
ಕುಣಿಗಲ್ : ತಾಲೂಕಿನ ಮಲ್ಲನಾಯಕನಹಳ್ಳಿ ಎಂಬ ಚಿಕ್ಕ ಗ್ರಾಮದಲ್ಲಿ “ಲೇಡಿ ಟೈಗರ್ “ಎಂದೆ ಹೆಸರುವಾಸಿಯಾಗಿರುವ ಅಲ್ಲಿನ ನಾಗರತ್ನ ಎಂಬುವ ಮಹಿಳೆ, ಯಾವ ಪೊಲೀಸ್ ಇಲಾಖೆಗೂ ಗೌರವ ಕೊಡದೆ ಹಾಗೂ ಅಧಿಕಾರಿಗಳಿಗೂ ಗೌರವ ಕೊಡದೆ, ಬಲಾಢ್ಯರ ಕುಮ್ಮಕಿನಿಂದ ಸರ್ಕಾರಿ ಜಾಗದಲ್ಲಿ ಯಾವುದೇ ದಾಖಲಾತಿ ಇಲ್ಲದೆ ಕೋಡಿಹಳ್ಳದಲ್ಲಿ ಅಕ್ರಮ ಮನೆ ನಿರ್ಮಾಣ ಮಾಡಿಕೊಂಡು ಇಲಾಖೆಗೆ ವಂಚಿಸಿರುವ ಆರೋಪ ಕೇಳಿ ಬಂದಿದೆ.ಪಕ್ಕದ ಜಮೀನಿನಲ್ಲಿ ಮೂರು ನಾಲ್ಕು ತಲೆಮಾರಿನಿಂದ ಒಂಟಿ ಜೀವನ ನಡೆಸುತ್ತಿರುವ ಹಿರಿಯ ವಯಸ್ಕರಾದ” ವೆಂಕಟಗಿರಿಯಪ್ಪ “ಹಾಗೂ ಅವರ ಕುಟುಂಬದವರಿಗೆ ಸುಮಾರು ಎಂಟು ವರ್ಷಗಳಿಂದ ತೀವ್ರ ಹಲ್ಲೆ ನಡೆಸಿ, ಹಾಗೂ ಮಾರಕಾಸ್ತ್ರಗಳಿಂದ ಏಕಾಏಕಿ ದಾಳಿ ಮಾಡಲು ಮುಂದಾಗುತ್ತಾಳೆ, ಪ್ರತಿನಿತ್ಯ ನನ್ನ ಜಮೀನಿಗೆ ನಿಂಬೆ ಹಣ್ಣು ಮೊಟ್ಟೆ ತಂದು ವಾಮಾಚಾರ ಮಾಡುತ್ತಾಳೆ,ತೋಟದ ಮನೆಯಲ್ಲಿ ಒಂಟಿ ಜೀವನ ಸಾಗಿಸುತ್ತಿರುವ ವೆಂಕಟಗಿರಿಯಪ್ಪನವರಿಗೆ ಸಪೋರ್ಟ್ ಇಲ್ಲದ ಕಾರಣ ಪ್ರತಿನಿತ್ಯ ಅವರಿಗೆ ತೀವ್ರ ಕಿರುಕುಳ ನೀಡುತ್ತಿದ್ದರು ,ಸಹ ಯಾವುದೇ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಬರದೆ ನಾಗರತ್ನ ಮತ್ತು ಆಕೆಯ ಗಂಡ ರಾಜು ಎಂಬುವರಿಗೆ ಸಂಪೂರ್ಣ ಹಣದ ಆಸೆಗೆ ಶಾಮಿಲಾಗಿ ನೊಂದವರಿಗೆ ನ್ಯಾಯ ಕೊಡಿಸುವಲ್ಲಿ ಪೊಲೀಸ್ ಇಲಾಖೆಯವರು ಸಂಪೂರ್ಣ ವಿಫಲರಾಗಿದ್ದಾರೆ ಎಂದು ತಿಳಿದುಬಂದಿದೆ.
ಅಮೃತೂರು ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ “ಶಮಂತಗೌಡ”ಹಾಗೂ ಸರ್ಕಲ್ ಇನ್ಸ್ಪೆಕ್ಟರ್ “ಮಾಧ್ಯಾನಾಯಕ್” ಎಂಬುವ ಇಬ್ಬರು ಅಧಿಕಾರಿಗಳು ಮಲ್ಲನಾಯಕನಹಳ್ಳಿ, ನಾಗರತ್ನ ಹಾಗೂ ಆಕೆಯ ಗಂಡ ರಾಜು ಎಂಬುವರಿಗೆ ಸಂಪೂರ್ಣ ಶಾಮೀಲಾಗಿ ಹಾಗೂ ಬೆಂಬಲವನ್ನು ಸಹ ಸೂಚಿಸಿದ್ದಾರೆ ಎನ್ನಲಾಗಿದೆ, ಎಲ್ಲಾ ದಾಖಲಾತಿಗಳು ವೆಂಕಟಗಿರಿಯಪ್ಪನವರ ಪರವಾಗಿ ಇದ್ದರೂ ಸಹ ಪೊಲೀಸ್ ಇಲಾಖೆಯವರು ಅವರಿಗೆ ರಕ್ಷಣೆ ಕೊಡುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ತಿಳಿದುಬಂದಿದೆ.
ವೆಂಕಟಗಿರಿಯಪ್ಪ ಹಾಗೂ ಅವರ ಸ್ನೇಹಿತರುಗಳ ಮೇಲೆ ನಾಗರತ್ನ ಎಂಬುವಳಿಂದ ಸುಳ್ಳು ದೂರನ್ನು ಪಡೆದು, ಸ್ಥಳ ಮಹಜರು ಮಾಡದೆ ಏಕಾಏಕಿ ಸುಳ್ಳು ಪ್ರಕರಣವನ್ನು ದಾಖಲಿಸಿದ್ದಾರೆ, ವೆಂಕಟಗಿರಿಯಪ್ಪನವರ ಜಮೀನಿನಲ್ಲಿ ಇರುವಂತಹ ಸುಮಾರು ಲಕ್ಷಾಂತರ ಬೆಲೆ ಬಾಳುವ ಗಂಧದ ಸಸಿಗಳನ್ನು ನಾಗರತ್ನ ಎಂಬುವ ಮಹಿಳೆ ಕಡಿದು ಹಾಕಿದ್ದರೂ ಸಹ ಯಾವುದೇ ಕಾನೂನು ರೀತಿ ಕ್ರಮ ತೆಗೆದುಕೊಂಡಿಲ್ಲ , ಹಾಗೂ ಪೊಲೀಸ್ ಠಾಣೆಗೆ ನನ್ನ ಗಂಧದ ಮರಗಳನ್ನು ಕಡಿದು ಹಾಕಿದ್ದಾಳೆ, ಎಂದು ದೂರು ಕೊಟ್ಟರೂ ಸಹ ನಾಗರತ್ನ ಎನ್ನುವವರ ಮೇಲೆ ಯಾವುದೇ ರೀತಿ ಕೇಸ್ ದಾಖಲಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಪೊಲೀಸ್ ಇಲಾಖೆ ಮೇಲೆ ನಾವು ಅಪಾರವಾದ ಗೌರವವನ್ನು ಇಟ್ಟುಕೊಂಡಿದ್ದೇವೆ ,ಆದರೆ ಯಾವುದೋ ಒತ್ತಡಕ್ಕೆ ಮಣಿದು ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ, ಕೆಲವು ದಲಿತ ಮುಖಂಡರುಗಳು ಈ ವಿಚಾರದಲ್ಲಿ ಪೊಲೀಸ್ ಅವರ ಮೇಲೆ ತೀವ್ರ ಒತ್ತಡವನ್ನು ಏರುತ್ತಿದ್ದಾರೆ ಕೆಲವು ಅಧಿಕಾರಿಗಳು ಹಾಗೂ ದಲಿತ ಮುಖಂಡರು ಹಣದಾಸೆಗೆ ಸಂಪೂರ್ಣ ಶಾಮಿಲಾಗಿ ಕಿರುಕುಳ ನೀಡಿದ್ದಾರೆ ಎಂದು ತಿಳಿದು ಬಂದಿದೆ.
2017 ರಿಂದ ಇಲ್ಲಿಯವರೆಗೂ 17 ರಿಂದ 18 ಬಾರಿ ಅಮೃತೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು ಸಹ ಪೊಲೀಸ್ ಇಲಾಖೆ ನನಗೆ ಯಾವುದೇ ರಕ್ಷಣೆಯನ್ನು ನೀಡಿಲ್ಲ, ಡಿ ಐ ಜಿ, ಐಜಿ, ತುಮಕೂರು ಎಸ್ಪಿ ರವರಿಗೆ ದೂರು ನೀಡಿದರು ಸಹ ನನಗೆ ರಕ್ಷಣೆ ನೀಡುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ,ಎಂದು ತಮ್ಮ ನೋವನ್ನು ತೋಡಿಕೊಂಡಿದ್ದಾರೆ.
ಪ್ರತಿನಿತ್ಯ ನಾನು ತೋಟದ ಮನೆಯಲ್ಲಿ ಒಂಟಿ ಜೀವನ ನಡೆಸುತ್ತಿದ್ದು ನನಗೆ ನಾಗರತ್ನ ಹಾಗೂ ರಾಜು ಕುಟುಂಬದವರು ಪ್ರತಿನಿತ್ಯ ಮಾರಕಾಸ್ತ್ರಗಳನ್ನು ಹಿಡಿದು ನನಗೆ ಅಲ್ಲೇ ನಡೆಸಿ ರಾತ್ರೋರಾತ್ರಿ ರೌಡಿಗಳನ್ನು ಕರೆಸಿ ನನಗೆ ತೀವ್ರ ಬೆದರಿಕೆ ಹಾಕುತ್ತಿದ್ದಾರೆ,ಆದ್ದರಿಂದ ನೊಂದಿರುವ ನನಗೆ ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಎಸ್ ಪಿ, ಸಾಹೇಬರು ಸೂಕ್ತ ರಕ್ಷಣೆ ನೀಡಿ ಎಂದು ಕೇಳಿಕೊಂಡಿದ್ದಾರೆ.
ನಾಗರತ್ನ ಎಂಬುವ ಮಹಿಳೆ ನನ್ನ ಮೇಲೆ ಗಲಾಟೆ ನಡೆಸಿ ಬಳಿಕ ಪೊಲೀಸ್ ಠಾಣೆಗೆ ಹೋಗಿ ನನ್ನ ಮೇಲೆ ಸುಳ್ಳು ದೂರನ್ನು ನೀಡುತ್ತಾಳೆ, ಈ ಹಿಂದೆ ನನ್ನ ತಾಯಿಗೂ ಕೂಡ ಪ್ರತಿನಿತ್ಯ ಕಿರುಕುಳ ನೀಡಿ ತೀವ್ರವಾದ ಹಲ್ಲೆ ನಡೆಸಿದ ಪರಿಣಾಮ ವಯಸ್ಸಾದ ನನ್ನ ತಾಯಿ ಕೊರಗಿ ಅವರು ಸಾವನ್ನಪ್ಪಿದ್ದರು.
ನನಗೆ ಪ್ರತಿನಿತ್ಯ ತೀವ್ರವಾದ ಹಲ್ಲೆ ಮಾಡಿ ಮತ್ತು ಕೊಲೆ ಬೆದರಿಕೆ ಹಾಕಿ ಪೊಲೀಸವರಿಗೆ ದುಡ್ಡು ಕೊಟ್ಟು ನಿನ್ನನ್ನು ಎನ್ಕೌಂಟರ್ ಮಾಡಿಸುತ್ತೇನೆ, ಪೋಲಿಸ್ ನವರನ್ನು ನನ್ನ ಚಪ್ಪಲಿ ಬಿಡುವ ಜಾಗದಲ್ಲಿ ಬಿಟ್ಟಿದ್ದೇನೆ, ಪೊಲೀಸ್ ನವರಿಗೆ ಕೈ ತುಂಬಾ ಹಣವನ್ನು ಕೊಟ್ಟು ನನ್ನ ಬಳಿ ಇಟ್ಟುಕೊಂಡಿದ್ದೇನೆ, ನಿನ್ನನ್ನು ಏನು ಬೇಕಾದರೂ ಮಾಡಿಸಬಲ್ಲೆ ನಾನು ಮನಸ್ಸು ಮಾಡಿದರೆ ನನ್ನ ಮಗ ಪವನ ಬೆಂಗಳೂರಿನಲ್ಲಿ ಹಲವು ರೌಡಿಗಳ ಜೊತೆ ಇದ್ದಾನೆ, ರಾತ್ರೋರಾತ್ರಿ ರೌಡಿಗಳನ್ನು ಕರೆಸಿ ನಿನ್ನನ್ನು ಮರ್ಡರ್ ಮಾಡಿಸುತ್ತೇನೆ ಎಂದು ನನಗೆ ಬೆದರಿಕೆ ಹಾಕುತ್ತಿದ್ದಾಳೆ ಎಂದು ತಿಳಿಸಿದ್ದಾರೆ.
ಜಮೀನಿಗೆ ಸಂಬಂಧಿಸಿದಂತೆ ವೆಂಕಟಗಿರಿಯಪ್ಪ ಮತ್ತು ನಾಗರತ್ನ ಹಾಗೂ ಅವರ ಸಹಚರರಾದ ಗ್ರಾಮ ಪಂಚಾಯಿತಿ ಸದಸ್ಯೆ ಲೀಲಾವತಿ, ಆತನ ಪತಿ ವೆಂಕಟೇಶ, ಮೂಡಲಗಿರಯ್ಯ, ಮಗ ಶ್ರೀನಿವಾಸ ಮತ್ತು ಕಿಟ್ಟಿ, ಇವರೆಲ್ಲರೂ ಸೇರಿ ನಾಗರತ್ನ ಕುಟುಂಬದವರಿಗೆ ಸಂಪೂರ್ಣ ಬೆಂಬಲವನ್ನು ನೀಡಿ ಹಣದ ಬೆಂಬಲವನ್ನು ಸಹ ನೀಡಿ ವೆಂಕಟಗಿರಿಯಪ್ಪ ನವರನ್ನು ಮರ್ಡರ್ ಮಾಡು ನಾವು ಇದ್ದೇವೆ , ನಿನಗೆ ಏನು ಆಗದಂತೆ ನಾವು ನೋಡಿಕೊಳ್ಳುತ್ತೇವೆ,ಅವನ ಸಂಪೂರ್ಣ ಆಸ್ತಿಯನ್ನು ಹಂಚಿಕೊಳ್ಳೋಣ, ಎಂದು ಮಾತನಾಡಿದ್ದಾರೆ.
ಇದೇ ಸಂದರ್ಭದಲ್ಲಿ ಮಾತನಾಡಿದ ದಲಿತ ಮುಖಂಡರು ಎಂ ಸಿ ಕೃಷ್ಣರಾಜು ,ರವರು ನೊಂದವರಿಗೆ ನ್ಯಾಯ ಕೊಡಿಸುವಲ್ಲಿ ಪೊಲೀಸ್ ಇಲಾಖೆಯವರು ಸಂಪೂರ್ಣ ವಿಫಲರಾಗಿದ್ದಾರೆ , ಆದ್ದರಿಂದ ನೋಂದವರಿಗೂ ಕೂಡ ಪೊಲೀಸ್ ಇಲಾಖೆಯವರು ಕೌಂಟರ್ ಕೇಸ್ ಮಾಡುತ್ತಿದ್ದಾರೆ ,ಎಂದರೆ ಯಾವ ಕೀಳು ಮಟ್ಟಕ್ಕೆ ಪೊಲೀಸ್ ಅಧಿಕಾರಿಗಳು ಇಳಿದಿದ್ದಾರೆ ,ಎಂದು ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕು, ನ್ಯಾಯ ಕೊಡಿಸುವ ಆರಕ್ಷಕರೇ ಭಕ್ಷಕರಾದರೆ ಸಾಮಾನ್ಯ ಜನರ ಗತಿ ಏನು, ಹೀಗೆ ಆದರೆ ಬಡವರ ಗೋಳು ಕೇಳುವರು ಯಾರು, ಪೊಲೀಸ್ ಇಲಾಖೆಯ ಮೇಲೆ ಅಪಾರವಾದ ನಂಬಿಕೆಯನ್ನು ಇಟ್ಟುಕೊಂಡಿದ್ದೇವೆ ,ಆದರೆ ಯಾವುದೋ ಒತ್ತಡಕ್ಕೆ ಮಣಿದು ಹಾಗೂ ಹಣದಾಸೆಗೆ ಶಾಮಿಲಾಗಿ ಕರ್ತವ್ಯ ನಿರ್ವಹಿಸುವುದು ಯಾವುದೇ ರೀತಿ ಸರಿಯಲ್ಲ ಎಂದು ಕಿಡಿಕಾರಿದರು, ಪೊಲೀಸ್ ಇಲಾಖೆಯವರು ಒಂದು ಕಂಪ್ಲೇಂಟ್ ಕೊಟ್ಟ ನಂತರ ಸ್ಥಳ ಮಹಜರು ಮಾಡಬೇಕು ಸ್ಥಳದಲ್ಲಿ ಇಲ್ಲದಂತಹ ವ್ಯಕ್ತಿಗಳ ವಿರುದ್ಧ ಸುಳ್ಳು ದೂರನ್ನು ದಾಖಲು ಮಾಡಿದ್ದಾರೆ ಎಂದರೆ ಇವರಿಗೆ ನಾಚಿಕೆಯಾಗಬೇಕು, ಪೊಲೀಸ್ ಇಲಾಖೆಯವರು ಮೇಲ್ನೋಟಕ್ಕೆ ನಾಗರತ್ನ ಹಾಗೂ ಅವರ ಕುಟುಂಬಕ್ಕೆ ಸಂಪೂರ್ಣ ಬೆಂಗಾವಲಾಗಿ ನಿಂತಿದ್ದಾರೆ ಎನ್ನುವ ಪ್ರಶ್ನೆ ಕಾಡುತ್ತಿದೆ, ಹಣದ ಆಸೆಗೆ ಅವರಿಗೆ ಸಪೋರ್ಟ್ ಮಾಡುತ್ತಿರಬಹುದು, ಎಂಬ ಪ್ರಶ್ನೆ ಕಾಡುತ್ತಿದೆ, ಹಿಂದೆ ಇದ್ದ ಪೊಲೀಸ್ ಇಲಾಖೆಯವರೇ ಬೇರೆ ಈಗಿರುವ ಪೊಲೀಸ್ ಇಲಾಖೆಯವರೇ ಬೇರೆ ಬಲಾಡ್ಯರ ಹಾಗೂ ಭ್ರಷ್ಟರ ಕುಮ್ಮಕ್ಕಿಗೆ ಮಣಿದು ಇವರು ಕೆಲಸ ಮಾಡುತ್ತಿದ್ದಾರೆ, ಇವರು ಸಂವಿದಾನದ ಅಡಿಯಲ್ಲಿ ಕೆಲಸ ಮಾಡುತ್ತಿಲ್ಲ, ಯಾವುದೋ ಒತ್ತಡಕ್ಕೆ ಮಣಿದು ಇವರು ಕೆಲಸ ಮಾಡುತ್ತಿದ್ದಾರೆ ,ಅನ್ಯಾಯದ ಪರವಾಗಿ ನಿಂತಿದ್ದಾರೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ನೊಂದಿರುವ ನನಗೆ ನ್ಯಾಯ ಕೊಡಿಸಿಕೊಡಬೇಕು ಹಾಗೂ ಸೂಕ್ತ ರಕ್ಷಣೆಯನ್ನು ನೀಡಬೇಕು, ಮುಂದೆ ನನಗೆ ಆಗುವ ಯಾವುದೇ ಅನಾಹುತಗಳಿಗೆ ಸಂಪೂರ್ಣ ಪೊಲೀಸ್ ಇಲಾಖೆ ಹಾಗೂ ನಾಗರತ್ನ, ರಾಜು ,ಪವನ ,ಹಾಗೂ ಅವರ ಬೆಂಬಲಿಗರು ನೇರ ಹೊಣೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.



