ಇತ್ತೀಚಿನ ಸುದ್ದಿರಾಜ್ಯ

ವಿದ್ಯಾರ್ಥಿಗಳು ವಿದ್ಯೆ ಪಡೆಯುವ ಮೂಲಕ ಪ್ರಬುದ್ಧರಾಗಬೇಕು

ವಿದ್ಯಾರ್ಥಿಗಳು ಕಠಿಣ ವ್ಯಾಸಂಗ ಮಾಡಿದರೆ ಮಾತ್ರ ಉನ್ನತ ಸಾಧನೆ ಮಾಡಲು ಸಾಧ್ಯ. ವಿದ್ಯೆಯನ್ನು ಪಡೆದು ಪ್ರಬುದ್ಧರಾದರೆ ಹಣ ತಾನಾಗಿಯೇ ಬರುತ್ತದೆ ಎಂದು ವೈದ್ಯನಾಥಪುರ ಜಂಗಮ ಮಠದ ರೇಣುಕಾ ಶಿವಾಚಾರ್ಯ ಸ್ವಾಮಿಜೀ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಕೀಳಘಟ್ಟ ಗ್ರಾಮದ ನಂಜುಂಡೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ನಂಜುಂಡೇಶ್ವರಸ್ವಾಮಿ ಸೇವಾಭಿವೃದ್ಧಿ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ನಂಜುಂಡೇಶ್ವರ ಸ್ವಾಮಿ ಶೈಕ್ಷಣಿಕ ದತ್ತಿನಿಧಿ ಸ್ಥಾಪನೆ ಮತ್ತು ನಗದು ಪುರಸ್ಕಾರ ಪ್ರದಾನ ಕಾರ್ಯಕ್ರಮಕ್ಕೆ ಚಾಲನೇ ನೀಡಿ ಗ್ರಾಮಸ್ಥರಿಂದ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಯುವ ಜನರು ಮತ್ತು ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುವ ಮೂಲಕ ದೇಶದ ಪ್ರಗತಿಗೆ ಶ್ರಮಿಸಬೇಕು. ವಿದ್ಯಾರ್ಥಿಗಳು ಇತ್ತಿಚಿನ ದಿನಗಳಲ್ಲಿ ಮೊಬೈಲ್ ದಾಸರಾಗುತ್ತಿದ್ದಾರೆ. ಇದರಿಂದ ಸಾಮಾಜಿಕ ಪ್ರಜ್ಞೆ ಕಳೆದುಕೊಳ್ಳುತ್ತಿದ್ದಾರೆ. ಒಳ್ಳೆಯದಕ್ಕೆ ಮಾತ್ರ ಮೊಬೈಲ್ ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ನಿವೃತ ಡಿವೈಎಸ್ಪಿ ಎ.ಆರ್. ಬಲರಾಮಗೌಡ ಅವರು ಮಾತನಾಡಿ, ನಂಜುಂಡೇಶ್ವರ ಟ್ರಸ್ಟ್ ಕೆವಲ ದೇಗುಲದ ಅಭಿವೃದ್ದಿಗೆ ಸೀಮಿತವಾಗಿದರೆ, ಶೈಕ್ಷಣಿಕ ಚಟುವಟಿಕೆಗಳಿಗೆ ಬೆನ್ನುಲುಬಾಗಿ ನಿಲ್ಲುವ ಮೂಲಕ ಗ್ರಾಮದ ಪ್ರಗತಿಗೆ ಶ್ರಮಿಸುತ್ತಿದ್ದಾರೆ. ಇತಂಹ ಬೆಳವಣಿಗೆಗಳು ಎಲ್ಲಾ ಕಡೆ ಆಗಬೇಕು. ಸಮಾಜ ಚೆನ್ನಾಗಿದ್ದರೆ ಮಾತ್ರ ನಾವು ಉತ್ತಮ ಜೀವನ ಮಾಡಲು ಸಾಧ್ಯ ಎಂದರು.
ನಂಜುಂಡೇಶ್ವರ ಸ್ವಾಮಿಯ ಧರ್ಮದರ್ಶಿ ನಂಜುಂಡಯ್ಯ, ನಿವೃತ ಡಿವೈಎಸ್ಪಿ ಎ.ಆರ್. ಬಲರಾಮಗೌಡ, ಮಳವಳ್ಳಿ ಉಪ ವಿಭಾಗದ ಡಿವೈಎಸ್ಪಿ ಎಚ್. ಕೃಷ್ಣಪ್ಪ, ಆರಕ್ಷಕ ವೃತ್ತ ನಿರೀಕ್ಷರಾದ ಕೆ.ಆರ್. ಪ್ರಸಾದ್, ವೆಂಕಟೇಗೌಡ ಪಿಎಸ್ಐ ಮಲ್ಲಪ್ಪ ಕಂಬಾರ, ನೆಲದಸಿರಿ ಟ್ರಸ್ಟ್ ನ ಅಣ್ಣೆದೊಡ್ಡಿ ನಂದೀಶ್ ಸೇರಿದಂತೆ ಇತರರು ಇದ್ದರು.
ಮದ್ದೂರು ತಾಲ್ಲೂಕಿನ ಕೀಳಘಟ್ಟ ಗ್ರಾಮದ ನಂಜುಂಡೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ನಂಜುಂಡೇಶ್ವರಸ್ವಾಮಿ ಸೇವಾಭಿವೃದ್ಧಿ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ನಂಜುಂಡೇಶ್ವರ ಸ್ವಾಮಿ ಶೈಕ್ಷಣಿಕ ದತ್ತಿನಿಧಿ ಸ್ಥಾಪನೆ ಮತ್ತು ನಗದು ಪುರಸ್ಕಾರ ಪ್ರದಾನ ಕಾರ್ಯಕ್ರಮದಲ್ಲಿ ಸಾಧಕರನ್ನು ಅಭಿನಂದಿಸಲಾಯಿತು.

Related Articles

Leave a Reply

Your email address will not be published. Required fields are marked *

Back to top button