ಇತ್ತೀಚಿನ ಸುದ್ದಿರಾಜ್ಯ

ಅಕ್ಟೊಬರ್ 20ರಂದು ಪ್ರಾಂತ್ಯ ಹವ್ಯಕ ವಾಣಿಜ್ಯೋತ್ಸವ ಸ್ವ-ಉದ್ಯಮಿಗಳ ಸಮಾವೇಶ ಸಾಗರದಲ್ಲಿ.

ಸಾಗರ ಶ್ರೀ ಅಖಿಲ ಹವ್ಯಕ ಮಹಾಸಭೆಯ ಆಶ್ರಯದಲ್ಲಿ ಡಿಸೆಂಬರ್ 27ರಿಂದ 29ರವರೆಗೆ 3 ದಿನ ಬೆಂಗಳೂರಿನ ಅರಮನೆ ಮೈದಾನದಲ್ಲಿ ಮೂರನೇ ವಿಶ್ವ ಹವ್ಯಕ ಮಹಾ ಸಮ್ಮೇಳನ ಆಯೋಜನೆಗೊಂಡಿದೆ.
ಅದರ ಪರ‍್ವ ಸಿದ್ಧತೆಯ ಹಿನ್ನೆಲೆಯಲ್ಲಿ ಪ್ರಾದೇಶಿಕವಾಗಿ ವಿವಿಧ ರೀತಿಯ ಸಮ್ಮೇಳನಗಳನ್ನು ರಾಜ್ಯಾದ್ಯಂತ ನಡೆಸಲಾಗುತ್ತಿದೆ. ಅದರ ಭಾಗವಾಗಿ ಅ. 20ರಂದು ಪಟ್ಟಣದ ಬ್ರಾಸಂ ಸಭಾಭವನದಲ್ಲಿ ಸಾಗರ ಪ್ರಾಂತ್ಯದ ಹವ್ಯಕ ಸ್ವ- ಉದ್ಯಮಿಗಳ ಸಮಾವೇಶವ ಸ್ವಯಮ್ ವಾಣಿಜ್ಯೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಸಮ್ಮೇಳನದ ಸಂಚಾಲಕ ಹಾಗೂ ಹೊಟೇಲ್ ಸಂಘದ ರಾಜ್ಯ ಉಪಾಧ್ಯಕ್ಷ ಎಚ್.ಎನ್. ಉಮೇಶ್ ದೊಂಬೆ ಹೇಳಿದರು.
ಸಾಗರದ ಮಧುರಾ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾನುವಾರ ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಸಾಗರ, ಹೊಸನಗರ ಮತ್ತು ಸೊರಬ ವ್ಯಾಪ್ತಿಯ 125ಕ್ಕೂ ಹೆಚ್ಚು ವಿವಿಧ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ 600ಕ್ಕೂ ಹೆಚ್ಚು ಹವ್ಯಕ ಸ್ವ ಉದ್ಯಮಿಗಳನ್ನು ಸಮಾವೇಶದಲ್ಲಿ ಸೇರಿಸಲಾಗುತ್ತಿದೆ. ಯುವ ಉದ್ಯಮಿಗಳಿಗೆ ಅನುಕೂಲ ಆಗುವ ನಿಟ್ಟಿನಲ್ಲಿ, ಉದ್ಯಮದ ಯಶಸ್ಸಿಗೆ ಪೂರಕವಾಗಿ ಅಂದು ೩ ಗೋಷ್ಠಿ ಆಯೋಜಿಸಲಾಗಿದೆ. ವಿವಿಧ ಕ್ಷೇತ್ರದ ಹಿರಿಯ ಉದ್ಯಮಿಗಳನ್ನು ಸನ್ಮಾನಿಸಲಾಗುತ್ತಿದೆ. ಅಲ್ಲದೆ ಪ್ರಸ್ತುತ 30 ಸಾವಿರ ಸದಸ್ಯತ್ವ ಹೊಂದಿರುವ ಸಂಘಟನೆಯನ್ನು ಅಖಿಲ ಹವ್ಯಕ ವಿಶ್ವ ಹವ್ಯಕ ಸಮ್ಮೇಳನದ ವೇಳೆಗೆ ಲಕ್ಷ ಸದಸ್ಯತ್ವದ ಗುರಿ ಹೊಂದಿದ್ದೇವೆ. ಮುಖ್ಯವಾಗಿ ಇಂತಹ ಸಿದ್ಧತಾ ಸಮಾವೇಶಗಳು ವಿಶ್ವ ಹವ್ಯಕ ಸಮ್ಮೇಳನಕ್ಕೆ ಸಹಕಾರಿಯಾಗಲಿದೆ ಎಂದರು.
ಪ್ರಾಸ್ತಾವಿಕ ಮಾತನಾಡಿದ ಅಖಿಲ ಹವ್ಯಕ ಮಹಾಸಭೆ ನರ‍್ದೇಶಕ ಹು.ಬಾ ಅಶೋಕ, ಅಂದು ಬೆಳಗ್ಗೆ 10 ಗಂಟೆಗೆ ಹಿರಿಯ ಉದ್ಯಮಿ ವಿ.ಎನ್. ಕೃಷ್ಣಮರ‍್ತಿ ಸಮಾವೇಶ ಉದ್ಘಾಟಿಸಲಿದ್ದಾರೆ. ನರ‍್ದೇಶಕ ಕೆ.ಎನ್. ಶ್ರೀಧರ ಅಧ್ಯಕ್ಷತೆ ವಹಿಸಲಿದ್ದು ಶಿವಮೊಗ್ಗ ಹವ್ಯಕ ಸಂಘದ ಅಧ್ಯಕ್ಷ ವಿ.ಪಿ. ಪರ‍್ಣಾನಂದ, ಮಥನ ಗೃಹ ಉದ್ಯಮದ ಉಮೇಶ್ ಬಂದಗದ್ದೆ ಇರಲಿದ್ದಾರೆ. ಲೆಕ್ಕಪರಿಶೋಧಕ ಶ್ರೀರಾಮ, ರ‍್ಥಿಕ ತಜ್ಞ ನಾರಾಯಣ ಯಾಜಿ, ತಂತ್ರಜ್ಞ ಕೃಪೇಶ್ ಭಟ್ ಗೋಷ್ಠಿ ನಡೆಸಿಕೊಡಲಿದ್ದಾರೆ ಎಂದರು.
ನರ‍್ದೇಶಕ ಗುರುಪಾದ, ಸನ್ಮಾನ ಸಮಿತಿಯ ಸಂಚಾಲಕ ಐ.ವಿ. ಹೆಗಡೆ ಇದ್ದರು.

Related Articles

Leave a Reply

Your email address will not be published. Required fields are marked *

Back to top button