ಇತ್ತೀಚಿನ ಸುದ್ದಿರಾಜ್ಯ

ಅಭಯ ಸೇವಾ ಫೌಂಡೇಷನ್ ವತಿಯಿಂದ ಸಾರ್ವಜನಿಕರ ಸೇವೆಗೆ ಸೇವಾ ಸಂಕಲ್ಪ

ರಾಜಾಜಿನಗರ, ಶ್ರೀರಾಮಮಂದಿರ: ಅಭಯ ಸೇವಾ ಫೌಂಡೇಷನ್ (ರಿ)ವತಿಯಿಂದ ಲೋಕಕಲ್ಯಾರ್ಣಕ್ಕಾಗಿ ಸೇವಾ ಸಂಕಲ್ಪ ಬನ್ನಿ ಭರವಸೆಯ ನಾಳೆಗೆ
ದಿನಾಂಕ 20-10-2024ರ ಭಾನುವಾರ ಬೆಳಗ್ಗೆ 6-30ರಿಂದ ರಾತ್ರಿ 10-30ರವರಗೆ ರಾಜಾಜಿನಗರ ಶ್ರೀರಾಮಮಂದಿರ ಆಟದ ಮೈದಾನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಕಾರ್ಯಕ್ರಮದಲ್ಲಿ ಗಣಪತಿಪೂಜೆ, ನೆತ್ತರ ನೆರವು, ರಕ್ತದಾನ ಶಿಬಿರ, ಸಂಕಲ್ಪಜಾಥ ಹಾಗೂ ಸೇವಾ ಸಂಕಲ್ಪ ಉದ್ಘಾಟನೆ, ಮಕ್ಕಳಿಗೆ ಕಲಿಕಾ ಸಾಮಾಗ್ರಿ ಮತ್ತು ಫಲಾನುಭವಿಗಳಿಗೆ ಬೇಡ್ ಶಿಟ್ ನೆರವು, ಹುಲಿವೇಷ ಕುಣಿತ, ಪ್ರಖ್ಯಾತ ಗಾಯಕರಿಂದ ಗಾನ ಗಾಯನ, ವಿವಿಧ ತಂಡಗಳಿಂದ ಭಜನೆ ಸುಮಗಂಲಿಯರಿಂದ ದೀಪ ನಮಸ್ಕಾರ, ಶ್ರೀ ಮೆಕ್ಕೆಕಟ್ಟು ಮೇಳದವರಿಂದ ಚಕ್ರಚಂಡಿಕೆ ಯಕ್ಷಗಾನ , ಉಚಿತ ಆರೋಗ್ಯ ತಪಾಸಣೆ ಶಿಬಿರ, ಸಿಂಹವಾಹಿನಿ ನೃತ್ಯರೂಪಕ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಅಭಯ ಸೇವಾ ಫೌಂಡೇಷನ್ ಸಂಸ್ಥಾಪಕರಾದ ಉಮೇಶ್ ಶೆಟ್ಟಿ ಎಂ.ಬಿ.ರವರು ಮಾತನಾಡಿ ಬಡವರಾಗಿ ಹುಟ್ಟಿರಬಹುದು ಅದರೆ ಬಡವರಾಗಿ ಜೀವನ ಸಾಗಿಸಬಾರದು, ಸಮಾಜದಲ್ಲಿ ಕಟ್ಟಕಡೆಯ ವ್ಯಕ್ತಿಗೆ ಸಹಾಯ ಸಿಗಬೇಕು ಎಂಬ ಆಶಯದಿಂದ ಅಭಯ ಸೇವಾ ಫೌಂಡೇಷನ್ ಆರಂಭಿಸಲಾಗಿದೆ.

ಭಾನುವಾರ ಶ್ರೀರಾಮಮಂದಿರ ಆಟದ ಮೈದಾನದಲ್ಲಿ ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ.

ಬೆಳಗ್ಗೆ ಉದ್ಘಾಟನೆಯನ್ನು ದಿವ್ಯ ಉಪಸ್ಥಿತಿ ಪರಮಪೂಜ್ಯ ಶ್ರೀ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿರವರು ಮತ್ತು ಅಧ್ಯಕ್ಷತೆ ಎಂ.ಬಿ.ಉಮೇಶ್ ಶೆಟ್ಟಿ, ಮುಖ್ಯ ಅತಿಥಿಗಳಾಗಿ ಡಾ||ಪದ್ಮನಿ ಪ್ರಸಾದ್, ಶ್ರೀ ಕೈಲಾಸ ವೈಕುಂಠ ಮಹಾಕ್ಷೇತ್ರ ಅಧ್ಯಕ್ಷರಾದ ಆರ್.ವಿ.ಹರೀಶ್, ಹಿರಿಯ ವೈದ್ಯರಾದ ಡಾ.ಅಂಜನಪ್ಪರವರು ಉದ್ಘಾಟನೆ ನೇರವೆರಿಸುವರು.

ಸಂಜೆ 5ಗಂಟೆ ಸಮಾರೋಪ ಸಮಾರಂಭ ಏರ್ಪಿಸಲಾಗಿದೆ. ದಿವ್ಯ ಉಪಸ್ಥಿತಿ ಅವಧೂತ ಶ್ರೀ ಶ್ರೀ ಶ್ರೀ ವಿನಯ್ ಗುರೂಜಿ, ಎಂ.ಆರ್.ಜಿ.ಗ್ರೂಪ್ ಸಂಸ್ಥಾಪಕ ಪ್ರಕಾಶ್ ಶೆಟ್ಟಿ, ಚಲನಚಿತ್ರ ನಟ ಉಪೇಂದ್ರ, ಲೋಕಸಭಾ ಸದಸ್ಯರಾದ ಪಿ.ಸಿ.ಮೋಹನ್, ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಶಾಸಕರುಗಳಾದ ಎಸ್.ಸುರೇಶ್ ಕುಮಾರ್, ಗುರುರಾಜ್ ಗಂಟಿಹೊಳೆ, ಯುನಿವರ್ಸಲ್ ಗ್ರೂಪ್ ಆಫ್ ಇನ್ಸ್ ಟ್ಯೂಷನ್ ವ್ಯವಸ್ಥಾಪಕ ನಿರ್ದೇಶಕ ಆರ್.ಉಪೇಂದ್ರಶೆಟ್ಟಿ, ಡಿ.ಸಿ.ಪಿ ಸೈಮುಲ್ಲಾ ಅದಾಲತ್, ಸಾಮಾಜಿಕ ಕಾರ್ಯಕರ್ತೆ ತೇಜಸ್ವಿನಿ ಅನಂತ್ ಕುಮಾರ್, ನಿವೃತ್ತ ಕರ್ನಲ್ ಪಿ.ವಿ.ಹರಿ, ವಿಶ್ವ ಹಿಂದೂ ಪರಿಷತ್ತು ಪ್ರಾಂತ್ಯ ಕಾರ್ಯದರ್ಶಿಗಳಾದ ಜಗನ್ನಾಥ ಶಾಸ್ತಿರವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಸಮಾಜದಲ್ಲಿ ಸಾಧನೆ ಮಾಡಿದ ಸಾಂಸ್ಕೃತಿಕ ಚಿಂತಕರಾದ ಡಾ||ದೀಪಕ್ ಶೆಟ್ಟಿ ಬಾರ್ಕೂರು, ರಿಪಬ್ಲಿಕ್ ಕನ್ನಡ ಉಪಸಂಪಾದಕರಾದ ಜಯಪ್ರಕಾಶ್ ಶೆಟ್ಟಿ ಉಪ್ಪಳ ಮತ್ತು ಸಮಾಜ ಸೇವಕರಾದ ರವಿ ಕಟಪಾಡಿರವರಿಗೆ ಸನ್ಮಾನಿಸಲಾಗುವುದು.

ಸಮಾಜ ನನಗೆ ಏನು ಕೊಟ್ಟಿದೆ ಏನ್ನವುದಕ್ಕಿಂತ ಸಮಾಜಕ್ಕೆ ನಮ್ಮ ಕೊಡುಗೆ ಏನು ಎಂಬುದು ಅರ್ಥ ಮಾಡಿಕೊಂಡು ಜೀವನ ಸಾಗಿಸಬೇಕು ಅದ್ದರಿಂದ ಅಭಯ ಸೇವಾ ಫೌಂಡೇಷನ್ ವತಿಯಿಂದ ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

Related Articles

Leave a Reply

Your email address will not be published. Required fields are marked *

Back to top button