ಇತ್ತೀಚಿನ ಸುದ್ದಿ
Trending

ಮಾರುತಿಪುರ ಗ್ರಾ.ಪಂ. ಉಪಾಧ್ಯಕ್ಷರಾಗಿ ಇಂದ್ರೇಶ್ ಅವಿರೋಧ ಆಯ್ಕೆ

ಹೊಸನಗರ : ಮಾರುತಿಪುರ ಗ್ರಾಮ ಪಂಚಾಯತಿ ಉಪಾಧ್ಯಕ್ಷರ ಚುನಾವಣೆ ಸೋಮವಾರ ನೆಡೆಯಿತು.ಉಪಾಧ್ಯಕ್ಷರಾಗಿ ಇಂದ್ರೇಶ್ ಅವಿರೋಧವಾಗಿ ಆಯ್ಕೆಯಾದರು.ಖಾಲಿಯಾಗಿದ್ದ ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸದ್ಯಸ ಇಂದ್ರೇಶ್ ಅವಿರೋಧವಾಗಿ ಆಯ್ಕೆಯಾಗಿದ್ದು ಚುನಾವಣೆ ಅಧಿಕಾರಿಯಾಗಿ ಕೃಷಿ ಅಧಿಕಾರಿ ಮಾರುತಿ ಕಾರ್ಯನಿರ್ವಹಿಸಿದರು.

ಆಯ್ಕೆಯಾದ ಸದ್ಯಸರಿಗೆ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ. ಜಿ. ಚಂದ್ರಮೋಳಿ ಅಭಿನಂದನೆ ಸಲ್ಲಿಸಿದರು. ಮಾತನಾಡಿದ ಅವರು ತಾಲೂಕಿನಲ್ಲಿಕಾಂಗ್ರೆಸ್ ಪಕ್ಷ ಹೆಮ್ಮರವಾಗಿ ಬೆಳೆಯುತ್ತಿದ್ದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ನಿಷ್ಠೆಯಿಂದ ಬಡವರ ಕೆಲಸ ಮಾಡುತ್ತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ತಾಲೂಕು ಗ್ಯಾರಂಟಿ ಅನುಷ್ಠಾನ ಅಧ್ಯಕ್ಷ ಹೆಚ್. ಚಿಂದಬರ,ಗ್ರಾಮ ಪಂಚಾಯತಿ ಅಧ್ಯಕ್ಷೆ ಜಯಮ್ಮ, ಸದ್ಯಸರುಗಳಾದ ಅವಿನಾಶ್, ನಾರಾಯಣಪ್ಪ ಶಂಕರ್ ಶೆಟ್ಟಿ, ದೀಪಿಕಾ ಕೃಷ್ಣ ಸೇರಿ ಇತರರು ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button