Uncategorized

ಮಾಹಿತಿ ಹಕ್ಕು ಆಯೋಗದಿಂದ ಪಿ.ಎಸ್.ಐ.ಸಾಹೇಬಗೌಡ ಹತ್ತು ಸಾವಿರ ದಂಡ

ಗುಂಡ್ಲುಪೇಟೆ:ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆ ಅಡಿ ಮಾಹಿತಿ ನೀಡಲು ನಿರಾಕರಿಸಿದ ಕಾರಣಕ್ಕೆ ಮಾಹಿತಿ ಆಯೋಗ 10 ಸಾವಿರ ದಂಡವಿಧಿಸಿ ರಾಜ್ಯ ಮಾಹಿತಿ ಆಯುಕ್ತರಾದ ರುದ್ರಣ್ಣ ಹರ್ತಿಕೋಟೆ ಆದೇಶ ಮಾಡಿದ್ದಾರೆ

ಗುಂಡ್ಲುಪೇಟೆ ಪೊಲೀಸ್ ಠಾಣೆಯ ದಿನಾಂಕ: 01/01/2023 ರಿಂದ 31/05/2023 ದಿನದಂತ್ಯದವರೆಗಿನ ಠಾಣೆಯಲ್ಲಿ ಅಳವಡಿಸಿರುವ ಎಲ್ಲಾ ಸಿ.ಸಿ. ಟಿ.ವಿ. ಕ್ಯಾಮರಾಗಳ ವೀಡಿಯೋ, ಆಡಿಯೋ ಪುಟೇಜ್ ಗಳ ದಾಖಲೆಗಳನ್ನು ವಿದ್ಯುನ್ಮಾನ ಸಲಕರಣೆಯ ಮೂಲಕ ನ್ಯಾಯಾಲಯದ ಅಗತ್ಯತೆಗಾಗಿ ಅತ್ಯಂತ ಜರೂರಾಗಿ, 48 ಗಂಟೆಗಳೊಳಗಾಗಿ ಒದಗಿಸುವಂತೆ ಪಟ್ಟಣನಿವಾಸಿ ವಕೀಲರಾದ ಚಿಕ್ಕಣ್ಣ ಅರ್ಜಿ ಸಲ್ಲಿಸಿರುತ್ತಾರೆ

ಆಯೋಗದ ಆದೇಶವನ್ನು ಪಾಲನೆ ಮಾಡದೇ ಇರುವುದರಿಂದ ಮಾಹಿತಿ ಹಕ್ಕು ಅಧಿನಿಯಮ 2005ರ ಕಲಂ 20(1)ರ ಅಡಿಯಲ್ಲಿ ಕ್ರಮವನ್ನು ಜರುಗಿಸಲಾಗುವುದೆಂದು ಪ್ರತಿವಾದಿಯಾದ ಶ್ರೀ ಸಾಹೇಬಗೌಡ ಆರ್.ಬಿ, ಹಿಂದಿನ ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಆರಕ್ಷಕ ಉಪ ನಿರೀಕ್ಷಕರು, ಗುಂಡ್ಲುಪೇಟೆ ಪೊಲೀಸ್ ಠಾಣೆ, ಚಾಮರಾಜನಗರ ಜಿಲ್ಲೆ ಪ್ರಸ್ತುತ ಆರಕ್ಷಕ ಉಪ ನಿರೀಕ್ಷಕರು, ಹನೂರು ಪೊಲೀಸ್ ಠಾಣೆ, ಚಾಮರಾಜನಗರ ಜಿಲ್ಲೆ ರವರಿಗೆ ದಿನಾಂಕ: 14.01.2026 ರ ಆದೇಶದಲ್ಲಿ ಸ್ಪಷ್ಟವಾಗಿ ಎಚ್ಚರಿಕೆ ನೀಡಿದ್ದರೂ ಸಹ ಪ್ರತಿವಾದಿಯವರು ಇದುವರೆಗೂ ಮೇಲ್ಮನವಿದಾರರಿಗೆ ಮಾಹಿತಿಯನ್ನು ಒದಗಿಸಿರುವುದಿಲ್ಲ ಮತ್ತು ದಂಡದ ಕ್ರಮವನ್ನು ಜರುಗಿಸದೆ ಇರುವ ವಿಚಾರದಲ್ಲಿ ಸಲ್ಲಿಸಿರುವ ಲಿಖಿತ ಸಮಜಾಯಿಷಿಯಲ್ಲಿ ತಿಳಿಸಿರುವ ಅಂಶಗಳನ್ನು ತಿರಸ್ಕರಿಸಿದ ಆಯೋಗವು ಪ್ರತಿವಾದಿಯಾದ ಶ್ರೀ ಸಾಹೇಬಗೌಡ ಆರ್.ಬಿ, ಹಿಂದಿನ ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಆರಕ್ಷಕ ಉಪ ನಿರೀಕ್ಷಕರು, ಗುಂಡ್ಲುಪೇಟೆ ಪೊಲೀಸ್ ಠಾಣೆ, ಚಾಮರಾಜನಗರ ಜಿಲ್ಲೆ ಆರಕ್ಷಕ ಉಪ ನಿರೀಕ್ಷಕರ ದಂಡನೆಗೆ ಅರ್ಹರೆಂದು ಅಭಿಪ್ರಾಯಿಸಿದೆ.
ಅಲ್ಲದೆ ಅರ್ಜಿದಾರಿಗೆ 2 ಸಾವಿರ ಪರಿಹಾರ ನೀಡುವಂತೆ ಆದೇಶ ನೀಡಲಾಗಿದೆ

ಹಂಗಲ ಮಹಾದೇವ

Related Articles

Leave a Reply

Your email address will not be published. Required fields are marked *

Back to top button