ಇತ್ತೀಚಿನ ಸುದ್ದಿ

ಮಾರ್ಚ್ 1ನೇ ತಾರೀಖು ಅನಿರ್ದಿಷ್ಟಾವಧಿ ಬಂದ್…!

ಬಿಬಿಎಂಪಿ ಕೇಂದ್ರ ಕಛೇರಿ ಅವರಣದಲ್ಲಿ 7ನೇ ವೇತನ ಆಯೋಗ ಜಾರಿಗೆ ಮತ್ತು ಎನ್.ಪಿ.ಎಸ್.ರದ್ದುಪಡಿಸಿ ಓ.ಪಿ.ಎಸ್.ಯೋಜನೆಯ ಜಾರಿಗೆ ತರಲು ಮಾರ್ಚ್ 1ನೇ ತಾರೀಖು ಕರ್ನಾಟಕ ರಾಜ್ಯ ನೌಕರರ ಸಂಘದ ಅನಿರ್ದಿಷ್ಟಾವಧಿ ಮುಷ್ಕರ ಬೆಂಬಲಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘ ಬೆಂಬಲಿಸಿ ಸಾವಿರಾರು ಸಂಖ್ಯೆಯಲ್ಲಿ ಅಧಿಕಾರಿ,ನೌಕರರ ಪೂರ್ವಬಾವಿ ಸಭೆಯಲ್ಲಿ ಭಾಗವಹಿಸಿದ್ದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಷಡಕ್ಷರಿರವರು, ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷರಾದ ಎ.ಅಮೃತ್ ರಾಜ್ ರವರು, ಗೌರವಾಧ್ಯಕ್ಷರಾದ ಹೆಚ್.ವಿ.ಅಶ್ವಥ್ ರವರು.

ಷಡಕ್ಕರಿ ರವರು ಮಾತನಾಡಿ ನಾವು ಎರಡು ಪ್ರಮುಖ ಬೇಡಿಕೆಗಳಿಗಾಗಿ ಮುಷ್ಕರಕ್ಕೆ ಕರೆ ನೀಡಲಾಗಿದೆ.

ತಾಲ್ಲೂಕು,ಜಿಲ್ಲೆಯಲ್ಲಿ ಸ್ವಾಯುತ್ತ ಸಂಸ್ಥೆಗಳು,ಪುರಸಭೆ,ಪಟ್ಟಣ ಪಂಚಾಯಿತಿ,ನಗರಸಭೆ,ಮಹಾನಗರ ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 15ಲಕ್ಷ ಅಧಿಕಾರಿ ನೌಕರರು ಮುಷ್ಕರದಲ್ಲಿ ಭಾಗವಹಿಸಲಿದ್ದಾರೆ.

ಏಸ್ಮಾ ಜಾರಿ ಮಾಡಲು ಸಾಧ್ಯವಿಲ್ಲ.

ದೇಶದಲ್ಲಿ ಅತ್ಯಂತ ಕಡಿಮೆ ವೇತನ ನಮ್ಮ ರಾಜ್ಯದ ನೌಕರರು ಪಡೆಯುತ್ತಿದ್ದಾರೆ.

ಬಜೆಟ್ ಘೋಷಣೆ ಮಾಡುತ್ತಾರೆ ಎಂಬ ಭರವಸೆ ಅದರೆ ಹುಸಿಯಾಯಿತು.

ಸರ್ಕಾರ ನೀಡುವ ಭಿಕ್ಷೆಯಲ್ಲ ಇದು ನಮ್ಮ ಹಕ್ಕು ಅದರಿಂದ ಮಾರ್ಚ್ 1ರಿಂದ ಉಗ್ರ ಹೋರಾಟ ಅಂತಿಮ ತೀರ್ಮಾನ ವಾಗುವರೆಗೂ ನಮ್ಮ ಹೋರಾಟ ನಿಲ್ಲದು.

ಸರ್ಕಾರಿ ಮತ್ತು ಬಿಬಿಎಂಪಿ ಒಬ್ಬ ನೌಕರರು ಕೆಲಸಕ್ಕೆ ಹಾಜರಾಗುವುದಿಲ್ಲ.

ವಾಪಸ್ಸು ಪಡೆಯುವ ಪ್ರಶ್ನೆಯಿಲ್ಲ, ಸರ್ಕಾರಿ ಆದೇಶ ಬರುವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ.

ದುಡಿಯುವ ವರ್ಗ ಸರ್ಕಾರ ಚನ್ನಾಗಿ ನೋಡಿಕೊಳ್ಳಬೇಕು, ವೇತನ ಕಡಿಮೆ ಇದ್ದರು ಉತ್ತಮ ಸೇವೆ ನೀಡುತ್ತಿರುವ ನೌಕರರ ಸಹಕಾರದಿಂದ ದೇಶದಲ್ಲಿ 5 ಸ್ಥಾನದಲ್ಲಿ ರಾಜ್ಯವಿದೆ.

ನೂರಕ್ಕೂ ನೂರರಷ್ಟು ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.

ಎ.ಅಮೃತ್ ರಾಜ್ ರವರು ಮಾತನಾಡಿ ರಾಜ್ಯ ಸರ್ಕಾರಿ ನೌಕರರ ಸಂಘ ಕರೆ ಕೊಟ್ಟಿರುವ ಅನಿರ್ದಿಷ್ಟಾವಧಿ ಬಂದ್ ಹಿನ್ನಲೆಯಲ್ಲಿ ನಮ್ಮ ಸಂಘವು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿ, ಬಿಬಿಎಂಪಿ ತುರ್ತು ಸೇವೆ ಬಿಟ್ಟು ಎಲ್ಲವು ಬಂದ್ ಆಗಲಿದೆ.

ರಾಜ್ಯ ಸರ್ಕಾರಿ ನೌಕರರ ಸಂಘ ಕರೆ ಕೊಟ್ಟಿರುವ ಅನಿರ್ದಿಷ್ಟಾವಧಿ ಬಂದ್ ಹಿನ್ನಲೆಯಲ್ಲಿ ನಮ್ಮ ಸಂಘವು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿ, ಬಿಬಿಎಂಪಿ ತುರ್ತು ಸೇವೆ ಬಿಟ್ಟು ಎಲ್ಲವು ಬಂದ್ ಆಗಲಿದೆ.

ನಗರ ಮೂಲಭೂತ ಸೌಲಭ್ಯ ಒದಗಿಸಲು ಪಾಲಿಕೆ ಪ್ರತಿದಿನ ಅಧಿಕಾರಿ, ನೌಕರರು ಶ್ರಮಿಸುತ್ತಾರೆ.

ಆರೋಗ್ಯ, ಕಂದಾಯ, ಎಲ್ಲ ವಿಭಾಗದ ಅಧಿಕಾರಿ ನೌಕರರ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ.

ಮುಖ್ಯ ಆಯುಕ್ತರಿಗೆ ಮನವಿ ಮಾಡಲಾಗಿದೆ ಮತ್ತು 10ಮಹಾನಗರ ಪಾಲಿಕೆಗಳು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ.

ಹೆಚ್.ವಿ.ಅಶ್ವಥ್ ರವರು ಮಾತನಾಡಿ ಪ್ರತಿದಿನ ಆಹಾರ ಪದಾರ್ಥಗಳ ಬೆಲೆ ಏರಿಕೆ ಮತ್ತು ಇನ್ನಿತರೆ ಖರ್ಚು ವೆಚ್ಚಗಳು ಹೆಚ್ಚಾಗಿದೆ ಅದರೆ ವೇತನ ಮಾತ್ರ ಹೆಚ್ಚಳವಾಗಿಲ್ಲ.

ಕಾಲಕಾಲಕ್ಕೆ ವೇತನ ಪರಿಷ್ಕರಣೆ ಆಗದೇ ಇರುವುದರಿಂದ ನೌಕರರು ಸಂಕಷ್ಟದಲ್ಲಿ ಇದ್ದಾರೆ.

ಆರ್ಥಿಕ ಸ್ಥಿತಿ ಸುಧಾರಣೆ ಮತ್ತು ಸುಬದ್ರತೆಗಾಗಿ,
ನಾವು ಉಳಿಯಲು ಹೋರಾಟ ಮಾಡಬೇಕಾದ ಪರಿಸ್ಥಿತಿ ಬಂದಿದೆ.

ಕೇಂದ್ರ ಸರ್ಕಾರಿ ಸಿಗುವ ವೇತನ ನಮ್ಮ ನೌಕರರಿಗೆ ಲಭಿಸಬೇಕು.
ನಮ್ಮ ಬೇಡಿಕೆ ಈಡೇರದೇ ಹೋದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಹೇಳಿದರು.

ರಮೇಶ್ ಸಂಗಾ ರವರು ಮಾತನಾಡಿ ಕರ್ನಾಟಕ ರಾಜ್ಯದಲ್ಲಿ ಸರ್ಕಾರಿ ನೌಕರರು ಬೇರೆ ರಾಜ್ಯಗಳಿಗಿಂತ ಅತ್ಯಂತ ಕಡಿಮೆ ವೇತನ ಪಡೆಯುತ್ತಾರೆ.

ಐದು ವರ್ಷಕ್ಕೆ ಒಮ್ಮೆ ವೇತನ ಪರಿಷ್ಕರಣೆಯಾಗಬೇಕು ಅದರೆ ಆಗುತ್ತಿಲ್ಲ.

7ವೇತನ ಆಯೋಗ ಜಾರಿಯಾಗಬೇಕು ಮತ್ತು ಓಪಿಎಸ್ ಯೋಜನೆ ಕುರಿತು ಸರ್ಕಾರ ಆದೇಶ ನೀಡುವರಗೆ ಗೈರು ಹಾಜರಿ ಆಗುವ ಮೂಲಕ ಹೋರಾಟ ನಡೆಸಲಾಗುವುದು ಎಂದು ಹೇಳಿದರು.

ರಾದ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು, ಬಿಬಿಎಂಪಿ ಸಂಘದ ಪದಾಧಿಕಾರಿಗಳು, ಅಧಿಕಾರಿ, ನೌಕರರು ಪಾಲ್ಗೊಂಡಿದ್ದರು.

Related Articles

Leave a Reply

Your email address will not be published. Required fields are marked *

Back to top button