
ನಾಗಮಂಗಲ : ತಾಲೂಕಿನ ಕಂದಾಯ ಇಲಾಖೆಯಲ್ಲಿ ಭ್ರಷ್ಟಾಚಾರ ಎಗ್ಗಿಲ್ಲದಂತೆ ನಡೆಯುತ್ತಿರುವುದಕ್ಕೆ ಸಾಕ್ಷಿ ಎಂಬಂತೆ ದರಕಾಸ್ತು ಶಾಖೆಯ ನಾಲ್ವರು ಅಧಿಕಾರಿಗಳು ನಕಲಿ ಕಡತವನ್ನು ಸೃಷ್ಟಿ ಮಾಡಿ ಮತ್ತೊಬ್ಬ ವ್ಯಕ್ತಿಗೆ ಜಮೀನು ಮಂಜೂರಿಗೆ ಅವಕಾಶ ಮಾಡಿಕೊಟ್ಟಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಮಾಜಿ ದರಕಾಸ್ತು ಕಮಿಟಿ ಸದಸ್ಯ ನರಸಿಂಹಮೂರ್ತಿ ಮೈಸೂರಿನ ಕಂದಾಯ ಇಲಾಖೆಯ ಪ್ರಾದೇಶಿಕ ಆಯುಕ್ತರ ಕಚೇರಿಗೆ ದೂರು ನೀಡಿದ್ದು, ಈ ನಕಲಿ ಕಡತ ಸೃಷ್ಟಿಸಿದ ಅಧಿಕಾರಿಗಳ ವಿರುದ್ಧ ತನಿಖೆಯಿಂದ ಈ ನಾಲ್ವರು ಕಳ್ಳ ಅಧಿಕಾರಿಗಳು ನಡೆಸಿದ ನಕಲಿ ಕಡತ ವ್ಯವಹಾರ ಬಟಾ ಬಯಲಿಗೆ ಬಂದು ಎಲ್ಲರೂ ಕೂಡ ಅಮಾನತ್ತಾಗಿದ್ದಾರೆ.ತನಿಕೆಯಿಂದ ಈ ಅಧಿಕಾರಿಗಳು ಮಾಡಿದ ಭ್ರಷ್ಟಾಚಾರ ಸಾಬೀತಾಗಿದ್ದು, ಮೈಸೂರಿನ ಕಂದಾಯ ಇಲಾಖೆ ಪ್ರಾದೇಶಿಕ ಆಯುಕ್ತರಾದ ರಮೇಶ್ ಡಿಎಸ್, ಉಪ ತಹಶಿಲ್ದಾರ್ ಪ್ರಸನ್ನ ಕುಮಾರ್ ಅವರನ್ನು ಅಮಾನತ್ತು ಮಾಡಿ ಉಳಿದ ಮೂವರು ಅಧಿಕಾರಿಗಳನ್ನು ಅಮಾನತ್ತು ಮಾಡಲು ಮಂಡ್ಯ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಆದೇಶ ಮಾಡಿದ್ದರು
ಈ ಆದೇಶದ ಅನ್ವಯ ಮಂಡ್ಯ ಜಿಲ್ಲಾಧಿಕಾರಿಗಳಾದ ಡಾ. ಕುಮಾರ ಅವರು ಇಂದು ರಾಜಶ್ವ ನಿರೀಕ್ಷಕರಾದ ಶಶಿಧರ್. ಗಣೇಶ್ ಸಿ ಹಾಗೂ ಗ್ರಾಮ ಆಡಳಿತ ಅಧಿಕಾರಿ ಹೆಚ್ಚು ಕರ್ಣ ರವರನ್ನು ಅಮಾನತ್ತು ಮಾಡಿ ವರ್ಗಾವಣೆ ಮಾಡಿ ಭ್ರಷ್ಟ ಅಧಿಕಾರಿಗಳಿಗೆ ಬಿಸಿಮುಟ್ಟಿಸಿದ್ದಾರೆ.
ಕೃಷಿ ಸಚಿವ ಚೆಲುವರಾಯಸ್ವಾಮಿ ರವರು ಕ್ಯಾಬಿನೆಟ್ ಮಂತ್ರಿ ಆದ ನಂತರ ನಾಗಮಂಗಲ ಕ್ಷೇತ್ರ ಅನಾಥವಾಗಿದೆ. ಅಧಿಕಾರಿಗಳಿಗೆ ಹೇಳುವವರು ಕೇಳುವವರು ಯಾರು ಇಲ್ಲ. ಪ್ರಸ್ತುತ ನಾಗಮಂಗಲ ತಾಲೂಕ ಕಚೇರಿಯಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದ್ದು, ಇಲ್ಲಿನ ಅಧಿಕಾರಿಗಳ ನಿರ್ಲಕ್ಷತನ ಕಚೇರಿಗೆ ಭೇಟಿ ನೀಡಿದರೆ ತಿಳಿಯುತ್ತದೆ ಎಂದು ಸ್ಥಳೀಯರು ದೂರುತ್ತಿದ್ದಾರೆ.
ಪ್ರಸ್ತುತ ಸಾರ್ವಜನಿಕರ ಆರೋಪದಂತೆ ಅಧಿಕಾರಿಗಳು ಸಹಿ ಮಾಡಿ ಹೋದರೆ ಮತ್ತೆ ಬರುವುದು ಅನುಮಾನ. ತಾಲೂಕ ಕಚೇರಿಯಲ್ಲಿ ಲೋಕಾಯುಕ್ತರ ಕೇಸಿನಲ್ಲಿ ತಗಲಾಕಿಕೊಂಡ ಅಧಿಕಾರಿಗಳು ನಕಲಿ ಸರ್ಟಿಫಿಕೇಟ್ ನೀಡಿ ಗ್ರಾಮ ಆಡಳಿತ ಅಧಿಕಾರಿ ಹುದ್ದೆ ಪಡೆದಿರುವವರು ಮಿಲಿಟರಿ ಕೋಟದಲ್ಲಿ ಅಕ್ರಮವಾಗಿ ಬಂದಿರುವ ಅಧಿಕಾರಿಗಳು ದಂಡೆ ಇದೆ ಎನ್ನಲಾಗುತ್ತಿದೆ.
ಕಚೇರಿಯಲ್ಲಿ ಮಹಿಳಾ ಉದ್ಯೋಗಿಗಳು ಕಾರ್ಯನಿರ್ವಹಿಸುವುದು ಬಿಟ್ಟರೆ, ಪುರುಷ ಸಿಬ್ಬಂದಿ ಕೈಗೆ ಸಿಗುವುದು ಕಷ್ಟ. ಇನ್ನಾದರೂ ತಾಲೂಕ ಕಚೇರಿಯನ್ನು ಮೇಜರ್ ಸರ್ಜರಿಯ ಮೂಲಕ ಸಾರ್ವಜನಿಕರ ಕೆಲಸಗಳಿಗೆ ಸುಗಮವಾಗುವ ರೀತಿ ಮಾಡುವರೆ ಕೃಷಿ ಸಚಿವರು ಎಂದು ಕಾದು ನೋಡಬೇಕಾಗಿದೆ ಎಂದು ಸಾರ್ವಜನಿಕರ ಅಳಲಾಗಿದೆ.



