ಇತ್ತೀಚಿನ ಸುದ್ದಿರಾಜ್ಯ

ರಾಜ್ಯದ ಜನತೆಗೆ 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡಲು ಘೋಷಣೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್

ತಾಲ್ಲೂಕಿನ ಬನ್ನೂರು ಪಟ್ಟಣದಲ್ಲಿ ರತಮಾಲ್ ಚಿತ್ರಮಂದಿರದ ಆವರಣದಲ್ಲಿ ನಡೆದ ಪಕ್ಷದ ಪ್ರಜಾಧ್ವನಿ ಯಾತ್ರೆ ಯಲ್ಲಿ ಅವರು ಮಾತನಾಡಿದರು. 400 ರೂಪಾಯಿ ಇದ್ದ ಅಡುಗೆ ಅನಿಲ ಸಾವಿರ ದಾಟಿದೆ. ಅಡುಗೆ ಅನಿಲ, ಎಣ್ಣೆ, ಇಂಧನ ಬೆಲೆ ಸೇರಿದಂತೆ ಅಗತ್ಯ ವಸ್ತುಗಳನ್ನು ಸರ್ಕಾರ ಬೆಲೆ ಏರಿಕೆ ಮಾಡಿರುವುದರಿಂದ ಜನಸಾಮಾನ್ಯರು ಬದುಕುವುದು ಬಹಳ ಕಷ್ಟವಾಗಿದೆ. ಇಂತಹ ವೇಳೆ ಅವರ ಕಷ್ಟ ಕಾಲದಲ್ಲಿ ನಾವು ನೆರವಿಗೆ ಬರಬೇಕೆಂಬ ಕಾರಣದಿಂದ ನಾನು, ಸಿದ್ದರಾಮಯ್ಯ,ನವರು, ಖರ್ಗೆಯವರು ಬೆಳಗಾವಿಯಲ್ಲಿ ಮಾತನಾಡಿ, ಜನರಿಗೆ ವಿದ್ಯುತ್ ಸೌಲಭ್ಯ ಒದಗಿಸಲು 200 ಯೂನಿಟ್ ಉಚಿತವಾಗಿ ನೀಡಲು ತೀರ್ಮಾನಿಸಿ ಪಕ್ಷದ ರಾಷ್ಟ್ರೀಯ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿಯವರಿಗೆ ತಿಳಿಸಿ ಘೋಷಣೆ ಮಾಡಿದ್ದೇವೆ.

ಪ್ರಿಯಾಂಕ ಗಾಂಧಿಯವರ ಜತೆ ಹೆಣ್ಣು ಮಕ್ಕಳು ಸಂವಾದ ನಡೆಸಿದ ವೇಳೆ ಜೀವನ ನಿರ್ವಹಣೆ ದುಸ್ಥಿತಿಯ ಬಗ್ಗೆ ತಿಳಿಸಿದಾಗ ಕಾರಣ ಪ್ರತಿ ಕುಟುಂಬಕ್ಕೂ ಮನೆಯ ಒಡತಿಯ ಹೆಸರಿಗೆ ವಾರ್ಷಿಕ 24 ಸಾವಿರ, ತಿಂಗಳಿಗೆ 2 ಸಾವಿರ ನೀಡಲಿದ್ದೇವೆ. 200 ಯೂನಿಟ್ ವಿದ್ಯುತ್ ಉಚಿತ, ಮಾಸಿಕ 2 ಸಾವಿರ ಖಚಿತ, ಪಡಿತರ ಚೀಟಿಯಲ್ಲಿ 10 ಕೆಜಿ ಅಕ್ಕಿ ನೀಡುತ್ತೇವೆ 200 ಯೂನಿಟ್ ವಿದ್ಯುತ್ ಉಚಿತ, ಮಾಸಿಕ 2 ಸಾವಿರ ಖಚಿತ ಎಂದು ಭರವಸೆ ನೀಡಿದರು.

ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಕುಮಾರಣ್ಣ ದೇವೇಗೌಡ ರವರ ಕಾಲದಲ್ಲಿ ಸಾಕ್ಷೀಕರಿಸಬಹುದಾದ ಯಾವುದಾದರೂ ಸಾಧನೆ ಇದೆಯೇ ನೀವೆ ಹೇಳಿ ಅರಸು ಕಾಲದಲ್ಲಿ ಬಡವರಿಗೆ ಭೂಮಿ, ಬಂಗಾರಪ್ಪ ಕಾಲದಲ್ಲಿ ಉಚಿತ ವಿದ್ಯುತ್, ಕೃಷ್ಣ ಅವರ ಕಾಲದಲ್ಲಿ ಅಕ್ಷರ ದಾಸೋಹ ಸೇರಿದಂತೆ ಹಲವಾರು ಅಭಿವೃದ್ಧಿ ಕೆಲಸಗಳು ಇಂದಿಗೂ ಸ್ಮರಣೆಯಲ್ಲಿವೆ. ಹೇಳಿ. ಬಿಜೆಪಿಯವರು ರೈತರ ಆದಾಯ ಇಮ್ಮಡಿ ಮಾಡುತ್ತೇವೆ ಎಂದು ಹೇಳಿ ಮಾಡಲಿಲ್ಲ. ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯಿಂದ 36 ಜನರು ಸತ್ತಿದ್ದಾರೆ. ಆದರೆ ಮಂತ್ರಿಗಳು ಸುಳ್ಳು ಹೇಳಿದರು, ಸಿದ್ದರಾಮಯ್ಯನವರ ವಕೀಲರಾಗಿದ್ದ ಕಾರಣ ಪ್ರಶ್ನೆಗಳನ್ನು ಕೇಳಿದಾಗ ಅಧಿಕಾರಿ ತಪ್ಪೊಪ್ಪಿಕೊಂಡಿದ್ದಾರೆ ಇಂತಹ ಸುಳ್ಳು ಮಂತ್ರಿಗಳು ಸುಳ್ಳು ಸರ್ಕಾರವನ್ನು ಕಿತ್ತೊಗೆಯಲು ನೀವು ಕಾಂಗ್ರೆಸ್ ಗೆ ಮತ ನೀಡಿ ಎಂದು ಮನವಿ ಮಾಡಿದರು

ಬಿಜೆಪಿ ಸರ್ಕಾರ 40 ರಷ್ಟು ಕಮಿಷನ್ ಪಡೆಯುತ್ತಿದೆ. ನಾನು ಹೇಳುತ್ತಿಲ್ಲ. ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಕೆಂಪಣ್ಣ ಆರೋಪಿಸಿ ಪ್ರಧಾನ ಮಂತ್ರಿಗಳಿಗೆ ದೂರು ನೀಡಿದ್ದಾರೆ. ಡಾ. ಮಹದೇವಪ್ಪ ನವರ ಕಾಲದಲ್ಲಿ 100 ಕೋಟಿ ಅಂದಾಜು ಮಾಡುತ್ತಿದ್ದ ಸರ್ಕಾರ ಈಗ 200 ಕೋಟಿ ಮಾಡಲಾಗುತ್ತಿದೆ. ಸಚಿವರು ಕಮಿಷನ್ ಕೇಳಿದರೂ ಅಂತ ಒಬ್ಬ ಕಾರ್ಯಕರ್ತ ಆತ್ಮಹತ್ಯೆ ಮಾಡಿಕೊಂಡ. ನಾವು ಸರ್ಕಾರದ ಮೇಲೆ ಒತ್ತಡ ಹೇರಿ ಆ ಮಂತ್ರಿಯಿಂದ ರಾಜೀನಾಮೆ ಕೊಡಿಸಿದ್ವಿ. ಇಂತಹ ಕಮಿಷನ್ ಸರ್ಕಾರ ಕಿತ್ತೊಗೆದು ಕಾಂಗ್ರೆಸ್ಸ ಗೆ ಮತ ನೀಡುವಂತೆ ಮನವಿ ಮಾಡಿದ್ದಾರೆ. ಇಲ್ಲಿ ಮಹದೇವಪ್ಪ, ಬೋಸ್ ಅಭ್ಯರ್ಥಿಯಲ್ಲ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅಭ್ಯರ್ಥಿಗಳು. ನಮ್ಮನ್ನು ಮತ್ತೆ ವಿಧಾನಸೌಧದಲ್ಲಿ ಕೂರಿಸಲು ಪ್ರತಿಜ್ಞೆ ಮಾಡಿ ಆಶೀರ್ವಾದ ನೀಡುವಂತೆ ಅವರು ಜನರಲ್ಲಿ ಕೋರಿದರು

ಮಾಜಿ ಸಚಿವ ಡಾ. ಎಚ್‍.ಸಿ. ಮಹದೇವಪ್ಪ, ಮಾತನಾಡಿ, ಬಿಜೆಪಿ ಸರ್ಕಾರ ಸಂವಿಧಾನದ ಹೆಸರಿನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಜಾತಿ ಧರ್ಮ ದ ಹೆಸರಿನಲ್ಲಿ ಸಮಾಜದ ಸ್ವಾಸ್ಥ್ಯವನ್ನು ಕದಡುವ ಪ್ರಯತ್ನ ನಡೆದಿದೆ. ಯುವ ಜನತೆ ಇಂತಹ ಜಾತಿ ಧರ್ಮದ ಹೆಸರಿನಲ್ಲಿ ಆಡಳಿತ ನಡೆಸುವ ಸರ್ಕಾರವನ್ನು ಕಿತ್ತೊಗೆಯಬೇಕು. ಬಿಜೆಪಿ ಸರ್ಕಾರದ ವೈಫಲ್ಯಗಳು ತಪ್ಪುಗಳನ್ನು ಎತ್ತಿ ಹಿಡಿಯಲು ಮಾಧ್ಯಮಗಳು ಮುಂದಾಗಬೇಕು. ಎಂದರು.

ನಮ್ಮ ಅವಧಿಯಲ್ಲಿ ತಾಲ್ಲೂಕಿಗೆ ಮಂಜೂರಾಗಿದ್ದ ತಾಂತ್ರಿಕ ಶಿಕ್ಷಣ ಸಂಸ್ಥೆಯನ್ನು ಸರ್ಕಾರ ಹಿಂಪಡೆದು ಆರ್ ಆರ್ ನಗರಕ್ಕೆ ವರ್ಗಾಯಿಸಿದೆ. ಯುವಕರ ಬದುಕಿಗೆ ಅಗತ್ಯ ತಾಂತ್ರಿಕ ಶಿಕ್ಷಣ ಒದಗಿಸಲು ನೀಡಿದ್ದ ಕಾಲೇಜನ್ನು ಇಲ್ಲಿನ ಹಾಲಿ ಶಾಸಕರು ಉಳಿಸುವಲ್ಲಿ ವಿಫಲರಾಗಿದ್ದಾರೆ. .

ನಮ್ಮ ಕಾಂಗ್ರೆಸ್ ಆಡಳಿತದ ಅಭಿವೃದ್ಧಿಯನ್ನು ಜನ ನೋಡಿ ಇಂದಿಗೂ ಮಾತನಾಡುತ್ತಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿ ಯಾವುದೇ ಅಭಿವೃದ್ಧಿ ಯಾಗುವು್ದಿಲ್ಲ. ಈಗ ಬಹುಮತದೊಂದಿಗೆ ಪಕ್ಷವನ್ನು ಅಧಿಕಾರಕ್ಕೆ ಬಂದರೆ ಅಭಿವೃದ್ಧಿ ಸಾಧ್ಯ ಎಂಬುದು ನಿಮಗೆ ಅರಿವಾಗಿದೆ. ಎಂದರು

ಟಿ ನರಸೀಪುರ ಕ್ಷೇತ್ರ ವಸತಿ ಜಾಗೃತಿ ಸಮಿತಿ ಮಾಜಿ ಅಧ್ಯಕ್ಷ ಸುನಿಲ್ ಬೋಸ್ ಮಾತನಾಡಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್, ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಡಾ. ತಿಮ್ಮಯ್ಯ, ಪಕ್ಷದ ಮುಖಂಡರಾದ ಉಗ್ರಪ್ಪ,, ಎಚ್.ಎಂ. ರೇವಣ್ಣ, ಡಿಸಿಸಿ ಅಧ್ಯಕ್ಷ ಡಾ. ಬಿ.ಜೆ. ವಿಜಯಕುಮಾರ್, ಪುಷ್ಪ ಅಮರನಾಥ್, , ಮಾಜಿ ಶಾಸಕರುಗಳಾದ ಎಸ್. ಕೃಷ್ಣಪ್ಪ, ಸುನೀತಾ ವೀರಪ್ಪಗೌಡ, ಯುವ ಕಾಂಗ್ರೆಸ್ ರಾಜ್ಯ ಅಧ್ಯಕ್ಷ ನಲಪಾಡ್, ಬ್ಲಾಕ್ ಅಧ್ಯಕ್ಷರುಗಳಾದ ಚನ್ನಕೇಶವ, ಎಂ.ಡಿ. ಬಸವರಾಜು , ಪಿ ಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಶಿವಮೂರ್ತಿ, ತಾ.ಪಂ ಮಾಜಿ ಅಧ್ಯಕ್ಷ ಯಾಕನೂರು ಉಮೇಶ್, ಹುಣಸೂರು ಬಸವಣ್ಣ, ಮಲ್ಲಿಕಾರ್ಜುನಸ್ವಾಮಿ, ಪದ್ಮನಾಭ್, ಮುನಾವರ್ ಪಾಷಾ, ಬನ್ನೂರು ಪುರಸಭಾ ಅಧ್ಯಕ್ಷ ಭಾಗ್ಯಶ್ರೀ ಕೃಷ್ಣ, ತಾಪಂ ಮಾಜಿ ಸದಸ್ಯರುಗಳಾದ ರಾಮಲಿಂಗಯ್ಯ, ಕುಕ್ಕುರು ಗಣೇಶ್, ರಂಗಸ್ವಾಮಿ ಸೇರಿದಂತೆ ಹಲವಾರು ಮುಖಂಡರು ಕಾರ್ಯಕ್ರಮದಲ್ಲಿ ಹಾಜರಿದ್ದರು

Related Articles

Leave a Reply

Your email address will not be published. Required fields are marked *

Back to top button