ಕ್ರೈಂ
Trending

ಬೆಂಗಳೂರಿಗೆ ಬಂತು ಗಾಂಜಾ ಮಿಶ್ರಿತ ಜೆಲ್ಲಿ ಚಾಕೊಲೇಟ್

ನಗರಕ್ಕೆ ಹೊಸ ಮಾದರಿಯ ಜೆಲ್ಲಿ ಗಾಂಜಾ (ganja) ಎಂಟ್ರಿ ಕೊಟ್ಟಿದೆ. ಜೆಲ್ಲಿ ಚಾಕೊಲೇಟ್​​ನಲ್ಲಿ ಗಾಂಜಾ ಮಿಕ್ಸ್ ಮಾಡಿ ಮಾರಾಟ ಮಾಡಲಾಗುತ್ತಿದ್ದು, ಮೆಡಿಕಲ್ ಹಾಗೂ ಇಂಜಿನಿಯರಿಂಗ್​​ ವಿದ್ಯಾರ್ಥಿಗಳನ್ನು ಟಾರ್ಗೆಟ್​ ಮಾಡಲಾಗುತ್ತಿದೆ. ಈ ಬಗ್ಗೆ ಬ್ಯಾಟರಾಯನಪುರ ಪೊಲೀಸರಿಗೆ ಬಂದ ಮಾಹಿತಿ ಮೇರೆಗೆ ಇದೀಗ ಜೆಲ್ಲಿ ಗಾಂಜಾ ಗ್ಯಾಂಗ್​​ ಅನ್ನು ಬಂಧಿಸಿದ್ದಾರೆ (Arrested). ಮೊಹಮದ್ ಜಾಹೀದ್ ಹಾಗೂ ಇಸ್ಮಾಯಿಲ್ ಅದ್ನಾನ್ ಬಂಧಿತ ಆರೋಪಿಗಳು. ತಲೆಮರೆಸಿಕೊಂಡ ಮತ್ತೊಬ್ಬ ಆರೋಪಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.

ಬ್ಯಾಟರಾಯನಪುರ ಇನ್ಸ್‌ಪೆಕ್ಟರ್ ಕೆ.ಜೀವನ್ ನೇತೃತ್ವದ ತಂಡದಿಂದ ಕಾರ್ಯಾಚರಣೆ ಮಾಡಿದ್ದು, ಒಟ್ಟು ಮೂರು ಲಕ್ಷ ಮೌಲ್ಯದ 1440 ಗ್ರಾಂ ಗಾಂಜಾ ವಶಕ್ಕೆ ಪಡೆದಿದ್ದಾರೆ. ತಬಿಖೆ ವೇಳೆ ಗಾಂಜಾದ ಬಟ್ಟಿ ಇಳಿಸಿರುವ ರಸವನ್ನೇ ಜೆಲ್ಲಿ ಚಾಕೊಲೇಟ್ ಜೊತೆ ಬೆರೆಸುತ್ತಿರುವುದು ಪತ್ತೆ ಆಗಿದೆ.ಹೆಬ್ಬಾಳದ ವಿಶ್ವನಾಥ ನಾಗೇನಹಳ್ಳಿಯಲ್ಲಿ ಆರೋಪಿಗಳು ವಾಸವಿದ್ದರು. ಮಂಗಳೂರು ಮೂಲದ ಸ್ನೇಹಿತನ ಮೂಲಕ ದಂಧೆ ನಡೆಸುತ್ತಿದ್ದರು. ಸದ್ಯ ಆರೋಪಿಗಳು ಈ ಜೆಲ್ಲಿ ಗಾಂಜಾವನ್ನು ಎಲ್ಲಿ ತಯಾರು ಮಾಡುತ್ತಿದ್ದರು ಎಂಬುದರ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.

ಗಾಂಜಾದ ಬಟ್ಟಿ ಇಳಿಸಿರುವ ರಸವನ್ನೇ ಈ ಜೆಲ್ಲಿ ಚಾಕೊಲೇಟ್‌ಗಳ ಜೊತೆ ಬೆರೆಸುತ್ತಾರೆ. ಒಂದು ಪ್ಯಾಕ್​ ಜೆಲ್ಲಿ ಗಾಂಜಾಗೆ ಬರೋಬ್ಬರಿ 6 ಸಾವಿರ ರೂ. ಜೆಲ್ಲಿ ಬಾಯಿಗೆ ಇಟ್ಟ ಬಳಿಕ ಕರಗುತ್ತೆ. ಆಮೇಲೆ ಅಗೆದಷ್ಟು ಮತ್ತಲ್ಲಿ ತಲೆತಿರುಗುತ್ತೆ.ಗಾಂಜಾ ಸೊಪ್ಪು, ಹ್ಯಾಶ್ ಆಯಿಕ್​​ಗಿಂತ ಈ ಜೆಲ್ಲಿ ಗಾಂಜಾ ಕಿಕ್ಕು ಹೆಚ್ಚು ಎನ್ನಲಾಗುತ್ತಿದೆ. ಪಾಕೆಟ್​​ನಲ್ಲಿಟ್ಟುಕೊಂಡರೂ ಯಾರಿಗೂ ಡೌಟ್ ಬರಲ್ಲ. ಒಂದು ವೇಳೆ ಪೊಲೀಸರೇ ತಡಕಾಡಿದರೂ ಪೆಡ್ಲರ್ ಯಾರು, ಗ್ರಾಹಕ ಯಾರು ಎಂದು ಕಂಡು ಹಿಡಿಯುವುದಕ್ಕೆ ಆಗುವುದಿಲ್ಲವಂತೆ.

ಇನ್ನು ಇತ್ತೀಚೆಗೆ ಬೆಂಗಳೂರು ಹೊರವಲಯದ ಸೋಲದೇವನಹಳ್ಳಿ ವ್ಯಾಪ್ತಿಯಲ್ಲಿ ಮನೆ ಮಾಡಿಕೊಂಡು ಡ್ರಗ್ ಡೀಲ್ ಮಾಡುತ್ತಿದ್ದ ವಿದೇಶಿ ಡ್ರಗ್ ಪೆಡ್ಲರ್ ಡೇನಿಯಲ್ ಎಂಬುವವನ್ನು ಬಂಧಿಸಿ ಬರೋಬ್ಬರಿ ನಾಲ್ಕು ಕೋಟಿ ಮೌಲ್ಯದ 2.5 ಕೆಜಿ ಎಂಡಿಎಂಎ ಕ್ರಿಸ್ಟೆಲ್ ಸೀಜ್ ಮಾಡಲಾಗಿತ್ತು.ನೈಜೀರಿಯಾ ಮೂಲದ ಆರೋಪಿ ಬ್ಯುಸಿನೆಸ್ ವೀಸಾದಡಿ ಬೆಂಗಳೂರಿಗೆ ಬಂದು, ತನ್ನ ದೇಶದಿಂದಲೇ ಕೆಜಿಗಟ್ಟಲೇ ಡ್ರಗ್ ತಂದು ಡೀಲರ್​ಗಳಿಗೆ ಮಾರಾಟ ಮಾಡಿ ಹಣ ಸಂಪಾದಿಸುತ್ತಿದ್ದ. ಡ್ರಗ್ ಡೀಲ್ ಮಾಡಲು ಸೆಕೆಂಡ್ ಹ್ಯಾಂಡ್ ಬೈಕ್ ಸಹ ಬಳಸುತ್ತಿದ್ದ. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ್ದ ಸಿಸಿಬಿ ಮಾದಕ ದ್ರವ್ಯ ನಿಗ್ರಹದಳದ ಅಧಿಕಾರಿಗಳು ಆರೋಪಿ ಬಂಧಿಸಿ ಜೈಲಿಗಟ್ಟಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button