ಇತ್ತೀಚಿನ ಸುದ್ದಿರಾಜ್ಯ

ಸಂವಿಧಾನ ಜಾಗೃತಿ ಜಾಥಾ ರಥಕ್ಕೆ ತೊರ‍್ನಹಳ್ಳಿಯಲ್ಲಿ ಅದ್ದೂರಿಯಾಗಿ ಸ್ವಾಗತ

ಮಾಲೂರು:- ತಾಲ್ಲೂಕಿನ ಕಸಬಾ ಹೋಬಳಿಯ ತೊರ‍್ನಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದ ಅಂಗವಾಗಿ, ಮಾಲೂರು ತಾಲ್ಲೂಕಿನಲ್ಲಿ ಪ್ರಥಮವಾಗಿ ತೊರ‍್ನಹಳ್ಳಿ ಗ್ರಾಮ ಪಂಚಾಯತಿಯ ಆವರಣದಲ್ಲಿ ಸಂವಿಧಾನ ರಥಕ್ಕೆ ಅದ್ದೂರಿಯಾಗಿ ಸ್ವಾಗತ ನೀಡಲಾಯಿತು.

ಜಗತ್ತಿನಲ್ಲಿ ಶ್ರೇಷ್ಠವಾಗಿರುವ ಭಾರತದ ಸಂವಿಧಾನ ರಚನೆಯಾಗಿ 75 ವರ್ಷಗಳು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಒಂದು ತಿಂಗಳ ಕಾಲ ಸಂವಿಧಾನ ಜಾಗೃತಿ ಜಾಥಾ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ಗ್ರಾಮ ಪಂಚಾಯಿತಿಗಳಲ್ಲಿ ಸಂವಿಧಾನ ರಥಕ್ಕೆ ಅದ್ಬುತ ಸ್ಪಂಧನೆ ಸಿಗುತ್ತಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಶ್ರೀನಿವಾಸನ್ ತಿಳಿಸಿದ್ದಾರೆ. ಸಂವಿಧಾನದ ಕುರಿತು ಜಾಗೃತಿ ಮೂಡಿಸುವುದೇ ಇದರ ಉದ್ದೇಶ. ಮುಖ್ಯವಾಗಿ, ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ನಮ್ಮ ಸಂವಿಧಾನ ಇಡೀ ಪ್ರಪಂಚದಲ್ಲೇ ಅತ್ಯಂತ ಶ್ರೇಷ್ಠ ಸಂವಿಧಾನವಾಗಿದೆ ಎಂದರು.

ಸಂವಿಧಾನದ ಕುರಿತು ಜಾಗೃತಿ ಮೂಡಿಸುವುದೇ ಸಂವಿಧಾನ ಜಾಥಾ ರಥ
ಇದರ ಉದ್ದೇಶ. ಮುಖ್ಯವಾಗಿ ನಮ್ಮ ಸಂವಿಧಾನ ಇಡೀ ಪ್ರಪಂಚದಲ್ಲೇ ಅತ್ಯಂತ ಶ್ರೇಷ್ಠ ಸಂವಿಧಾನವಾಗಿದೆ. ಸರ್ವರಿಗೂ ನ್ಯಾಯವನ್ನು ನೀಡುವ, ಎಲ್ಲರನ್ನೂ ಒಳಗೊಳ್ಳುವ ಸಂವಿಧಾನವಾಗಿದೆ ಎಂದು ಮಾಲೂರು ದಂಡಾಧಿಕಾರಿಗಳಾದ ಕೆ.ರಮೇಶ್ ರವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಶ್ರೀನಿವಾಸನ್, ತಾಲ್ಲೂಕು ಕಾರ್ಯನಿರ್ವಾಹಣಾಧಿಕಾರಿ ಶಿವಕುಮಾರ್, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಚಂಗಲರಾಯ ಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಕಲಾ, ಪಂಚಾಯಿತಿ ಅಧ್ಯಕ್ಷ ಅಶ್ವತಮ್ಮ ಇಂಜಿನಿಯರ್ ರಾಮಯ್ಯ, ಮಾಜಿ ಅಧ್ಯಕ್ಷ ಮುನಿಯಪ್ಪ, ಉಪಾಧ್ಯಕ್ಷರಾದ ನಾಗರತ್ನಮ್ಮ ವೆಂಕಟರಮಣಪ್ಪ , ಗ್ರಾ.ಪಂ ಸದಸ್ಯರಾದ ಎ.ಮಂಜುನಾಥ್, ಸಿ.ವಿ.ವೆಂಕಟರಮಣಪ್ಪ, ಟಿ.ವಿ.ನಾರಾಯಣಸ್ವಾಮಿ, ಸುಮಿತ್ರಾ ಲೋಕೇಶ್, ತಿಮ್ಮರಾಯಪ್ಪ, ಶ್ರೀಮತಿ ನಾಗರತ್ನಮ್ಮ ಚಿಕ್ಕಣ್ಣ, ಸೊಣ್ಣನಾಯಕನಹಳ್ಳಿ ನಾಗರಾಜಪ್ಪ, ರೂಪ ಚಂದ್ರಶೇಖರ್, ನಾಗರತ್ನ, ಬಿಎಂಎನ್ ನಾಗರಾಜು,ಶಿಲ್ಪ ಸಂತೋಷ್ ಕುಮಾರ್, ಅಮರಾವತಿ ಸಂತೋಷ್ ಕುಮಾರ್, ಸುಜಾತಮ್ಮ ಬೆಳ್ಳೂರಪ್ಪ, ಹೆಡಗಿನಬೆಲೆ ಮುರಳಿ, ವೀರಭದ್ರ, ಬಿಲ್ ಕಲೆಕ್ಟರ್ ಎಂ.ನಾಗರಾಜ, ರಮಾ ಮಾಧವ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ವಿದ್ಯಾಧರಿ, ದೈಹಿಕ ಶಿಕ್ಷಣ ಶಿಕ್ಷಕ ವೆಂಕಟಸ್ವಾಮಿ ಸಹ ಶಿಕ್ಷಕರಾದ ತಿಮ್ಮರಾಯಪ್ಪ ಸೇರಿದಂತೆ ಮಕ್ಕಳು ಹಾಗೂ ಸಿಬ್ಬಂದಿ, ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗ ಹಾಗೂ ಸಾರ್ವಜನಿಕರು ಇದ್ದರು.

Related Articles

Leave a Reply

Your email address will not be published. Required fields are marked *

Back to top button