕರಿಗೆ ಸಲಹೆ ನೀಡಿದರು.

ಬಳಿಕ ಪ್ರಧಾನ ಭಾಷಣದಲ್ಲಿ ಮಾತನಾಡಿದ ರಾಷ್ಟ್ರಪ್ರತಿ ಪ್ರಶಸ್ತಿ ಪುರಸ್ಕೃತರಾದ ಡಾ:ಕುಪ್ಪನಹಳ್ಳಿ ಎಂ.ಭೈರಪ್ಪ ಅಂಬೇಡ್ಕರ್ ಎಂದರೆ ಅರಿವು ಹಾಗೂ ಜ್ಞಾನವಾಗಿದೆ. ಅವರ ಜಯಂತಿಯ ಉದ್ದೇಶ, ಆಲೋಚನೆ ಹಾಗೂ ಕನಸನ್ನು ಮುಂದುವರಿಸುವ ಪ್ರಕ್ರಿಯೆಯಾಗಿದೆ. ಇಂದಿನ ಆಡಳಿತಗಾರರ ಆರ್ಭಟದಿಂದ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಪರಿಸ್ಥಿತಿ ಎದುರಾಗಿದೆ. ಇದರ ವಿರುದ್ಧ ದೊಡ್ಡ ಜನಾಂದೋಲನ ನಡೆಯಬೇಕಾಗಿದೆ. ಅಂಬೇಡ್ಕರ್ ಅವರು ರಾಜಕಾರಣಿ, ಸಮಾಜ ಶಾಸ್ತ್ರಜ್ಞ, ಆರ್ಥಿಕ ತಜ್ಞ, ಕಾನೂನು ಪಂಡಿತ, ಕಾರ್ಮಿಕ ನಾಯಕ, ಮಾನವ ಕುಲದ ಏಳಿಗೆಗೆ ನಿರಂತರವಾಗಿ ದುಡಿದ ಶ್ರಮಜೀವಿಯಾಗಿದ್ದಾರೆ.ಯುವಜನರು ದಾರಿ ತಪ್ಪುತ್ತಿದ್ದಾರೆ. ಅವರನ್ನು ಸರಿದಾರಿಗೆ ತರುವ ಕೆಲಸ ಆಗಬೇಕಾಗಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಯಾವುದೇ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದರೂ ದಲಿತರು ಹಾಗೂ ಬಡವರ ಸಮಸ್ಯೆಗಳು ಬಗೆಹರಿಯುತ್ತಿಲ್ಲ ಎಂದು ವಿಷಾದಿಸಿದರು.

ಈ ಕಾರ್ಯಕ್ರಮದಲ್ಲಿ ಎಂ.ಡಿ.ಸಿ.ಸಿ ಬ್ಯಾಂಕ್ ಮಾಜಿ ಅಧ್ಯಕ್ಷ ವಿ.ಡಿ ಹರೀಶ್,ಜಿ.ಪಂ ಮಾಜಿ ಸದಸ್ಯ ಐಪನಹಳ್ಳಿ ನಾಗೇಂದ್ರ ಕುಮಾರ್, ತಾ. ಪಂ ಮಾಜಿ ಅಧ್ಯಕ್ಷ ನಂಜುಂಡೇಗೌಡ,ಗ್ರಾ. ಪಂ ಅಧ್ಯಕ್ಷ ವೆಂಕಟೇಶ್, ಗ್ರಾ. ಪಂ ಮಾಜಿ ಉಪಾಧ್ಯಕ್ಷ ಹಾಲಿ ಸದಸ್ಯ ಎ ರಾಜು, , ಸದಸ್ಯರಾದ ರವಿ, ರೂಪ ಯೊಗೇಂದ್ರ,ಹಿರಿಯ ಮುಖಂಡ ಅಲ್ತಾಪ್, ನಿವೃತ್ತ ಪ್ರಾಂಶುಪಾಲ ರಾಜಯ್ಯ, ಛಲವಾದಿ ಮಹಾ ಸಭಾ ಅಧ್ಯಕ್ಷ ಹುಚನಹಳ್ಳಿ ನಟರಾಜು,ಶಿಕ್ಷಕ ಹಳಿಯೂರು ಯೋಗೇಶ್,ಗ್ರಾ.ಪಂ ಮಾಜಿ ಸದಸ್ಯೆ ಮುತ್ತಮ್ಮ ನಾಗರಾಜು,ಭೂ ನ್ಯಾಯ ಮಂಡಳಿ ಸದಸ್ಯ ರಾಯಪ್ಪ, ಮಪ್ತರ್ ಖಾನ್, ಸಿದ್ದಿಕ್,ನಾಗಣ್ಣ,ಅರ್ಚಕ ನಾಗರಾಜು,ಅಬ್ದುಲ್ ಫಜಿಲ್, ಗೌಸ್ ಖಾನ್,ಸಿದ್ದರಾಜಯ್ಯ, ರಾಜಯ್ಯ,ನಾಗಯ್ಯ,ವೆಂಕಟೇಶಯ್ಯ, ಸ್ವಾಮಯ್ಯ,ಯುವ ಮುಖಂಡ ತನ್ವಿರ್ ಪಾಷ, ಚನ್ನಕೃಷ್ಣ ,ಪ್ರಭಾಕರ್,ಸೇರಿದಂತೆ ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button