ಮಂಡ್ಯ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಶಾಸಕ ಕೆ.ಎಂ ಉದಯ್

ಕೆ.ಎಂ ದೊಡ್ಡಿ :-
ಮಂಡ್ಯ ಜಿಲ್ಲೆ ಹಾಗೂ ಮದ್ದೂರು ತಾಲೂಕಿನ ಸಮಗ್ರ ಅಭಿವೃದ್ಧಿಗಾಗಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮದ್ದೂರು ತಾಲೂಕಿನ ಮಹಾಜನತೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ಮದ್ದೂರು ಶಾಸಕ ಕೆ.ಎಂ ಉದಯ್ ರವರು ಮನವಿ ಮಾಡಿದರು.
ಕೆ.ಎಂ.ದೊಡ್ಡಿ ಸಮೀಪದ ಮೆಳ್ಳಹಳ್ಳಿಯ ವೀರ ಯೋಧ ಗುರು ಸ್ಮಾರಕದ ಬಳಿ ರೈತ ಸಂಪರ್ಕ ಕೇಂದ್ರಕ್ಕೆ ಸುಮಾರು 2ಕೋಟಿ ವೆಚ್ಚದಲ್ಲಿ ಗುದ್ದಲಿ ಪೂಜೆ ನೆರವೇರಿಸಿದರು.
ಇದೆ ಸಂದರ್ಭದಲ್ಲಿ ಮಾತನಾಡಿದ ಶಾಸಕ ಕೆ.ಎಂ ಉದಯ್ ರವರು ಮದ್ದೂರಿನ ಸರ್ವಾಂಗಿಣ ಅಭಿವೃದ್ದಿ ಗುರಿ ಹೊಂದಿದ್ದೆನೆ ರೈತರಿಗೆ ಅನೂಕುಲವಾಗಲೆಂದು ಈ ಭಾಗದಲ್ಲಿ ರೈತ ಸಂಪರ್ಕ ಕೇಂದ್ರ ಗುದ್ದಲಿ ಪೂಜೆ ನೇರವೇರಿಸಿದ್ದು ತ್ವರಿತಗತಿಯಲ್ಲಿ ಕೆಲಸ ಮುಗಿಸಿ ರೈತ ಸಂಪರ್ಕ ಕೇಂದ್ರದ ಪ್ರಯೋಜನವನ್ನು ರೈತರು ಪಡೆಯಬಹುದು ಎಂದರು. ರೈತ ಸಂಪರ್ಕ ಕೇಂದ್ರದಿಂದ ಕೃಷಿಕರು ಸರ್ಕಾರದ ಸವಲತ್ತುಗಳನ್ನು ಭ್ರಷ್ಟಾಚಾರ ರಹಿತವಾಗಿ ಪಡೆದುಕೊಳ್ಳುವ ವ್ಯವಸ್ಥೆಯಿದೆ.ರೈತರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ನೀಡುವ ಸವಲತ್ತುಗಳನ್ನು ನೇರವಾಗಿ ರೈತರಿಗೆ ನೀಡಲಾಗುತ್ತದೆ.
ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಯಾವುದೇ ಯೋಜನೆಗಳು ಸ್ಥಗಿತಗೊಳಿಸುವ ಮಾತೆ ಇಲ್ಲ ಎಂದು ಹೇಳಿದರು. ಕಾಂಗ್ರೆಸ್ ಪಕ್ಷದ ಮೇಲೆ ವಿಶ್ವಾಸವಿಟ್ಟು ಅಧಿಕಾರ ಕೊಟ್ಟಿದ್ದೀರಿ ನಮ್ಮ ಸರ್ಕಾರ ಯಾವತ್ತು ಜನಪರ ನಿಲುವನ್ನೇ ಹೊಂದಿದೆ ಎಂದರು.
ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ನೀಡಿದ ಗ್ಯಾರಂಟಿ ಭರವಸೆಗಳನ್ನು ಈಡೇರಿಸಿ ಗ್ಯಾರಂಟಿಗಳು ಸಮರ್ಪಕವಾಗಿ ತಲುಪಿಸುವ ನಿಟ್ಟಿನಲ್ಲಿ ಕೆಲಸ ಮಾಡಿದ್ದೇವೆ,ಅಲ್ಲದೆ ಮದ್ದೂರು ತಾಲೋಕಿನ ಅಭಿವೃದ್ಧಿಗೆ ಚುನಾವಣಾ ಪೂರ್ವ ನೀಡಿದ್ದ ಭರವಸೆಗಳನ್ನು ಹಂತ ಹಂತವಾಗಿ ಈಡೇರಿಸುತ್ತಿದ್ದೇವೆ.
ತಾಲೂಕಿನ ಅಭಿವೃದ್ಧಿವಿಷಯಕ್ಕೆ ಬಂದರೆ ಈಗಾಗಲೇ ಸರ್ಕಾರದಿಂದ 290ಕೋಟಿ ಅನುದಾನ ತಂದು ತಾಲೂಕಿನ ರಸ್ತೆ ,ಕಾಲುವೆ, ಕೆಮ್ಮಣ್ಣು ಕಾಲುವೆ ಸರ್ಕಾರಿ ಶಾಲೆ,ಅಸ್ಪತ್ರೆ, ಪಶು ಚಿಕಿತ್ಸಾಲಯಗಳನ್ನು ಅಭಿವೃದ್ದಿ ಇನ್ನೂ ಹತ್ತು ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತ ಬಂದಿದ್ದು ತಾಲೋಕಿನ ಅಭಿವೃದ್ಧಿಗೆ ಪಕ್ಷಾತೀತವಾಗಿ ನನ್ನ ಜೊತೆ ಕೈಜೋಡಿಸಬೇಕು ಎಂದರು.
ಈಗಾಗಲೇ ನಮ್ಮ ಪಕ್ಷದ ಅಭಿವೃದ್ಧಿ ಕಾರ್ಯಗಳನ್ನು ಮನಗಂಡು ಅನ್ಯ ಪಕ್ಷಗಳ ಕಾರ್ಯಕರ್ತರು ಯುವಕರು ಪಕ್ಷವನ್ನು ತೊರೆದು ಸ್ವಯಂಪ್ರೇರಿತವಾಗಿ ಕಾಂಗ್ರೆಸ್ ಪಕ್ಷವನ್ನು ಸೇರುತ್ತಿದ್ದಾರೆ ಎಂದು ತಿಳಿಸಿದರು.
ಕೆ.ಎಂ ದೊಡ್ಡಿ ಭಾಗದಲ್ಲಿ ಕಬ್ಬಿನ ಕಾರ್ಖಾನೆ,ಶಾಲಾ ಕಾಲೇಜುಗಳಲ್ಲಿ ಇರುವದುದ್ದರಿಂದ ಕಬ್ಬು ತುಂಬುಕೊಂಡು ಬರುವ ರೈತರು ಶ್ರಮಿಕರು ಶಾಲಾ ಕಾಲೇಜುಗಳ ಬರುವಂತಹ ವಿದ್ಯಾರ್ಥಿಗಳ ಹಸಿವು ನೀಗಿಸುವ ನಿಟ್ಟಿನಲ್ಲಿ ಶೀಘ್ರದಲ್ಲೇ ಜಾಗ ಗುರುತಿಸಿ ಇಂದಿರಾ ಕ್ಯಾಂಟಿನ್ ತೆರೆಯಲಾಗುವುದು.
ಇದೆ ಸಂದರ್ಭದಲ್ಲಿಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಎ.ಎಸ್.ರಾಜೀವ್,ಕೆ.ಪಿ.ದೊಡ್ಡಿ ಶಿವರಾಮು, ಗ್ರಾ.ಪಂ.ಅದ್ಯಕ್ಷೆ ಕೌಶಲ್ಯ ಅರ್ಕೇಶ್,ಸದಸ್ಯರಾದ ಪುಟ್ಟರಾಮು,ಕೆ.ಟಿ.ಶ್ರೀನಿವಾಸ್,ಕೆ.ವಿ.ಶ್ರೀನಿವಾಸ್, ವಕ್ರತುಂಡ ವೆಂಕಟೇಶ ಸೇರಿದಂತೆ ಹಲವಾರು ಉಪಸ್ಥಿತರಿದ್ದರು.



