ರಾಜ್ಯ
Trending

ಟೇಕಲ್ ಗ್ರಾಮ ಪಂಚಾಯಿತಿಗೆ ಅಧ್ಯಕ್ಷರಾಗಿ ಸುಧಾರಾಣಿ ಗೋವಿಂದರಾಜರೆಡ್ಡಿ, ಉಪಾಧ್ಯಕ್ಷರಾಗಿ ಭಾಗ್ಯಮ್ಮ ಶಾಮಣ್ಣ ಅವಿರೋದ ಆಯ್ಕೆ

ತಾಲ್ಲೂಕಿನ ಟೇಕಲ್ ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷರಾಗಿ ಗೋಪಸಂದ್ರ ಗ್ರಾಮದ ಸುಧಾರಾಣಿ ಗೋವಿಂದರಾಜರೆಡ್ಡಿ, ಉಪಾಧ್ಯಕ್ಷರಾಗಿ ಭಾಗ್ಯಮ್ಮಶಾಮಣ್ಣ ಅವಿರೋಧ ಆಯ್ಕೆಯಾಗಿದ್ದಾರೆ.

ಈ ಹಿಂದೆ ಇದ್ದ ಅಧ್ಯಕ್ಷರಾದ ಖಾದರ್, ಉಪಾಧ್ಯಕ್ಷರಾದ ಸುಧಾರಾಣಿ ರವರು ನೀಡಿದ ರಾಜಿನಾಮೆಯಿಂದ ಎರಡು ಸ್ಥಾನಗಳು ತೆರವಾಗಿತ್ತು. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಂದೊಂದು ನಾಮಪತ್ರ ಸಲ್ಲಿಕೆಯಾಗಿದ್ದ ಕಾರಣ ಅಧ್ಯಕ್ಷೆ, ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣೆ ಅಧಿಕಾರಿ ಆನಂದಮೂರ್ತಿ ಘೋಷಿಸಿದರು.

ಗ್ರಾಮಸ್ಥರ ಹಾಗೂ ಗ್ರಾ.ಪಂ.ಸದಸ್ಯರುಗಳ ಅಭಿನಂದನೆ ಸ್ವೀಕರಿಸಿ ಮಾತನಾಡಿದ ನೂತನ ಅಧ್ಯಕ್ಷೆ ಸುಧಾರಾಣಿ ಗೋವಿಂದರಾಜರೆಡ್ಡಿ ಶಾಸಕ ಕೆ.ವೈ.ನಂಜೇಗೌಡರ ಸಹಕಾರದಿಂದ ಮತ್ತು ಎಲ್ಲಾ ಸದಸ್ಯರ ಸಹಕಾರದಿಂದ ಅಧ್ಯಕ್ಷ ಸ್ಥಾನ ಲಭಿಸಿದ್ದು, ಪಂಚಾಯ್ತಿಯನ್ನು ನನ್ನ ಅಧಿಕಾರಾವಧಿಯಲ್ಲಿ ಅಭಿವೃದ್ಧಿ ಪಥದತ್ತ ಕೊಂಡೊಯ್ಯಲಾಗುವುದು ಎಂದರು.

ಈ ಸಂಧರ್ಭದಲ್ಲಿ ಮುಖಂಡರಾದ ಎಸ್.ಜಿ.ರಾಮಮೂರ್ತಿ, ಖಾದರ್, ಸಂದೀಪ್, ಎಸ್.ಪಿ.ಮುರಳಿ, ಟಿ.ಎಂ.ಮಂಜುನಾಥ್, ವೆಂಕಟಪ್ಪ, ಪ್ರಗತಿ ಶ್ರೀನಿವಾಸ್, ಎಂ.ಎ.ರಾಮಕೃಷ್ಣಪ್ಪ, ಚಲಪತಿ.ವಿ, ವೆಂಕಟಸ್ವಾಮಿ, ರೂಪ.ವಿ, ರವಿಕುಮಾರ್, ಸರಸ್ವತಮ್ಮ ನಾರಾಯಣಸ್ವಾಮಿ, ಶ್ರೀನಿವಾಸ್.ಟಿ, ರಾಧ, ಸಾವಿತ್ರಮ್ಮ, ಶ್ವೇತಾ.ಬಿ, ಚಿಕ್ಕವೆಂಕಟೇಶ, ಪಿಡಿಒ ಜವರೇಗೌಡ.ಎ.ಹೆಚ್, ಬಿಲ್‌ಕಲೆಕ್ಟರ್ ಅನಿಲ್‌ಕುಮಾರ್, ಕೆ.ಜಿ.ಹಳ್ಳಿ ಗ್ರಾ.ಪಂ.ಅಧ್ಯಕ್ಷ ಎಂ.ಮುರುಗೇಶ, ಶಶಿಧರ, ಎ.ಕೆ.ವೆಂಕಟೇಶ್, ಇತರರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button