Uncategorized
Trending

ಪತ್ರಕರ್ತರಷ್ಠು ದೈರ್ಯವಂತರು ಯಾರೂ ಇಲ್ಲ

ಸಕಲೇಶಪುರ : ಕಾಶ್ಮೀರದಲ್ಲಿ ನಡೆದ ಘಟನೆ ತೋರಿಸುವವರು ಪತ್ರಕರ್ತರೇ ಹೊರತು ಅಧಿಕಾರಿಗಳಿಂದ ಯಾವ ಮಾಹಿತಿಯು ಜನರಿಗೆ ತಲುಪಲ್ಲ . ಪತ್ರಕರ್ತರಷ್ಟು ಧೈರ್ಯವಂತರು ಯಾರು ಇಲ್ಲ ಎಂದು ಸಂಸ್ಥಾಪಕ ರಾಜ್ಯಧ್ಯಕ್ಷರಾದ ಹುಲಿ ಅಮರ್ ನಾಥ್ ಅಭಿಪ್ರಾಯ ವ್ಯಕ್ತಪಡಿಸಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ರಿ) ಸಕಲೇಶಪುರ ತಾಲೂಕು ಘಟಕ ಪದಾಧಿಕಾರಿಗಳ ಪದಾಗ್ರಹಣ ಹಾಗೂ ಕಚೇರಿ ಉದ್ಘಾಟನೆಯನ್ನು ಶಾಸಕರಾದ ಸಿಮೆಂಟ್ ಮಂಜು ಮತ್ತು ಹುಲಿ ಅಮರ್ ನಾಥ್ ಉದ್ಘಾಟನೆ ಮಾಡಿದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಸಂಘಟನೆ ಯಾಕೆ ಮಾಡುತ್ತೇವೆ . ಹಲವು ರೀತಿಯ ಸಂಘಟನೆಗಳು ಇವೆ ಅವರು ಯಾವ ಉದ್ದೇಶಕ್ಕೆ ಸಂಘಟನೆ ಮಾಡುತ್ತಿದ್ದಾರೆ ಎಂಬುದು ಅವರಿಗೆ ಗೊತ್ತು . ಯಾವ ಕಾರಣಕ್ಕೆ ಸಂಘಟನೆ ಮಾಡುತ್ತಿದ್ದಾರೆ ಎಂದರೆ ಅವರಲ್ಲಿ ಆಗುತ್ತಿವ ಸಮಸ್ಯೆ ಸರಿಪಡಿಸಿಕೊಳ್ಳಲು ಸಂಘಟನೆ ಮಾಡುತ್ತಾರೆ.

ನಾವು ಪತ್ರಕರ್ತರು ಯಾಕೆ ಸಂಘಟನೆ ಮಾಡುತ್ತೇವೆ ಅಂದರೆ ಬೇರೆ ಬೇರೆ ಸಂಘಟನೆಗಳು ಪವರ್ ಫುಲ್ ಅಂತ ಹಲವರು ಹೇಳಿದ್ದಾರೆ. ಅಂತ ಹೇಳಿದರೆ ಯಾರಿಂದ ಯಾವ ರೀತಿ ಪವರ್ಫುಲ್ ಆಗಿದೆ ಅಲ್ಲಿ ಪತ್ರಕರ್ತರು ಹೋಗಿ ಸುದ್ದಿ ಮಾಡಿದ್ದರಿಂದ ಸಂಘಟನೆ ಬಿಗಿಯಾಗಿದೆ .ನಮ್ಮ ಸಂಘಟನೆ ಪ್ರಾರಂಭವಾಗಿ ಎರಡು ವರ್ಷ ಆಗಿದೆ ಅಷ್ಟೇ. ಎಲ್ಲಾ ಅಧಿಕಾರಿಗಳು ಆ ಸಂಘಟನೆ ಮ ಮಾತು ಕೇಳಿದಿದ್ದಾರೆ ಎಂದರೆ ಅದು 60, 80 ವರ್ಷದ ಸಂಘ ನೆನ್ನೆ ಮೊನ್ನೆ ಸಂಘ ಅಲ್ಲ 80 ವರ್ಷದ ಸಂಘಕ್ಕೆ ಅಧಿಕಾರಿಗಳು ಹೆದರುತ್ತಿದ್ದಾರೆ. ನಮ್ಮದು ಎರಡು ವರ್ಷದ ಕೂಸು ಮೂರು ವರ್ಷ ಕಳೆಯಲಿ ಯಾವುದೇ ಅಧಿಕಾರಿ ಯಾಗಲಿ ಫಸ್ಟು ನಮ್ಮನ್ನು ಕೇಳುತ್ತಾರೆ ಯಾವ ಕಾರ್ಯಕ್ರಮ ಮಾಡುತ್ತಿದ್ದೀರಿ ಎಂದು. ಆ ರೀತಿಯಾಗಿ ನಮ್ಮ ಸಂಘಟನೆ 100 ಪರ್ಸೆಂಟ್ ಬೆಳೆಯುತ್ತದೆ. ಅದಕ್ಕೆ ಯಾವುದೇ ರೀತಿ ಅನುಮಾನ ಬೇಡ.

ನನ್ನ ಹೆಸರು ಹುಲಿ ಅಮರ್ ನಾಥ್ ಎಂದು ಹುಲಿ ಎಂದರೆ ಎಲ್ಲರೂ ಅಂದು ಕೊಂಡಂತೆ ಸರ್ ನೇಮ್ ಅಲ್ಲ. ಹೂದ್ಕೆರೆ ಲಿಂಗಯ್ಯ ಅಮರ್ ನಾಥ್ ಎಂದು. ಅಚ್ಚ ಕನ್ನಡದಲ್ಲಿ ನನ್ನ ಹೆಸರನ್ನು ಬರ್ಕೋತೀನಿ. ಅದು ಬಿಟ್ಟು ಬೇರೆ ಯಾವುದು ಅಲ್ಲ ಎಂದರು, ನಂತರ ಬೇರೆ ಸಂಘಟನೆ ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಇದೆ. ನಾನೊಬ್ಬನೇ ಬೆಂಗಳೂರನ್ನು ಎದುರಿಸುತ್ತೇನೆ . ನನ್ನನ್ನು ಯಾಕೆ ತಡಿತಾನೇ ಇಲ್ಲ . ಅಂದರೆ ಇನ್ನೊಂದು ಸಂಘಟನೆ ನೋಂದಣಿ ಆಗಿಲ್ಲ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಎಂದು ಅದು ನೋಂದಣಿಯಾಗಿಲ್ಲ ಸುಮ್ಮನೆ ಅವರು ಕಾರ್ಯನಿರತ ಪತ್ರಕರ್ತರ ಸಂಘ ಎಂದು ಹೇಳುತ್ತಾರೆ. ತಾಕತ್ತಿದ್ದರೆ ಅವರು ರಿಜಿಸ್ಟ್ರೇಷನ್ ಕಾಫಿ ತೋರಿಸಲಿ ಎಂದು ಸವಾಲು ಹಾಕಿದರು. ನಾವು ಏನೆ ಮಾಡುತಿವಿ ಎಂದರು, ಉದಾಹರಣೆಗೆ ಒಂದು ಗಾಡಿ ಓಡಿಸುತ್ತೇವೆ ಎಂದರೆ ಡಿ ಎಲ್ ಇರಬೇಕು. ಪೊಲೀಸರು ಕರೆದ ತಕ್ಷಣ ತೋರಿಸುತ್ತೇವೆಯೋ ಅದೇ ರೀತಿ ಆ ಸಂಘಟನೆಯವರು (ಕಾರ್ಯನಿರತ). ಎಂದು ಹೇಳಿಕೊಳ್ಳುವವರು ನೊಂದಣಿ ಪತ್ರ ತೋರಿಸಬೇಕು . ನಾನು ಸಕಲೇಶಪುರಕ್ಕೆ ಬಂದಿದ್ದೇನೆ ಎಂದರೆ ಮೊದಲನೆಯದಾಗಿ ರಿಜಿಸ್ಟ್ರೇಷನ್ ಕಾಫಿ ಎಲ್ಲರಿಗೂ ಕಳಿಸಿದ್ದೇನೆ. ಮೈಸೂರಿನಲ್ಲಿಯೂ ಸಹ ದಾಖಲೆ ಕೊಟ್ಟು ಸಂಘಟನೆ ಮಾಡಿದ್ದೇವೆ, ಪತ್ರಕರ್ತರಿಗ ಧೈರ್ಯ ತುಂಬುತ್ತೇನೆ . ನಾವು ಸರಿಯಾಗಿದ್ದೇವೆ. ಯಾವ ಅಧಿಕಾರಿಯೂ ನೂರಕ್ಕೆ 100% ಸರಿಯಾಗಿಲ್ಲ ನನ್ನ ಮೇಲೆ ಎಷ್ಟೇ ಕೇಸುಗಳಾದರೂ ಸರಿ ತಲೆಕೆಡಿಸಿಕೊಳ್ಳುವುದಿಲ್ಲ . ಅಧಿಕಾರಿಗಳನ್ನು ಮೊದಲು ಎದುರಿಸಬೇಕು. ಯಾವ ರೀತಿ ಎದುರಿಸಬೇಕೆಂದರೆ ಲೋ … ಬಾರೋ ಇಲ್ಲಿ ಯಾಕೋ ಕೂತಿದ್ದೀಯಾ ಎಂದಲ್ಲ ಹೆದರಿಸುವುದು, ಕಾನೂನು ರೀತಿಯಲ್ಲಿ ನಮ್ಮ ಮಾತು ಹೆಗಿರಬೇಕೆಂದರೆ ಅಧಿಕಾರಿಗಳು ವಾಪಸು ಉತ್ತರ ಕೊಡಲು ಆಗಬಾರದು ನೀನೇಕೆ ಇಲ್ಲಿ ಕೂತಿದ್ದೀಯಾ ? ನಿಂದು ಎಲ್ಲಿ ಐಡಿ ಕಾರ್ಡ್? ಎಲ್ಲಿ ನಿನ್ನ ಡೆಸಿಗ್ನೇಷನ್ ಏನು ಅಂತ ಕೇಳುವುದಲ್ಲ . ನಾವು ಅಧಿಕಾರಿಗಳ ಹತ್ತಿರ ಮಾತನಾಡುವುದು ಕಾನೂನು ರೀತಿ ಇರಬೇಕು. ಪ್ರಶ್ನೆಗೆ ಉತ್ತರ ಕೊಡಲು ಹೆದರಬೇಕು. ಅಧಿಕಾರಿಗಳೇ ಕಾರ್ಯಕ್ರಮಕ್ಕೆ ಬರಬೇಕು ಅಂತೇನಿಲ್ಲ. ವೇದಿಕೆ ಮೇಲೆ ಕುಳಿತುಕೊಳ್ಳಲು ಅಧಿಕಾರಿ ಆಗದಿದ್ದರೂ ಸಮಾಜದಲ್ಲಿ ಗುರುತಿಸಿಕೊಂಡಿರುವ ವ್ಯಕ್ತಿಯನ್ನು ವೇದಿಕೆ ಮೇಲೆ ಕೂರಿಸಿ. ಆಗ ಧೈರ್ಯವಾಗಿ ಮಾತನಾಡುತ್ತಾರೆ, ಧೈರ್ಯವಾಗಿ ನಮ್ಮ ಜೊತೆ ಇರುತ್ತಾರೆ, ಅದನ್ನು ನಮ್ಮ ಸಂಘಟನೆ ಮಾಡಬೇಕು ಸಮಾಜದಲ್ಲಿ ಡಿಸ್ಟಿಂಕ್ಷನ್ ಬಂದ ಮಕ್ಕಳನ್ನು ಗುರುತಿಸಿ ಎಂದರು.

ನಂತರ ರಘು ಹಾಗೂ ರಾಜಣ್ಣಮಾತನಾಡಿದ ಹಾಗೆ ಪತ್ರಕರ್ತರ ಸಮಸ್ಯೆ ಪರಿಹಾರ ಮಾಡಿಯೇ ತಿರುತ್ತೇನೆ . ನಮ್ಮ ಪತ್ರಕರ್ತರು ಯಾವುದಕ್ಕೂ ಹೆದರಿಕೊಳ್ಳಬೇಕಾಗಿಲ್ಲ. ಪಿ ಡಬ್ಲ್ಯೂ ಡಿ ಎ ಇಇ ಆಗಿರಬಹುದು, ತಹಸಿಲ್ದಾರ್ ಆಗಿರಬಹುದು, ಯಾರೊಬ್ಬರೂ ಕರೆಕ್ಟಾಗಿ ಇಲ್ಲ ಅವರು ಗಾಜಿನ ಮನೆಯಲ್ಲಿ ಇರೋದು, ಆ ಗಾಜಿನ ಮನೆಗೆ ಕಲ್ಲು ಹೊಡೆಯುವವರೆ ನಾವುಗಳು. ಇದನ್ನು ಪತ್ರಕರ್ತರು ಅರ್ಥ ಮಾಡ್ಕೊಳ್ಳಿ , ಒಬ್ಬರು ಅಧಿಕಾರಿ ಕರೆಕ್ಟಾಗಿದ್ದಾರೆ ಎಂದರೆ ಅದು ಸುಳ್ಳು ಯಾವುದೇ ಕಾರಣಕ್ಕೂ ಸರಿಯಾಗಿ ಕೆಲಸ ಮಾಡಲು ಸಾಧ್ಯವೇ ಇಲ್ಲ ಎಲ್ಲಿ ಹೋದರೂ ಅಷ್ಟೇ ಅವರು ತಪ್ಪುಗಳನ್ನು ಎತ್ತಿ ಹಿಡಿಯಿರಿ, ಯಾಕೆ ಬರೋದಿಲ್ಲ .ನಮ್ಮ ಕಾರ್ಯಕ್ರಮಗಳಿಗೆ ನಮ್ಮನ್ನು ಹುಡುಕಿಕೊಂಡು ಬಂದೇ ಬರುತ್ತಾರೆ ನಮ್ಮನ್ನು ಹುಡುಕಿಕೊಂಡು ಬರುವಂತೆ ನಾವು ಮಾಡಬೇಕು . ಅಂತ ಕೆಲಸಗಳನ್ನು ಮಾಡಿ ಸಂಘಟನೆ ಮಾಡಿದ್ದೇವೆ . ಸಂಘಟನೆ ಬಲ ತೋರಿಸಿ . ನಿಮ್ಮ ಜೊತೆ ನಾವಿದ್ದೇವೆ ಇಲ್ಲಿ ಕುಳಿತಿರುವ ಪತ್ರಕರ್ತ ಸಂಘಟನೆ ಗಳ ಅಧ್ಯಕ್ಷರು ಪದಾಧಿಕಾರಿಗಳು ಪ್ರಬಲರಾದರೆ ಎಲ್ಲರೂ ಬಂದೇ ಬರುತ್ತಾರೆ. ನಾವು ಸಂಘಟನೆ ಮಾಡೋಣ ಎಂದರು.

ಅದ್ದರಿಂದ ಕಾಶ್ಮೀರದಲ್ಲಿ ಆಗಿರುವ ಘಟನೆ ತೋರಿಸುವವರು ಅಧಿಕಾರಿಗಳಲ್ಲ ರೀ‌….ಪತ್ರಕರ್ತರೆಲ್ಲರೂ ಇದನ್ನು ಅರ್ಥಮಾಡಿಕೊಳ್ಳಬೇಕು. ಯಾವುದೇ ಅಧಿಕಾರಿಗಳು ಇಲ್ಲಿಯವರೆಗೂ ಏನು ನಡೆದಿದೆ ಎನ್ನುವುದನ್ನು ತೋರಿಸಿಲ್ಲ ಒಂದೇ ಅಲ್ಲ ಯಾವುದೇ ಘಟನೆ ನಡೆದಾಗಲೂ ಅದನ್ನು ಎತ್ತಿ ಹಿಡಿಯುವುದು ಪತ್ರಕರ್ತರು. ಆದರೆ ನಮ್ಮ ಪತ್ರಕರ್ತರಿಗೆ ಯಾವುದೇ ರೀತಿಯ ಬಂಧು ಬಸ್ತ್ ಇಲ್ಲ. ನಮ್ಮ ನಮ್ಮ ಹೆಂಡತಿ ಮಕ್ಕಳಿಗೂ ಕೂಡ ಯಾವುದೇ ರೀತಿಯ ಭದ್ರತೆ ಇಲ್ಲ. ಇವತ್ತು ನಮ್ಮನ್ನು ಬೈಯುತ್ತಾರೆ .ಎಷ್ಟೋ ಕಡೆ ಹೆದರಿಸಿ ಕಳಿಸಿದ್ದಾರೆ. ಯಾಕೆ ಅಲ್ಲಿದ್ದೀರಿ? ನೀವ್ಯಾರು ಬರುವುದಕ್ಕೆ? ಎಂದು ಕೇಳುತ್ತಾರೆ ನಮ್ಮಂತಹ ಧೈರ್ಯ ಮಾಡುವ ಗಂಡಸು ಬೇರೆ ಯಾರು ಇಲ್ಲ . ಪತ್ರಕರ್ತರಿಗಿರುವ ಧೈರ್ಯ ಬೇರೆ ಯಾರಿಗೂ ಇಲ್ಲ .ಪತ್ರಕರ್ತರು ಎಲ್ಲೇ ಹೋದರು ಪ್ರಶ್ನೆ ಮಾಡುತ್ತಾರೆ. ಕಾನೂನು ಕೇಳುತ್ತಾರೆ, ಎಲ್ಲಾ ರೀತಿಯ ಸೌಲಭ್ಯಗಳಲ್ಲಿ ಏನು ತಪ್ಪಾಗಿದೆ ಎಂದು ಪ್ರಶ್ನೆ ಮಾಡಿ ಕೇಳುವಂತಹ ಹಕ್ಕು ಇರುವುದು ಪತ್ರಕರ್ತರಿಗೆ ಮಾತ್ರ. ಅದಕ್ಕೆ ಪತ್ರಕರ್ತರ ನೋಡಿದರೆ ತೊಂದರೆ ಹೇಳಿಕೊಳ್ಳುತ್ತಾರೆ. ದಯವಿಟ್ಟು ಯಾರು ಯಾವುದಕ್ಕೂ ಯಾರಿಗೂ ಹೆದರಿಕೊಳ್ಳ ಬೇಡಿ ನಾವು ಸಂಘಟನೆ ಮಾಡಿದ್ದೇವೆ .ಸಂಘಟನೆ ಮಾಡಿ ಒಗ್ಗಟ್ಟಾಗಿದ್ದರೆ ನಮ್ಮ ಒಂದೇ ಒಂದು ರೋಮ ಅಲ್ಲಾಡಿಸಲಾಗಲ್ಲ.ಅಲ್ಲಾಡಿಸಿದರೆ ನಮ್ಮ ಸಂಘಟನೆ ಈಗ ಪ್ರಭಲವಾಗಿದೆ . ಈ ಕೆಲಸ ಯಾವ ಸಂಘಟನೆ ಮಾಡಿಲ್ಲ. ಎಷ್ಟೋ ಸಂಘಟನೆಗಳು ಇವೆ ಪತ್ರಕರ್ತರಿಗೆ ಏನು ಮಾಡಿದ್ದಾರೆ? ಇದುವರೆಗೆ ಇದ್ದ ಪತ್ರಕರ್ತರ ಸಂಘಟನೆ ಏನು ಮಾಡಿದೆ. ಪತ್ರಕರ್ತರಿಗೆ ಏನು ಮಾಡಿದೆ ಎಂದು ಯಾವುದೇ ಸಂಘಟನೆ ಕೇಳಿ ನೋಡಿ. ಪತ್ರಕರ್ತ ಸಂಘಟನೆಗಳು ಇಲ್ಲಿನ ಪತ್ರಕರ್ತರಿಗೆ ಯಾವುದೇ ರೀತಿ ಅನುಕೂಲ ಮಾಡಿಲ್ಲ. ನಾವು ಎಲ್ಲ ಕಡೆ ನೋಡಬಹುದು .ಅಧಿಕಾರಿಗಳ ಬಡಾವಣೆ ಐಎಎಸ್ ಅಧಿಕಾರಿಗಳ ಬಡವಣೆ ಇದೆ, ಪೊಲೀಸ್ ಅಧಿಕಾರಿಗಳ ಬಡಾವಣೆ ಇದೆ,ಪ್ರತಿಯೊಂದು ಅಧಿಕಾರಿಗಳಿಗೂ ಬಡಾವಣೆಗಳಿವೆ ಆದರೆ ಪತ್ರಿಕರ್ತರ ಬಡಾವಣೆ ಎಂದು ಎಲ್ಲಿ ಮಾಡಿದ್ದಿರಿ? ಎಂದು ಪ್ರಶ್ನೆ ಮಾಡಿದರು ಪತ್ರಕರ್ತರಿಗೆ ಯಾವ ರೀತಿ ಸೌಲಭ್ಯಗಳು ಸಿಕ್ಕಿದೆ ಎಂದು ಕೇಳಿ, ಎಲ್ಲೂ ಕೊಟ್ಟಿಲ್ಲ, ಪತ್ರಕರ್ತ ಎಂದರೆ ಒಂದು ರೀತಿ ಮಾತಾನಾಡು ತ್ತಾರೆ, ಅಧಿಕಾರಿಗಳಾದರೆ ಒಂದು ರೀತಿ ಮಾತನಾಡುತ್ತಾರೆ, ಅಧಿಕಾರಿಗಳ ಸಹವಾಸ ಯಾಕಪ್ಪ ಬೇಕು ಎಂದು ಹೇಳುತ್ತಾರೆ. ಆದರೆ ಅಧಿಕಾರಿಗಳನ್ನು ಗುರುತಿಸಿ ಪ್ರಚಾರ ಮಾಡುವುದೇ ನಾವು ಒಬ್ಬ ಪೊಲೀಸ್ ಇನ್ಸ್ಪೆಕ್ಟರ್ ಸಾಧನೆ ಮಾಡಿರುವುದನ್ನು ತೋರಿಸುವುದು ಪತ್ರಕರ್ತ, ಪತ್ರಕರ್ತರಾದ ನಾವು ತೋರಿಸುವ ತನಕ ಯಾವ ಅಧಿಕಾರಿ ಏನು ಮಾಡಿದ್ದಾನೆ ಎಂದು ಯಾರಿಗೆ ಗೊತ್ತಾಗಲ್ಲ, ನಾವು ತೋರಿಸದಿದ್ದರೆ ಅವರೆಲ್ಲ ಕಾಣಿಸಿಕೊಂಡರು ಯಾರಿಗೂ ಗೊತ್ತಾಗಲ್ಲ ಇವನು ಇದ್ದಾನೆ ಎಂದು ಇವನೇ ಎಸಿ ಇವನೇ ಡಿಸಿ ಎಂದು ನಾವು ತೋರಿಸದಿದ್ದರೆ ಯಾರಿಗೂ ಗೊತ್ತಾಗಲ್ಲ. ನಾವು ನಮ್ಮ ಸಂಘಟನೆಯನ್ನು ಬಿಗಿಗೊಳಿಸೋಣ ಉತ್ತಮ ಕೆಲಸ ಮಾಡಿ ಪತ್ರಕರ್ತರಿಗೆ ಗೌರವ ಬರುವಂತೆ ಮಾಡೋಣ ಎಂದರು . ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೈರಪ್ಪ ಸಕಲೇಶ್ವರ್ ವಹಿಸಿದ್ದರು. ಕಾರ್ಯಕ್ರಮಕ್ಕೆ ಕಾಂಗ್ರೆಸ್ ಮುಖಂಡರಾದ ಮುರಳಿ ಮೋಹನ್ ಆಗಮಿಸಿ ಶುಭ ಕೋರಿದರು, ಕನ್ನಡ ಸಾಹಿತ್ಯ ಪರಿಷತ್ತ್ ಅಧ್ಯಕ್ಷರಾದ ಶಾರಧ ಗುರುಮೂರ್ತಿ ಮಾತನಾಡಿದರು.

ಸಂಘದ ಉಪಾಧ್ಯಕ್ಷರಾದ ಎಸ್ ಪಿ ಸತ್ಯನಾರಾಯಣ್ ನಿರೂಪಣೆ ಮಾಡಿದರು. ಮೈಸೂರು ಜಿಲ್ಲಾಧ್ಯಕ್ಷರಾದ ವಿಜಯ್ ಕುಮಾರ್ . ಬೆಂಗಳೂರು ನಗರ ಜಿಲ್ಲಾ ಅಧ್ಯಕ್ಷರಾದ ಪ್ರಕಾಶ್, ಕೆ ಆರ್ ಪೇಟೆ ತಾಲೋಕು ಅಧ್ಯಕ್ಷರಾದ ಲೋಕೇಶ್, ಹಾಸನ ಘಟಕದ ರಘು ಗೌಡ, ಆಲೂರು ತಾಲೂಕು ಅಧ್ಯಕ್ಷರಾದ ಧರಣೆoದ್ರ . ಭರತ್. ಸಿಡಿ ಮಂಜು ಉಪಸ್ಥಿತರಿದ್ದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಂತಹ ಪತ್ರಕರ್ತರು ಉಪಸ್ಥಿತರಿದ್ದರು.ಈ ಸಭೆಯಲ್ಲಿ ಸಕಲೇಶಪುರ ತಾಲೂಕು ಘಟಕದ ಪದಾಧಿಕಾರಿಗಳ ಪದಗ್ರಹಣ ನೆರೆ ವೆರಿತು.

ತಾಲೂಕು ಘಟಕದ ಅಧ್ಯಕ್ಷರಾಗಿ ಬೈರಪ್ಪ ಸಕಲೇಶ್ವರ್, ಉಪಾಧ್ಯಕ್ಷರಾಗಿ ಎಸ್ ಪಿ ಸತ್ಯನಾರಾಯಣ್, ಪ್ರಧಾನ ಕಾರ್ಯದರ್ಶಿಯಾಗಿ, ಸಗಿರ್ ಅಹಮದ್, ಕಾರ್ಯದರ್ಶಿಯಾಗಿ ರಮೇಶ್, ಸಂಘಟನಾ ಕಾರ್ಯದರ್ಶಿಯಾಗಿ ನಾಗೇಶ್ ಮಾಗೇರಿ, ಖಜಾಂಚಿಯಾಗಿ ಅರವಿಂದ್ ಬಿಳಿಸಾರೆ, ನಿರ್ದೇಶಕರಾಗಿ ಎಸ್ ಬಿ ಧರ್ಮದರ್ಶಿ ಇವರುಗಳಿಗೆ ಪದಗ್ರಹಣ ಸಮಾರಂಭ ನಡೆಯಿತು.

Related Articles

Leave a Reply

Your email address will not be published. Required fields are marked *

Back to top button