ಸೈನಿಕರ ಕಲ್ಯಾಣ, ಸೇನೆಯ ಸಬಲೀಕರಣಕ್ಕೆ ಸರ್ಕಾರ ಬದ್ಧ: ರಾಜ್ಯಪಾಲರು
ಸಶಸ್ತ್ರ ಪಡೆಗಳ ಸಿಬ್ಬಂದಿ ಅನೇಕ ಕ್ಷೇತ್ರಗಳಲ್ಲಿ ನುರಿತ ಮತ್ತು ಅನುಭವಿಯಾಗಿದ್ದಾರೆ, ನಿವೃತ್ತಿಯ ನಂತರ ಅವರ ಅನುಭವಗಳ ಬಳಕೆಯು ಸ್ವಾವಲಂಬಿ ಭಾರತವನ್ನು ನಿರ್ಮಿಸಲು ಸಹಾಯ ಮಾಡುತ್ತದೆ ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಅಭಿಪ್ರಾಯಪಟ್ಟರು.
ರಾಜಭವನದ ಗಾಜಿನಮನೆಯಲ್ಲಿ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ದೇಶದ ಸಾರ್ವಭೌಮತೆ ಮತ್ತು ಸಮಗ್ರತೆಯನ್ನು ಕಾಪಾಡಲು ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡಿದ ವೀರ ಯೋಧರಿಗೆ ಗೌರವಪೂರ್ವಕವಾಗಿ ನಮಿಸುತ್ತೇನೆ ಎಂದ ಅವರು, ದೇಶದ ಸ್ವಯಂಸೇವಾ ಸಂಸ್ಥೆಗಳು, ಕೈಗಾರಿಕೋದ್ಯಮಿಗಳು ಮತ್ತು ಕಾಪೆರ್Çರೇಟ್ ಸಂಸ್ಥೆಗಳು ಮಾಜಿ ಸೈನಿಕರನ್ನು ಅರ್ಹ ಕೆಲಸಗಳಿಗೆ ನಿಯುಕ್ತಿಗೊಳಿಸಿಕೊಳ್ಳಬೇಕು ಎಂದರು.
ಸಶಸ್ತ್ರ ಪಡೆಗಳ ಧ್ವಜ ದಿನವು ನಮ್ಮ ರಕ್ಷಣೆ ಮತ್ತು ಭದ್ರತೆಗಾಗಿ ಯಾವಾಗಲೂ ಸಿದ್ಧವಾಗಿರುವ ಅದಮ್ಯ, ಧೈರ್ಯಶಾಲಿ, ಪರಾಕ್ರಮಿ, ಕೆಚ್ಚೆದೆಯ ಸೈನಿಕರಿಗೆ ಗೌರವವನ್ನು ಸಲ್ಲಿಸುವ ದಿನವಾಗಿದೆ. ಭಾರತೀಯ ಸೇನೆಯು ಭವ್ಯ ಇತಿಹಾಸವನ್ನು ಹೊಂದಿದೆ ಮತ್ತು ನಮ್ಮ ಸೈನ್ಯವು ವಿಶ್ವದ ಅತ್ಯುತ್ತಮ ಸೈನ್ಯವೆಂದು ಎಲ್ಲರಿಗೂ ತಿಳಿದಿದೆ. ನಮ್ಮ ಸೈನಿಕರು ಪ್ರತಿಯೊಂದು ಕ್ಷೇತ್ರದಲ್ಲೂ ವಿಶೇಷವಾದ ಗುರುತನ್ನು ಮೂಡಿಸಿದ್ದಾರೆ ಎಂದು ಹೇಳಿದರು.

ನಮ್ಮ ಸಶಸ್ತ್ರ ಪಡೆಗಳು ಯುದ್ಧಗಳ ಸಮಯದಲ್ಲಿ ದೇಶದ ಗಡಿಗಳನ್ನು ರಕ್ಷಿಸಿದ್ದರೆ, ನೈಸರ್ಗಿಕ ವಿಕೋಪಗಳ ಸಮಯದಲ್ಲಿ ಅವರು ದೇಶವಾಸಿಗಳಿಗೆ ಸಹಾಯ ಮತ್ತು ಪರಿಹಾರವನ್ನು ಒದಗಿಸಿದ್ದಾರೆ.
ದೇಶದ ವೀರ ಸೈನಿಕರು, ದೇಶದ ವೀರ ಪುತ್ರರು, ದೇಶದ ಹೆಮ್ಮೆ, ಏಕತೆ-ಸಮಗ್ರತೆ, ಸಾರ್ವಭೌಮತ್ವ ಕಾಪಾಡುವ ಭರದಲ್ಲಿ ಅದೆμÉ್ಟೂೀ ಸೈನಿಕರು ಪ್ರಾಣ ತ್ಯಾಗ ಮಾಡಿದ್ದಾರೆ. ಅನೇಕ ಸೈನಿಕರು ತಮ್ಮ ಕರ್ತವ್ಯಗಳನ್ನು ನಿರ್ವಹಿಸುವಾಗ ದೈಹಿಕವಾಗಿ ಅಂಗವಿಕಲರಾಗಿದ್ದಾರೆ. ಅವರ ಕುಟುಂಬಗಳ ಕಲ್ಯಾಣ ಮತ್ತು ಪುನರ್ವಸತಿ ಕಲ್ಪಿಸುವುದು ಸರ್ಕಾರ ಮತ್ತು ಸಮಾಜದ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಯುದ್ಧದಲ್ಲಿ ಬಲಿಯಾದವರ ಮತ್ತು ಸರ್ವೋಚ್ಚ ತ್ಯಾಗ ಮಾಡಿದ ಸೈನಿಕರ ಮುಂದಿನ ಬಂಧುಗಳ ಕಲ್ಯಾಣ ಮತ್ತು ಪುನರ್ವಸತಿಗೆ ವಿಶೇಷ ಗಮನ ನೀಡಿವೆ. ಮಾಜಿ ಸೈನಿಕರ ಕಲ್ಯಾಣ ಮತ್ತು ಪುನರ್ವಸತಿಗಾಗಿ ವಿವಿಧ ಯೋಜನೆಗಳನ್ನು ಮಾಜಿ ಸೈನಿಕರ ಕಲ್ಯಾಣ ಇಲಾಖೆ, ರಕ್ಷಣಾ ಸಚಿವಾಲಯ, ಭಾರತ ಸರ್ಕಾರ ಮತ್ತು ರಾಜ್ಯ ಸೈನಿಕ ಮಂಡಳಿ ಮತ್ತು ಜಿಲ್ಲಾ ಸೈನಿಕ ಮಂಡಳಿಯಿಂದ ಜಾರಿಗೊಳಿಸಲಾಗುತ್ತಿದೆ ಎಂದರು.
ಹಿರಿಯ ನಾಗರಿಕರು ಮತ್ತು ದಿವ್ಯಾಂಗರಿಗೆ ಜೀವನ ಬೆಂಬಲ ಸಾಧನಗಳನ್ನು ಒದಗಿಸಲು ಭಾರತ ಸರ್ಕಾರದಿಂದ ರಾಷ್ಟ್ರೀಯ ವಯೋಶ್ರೀ ಯೋಜನೆ ಮತ್ತು ಎಡಿಐಪಿ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ದೈಹಿಕವಾಗಿ ಅಂಗವಿಕಲರಾದ ವೀರ ಸೈನಿಕರು ಈ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಮಾಜಿ ಸೈನಿಕರ ಕಲ್ಯಾಣ ಮತ್ತು ಪುನರ್ವಸತಿ ಕೇವಲ ಸರ್ಕಾರದ ಕಾರ್ಯಕ್ರಮಗಳಿಗೆ ಸೀಮಿತವಾಗಬಾರದು. ಇದಕ್ಕೆ ಎಲ್ಲರ ಸಹಭಾಗಿತ್ವದ ಅಗತ್ಯವಿದೆ. ಪ್ರತಿಯೊಬ್ಬರೂ ಅವರ ಕಲ್ಯಾಣ ಯೋಜನೆಯನ್ನು ಅರ್ಥಮಾಡಿಕೊಂಡು ಸದುಪಯೋಗಪಡಿಸಿಕೊಳ್ಳಬೇಕು. ಭಾರತ ಸರ್ಕಾರವು ಸೈನಿಕರ ಕಲ್ಯಾಣ ಮತ್ತು ಪುನರ್ವಸತಿ ಹಾಗೂ ಸೇನೆಯ ಸಬಲೀಕರಣ ಮತ್ತು ಆಧುನೀಕರಣಕ್ಕೆ ಬದ್ಧವಾಗಿದೆ. ಇಂದು ಸೇನೆಯು ಆಧುನಿಕ ತಂತ್ರಜ್ಞಾನ, ಆಧುನಿಕ ಉಪಕರಣಗಳು ಮತ್ತು ಶಸ್ತ್ರಾಸ್ತ್ರಗಳನ್ನು ಹೊಂದಿದೆ. ನಮ್ಮ ದೇಶದ ಗೌರವಾನ್ವಿತ ಪ್ರಧಾನ ಮಂತ್ರಿಗಳು ಸೇನೆಯ ವೀರ ಸೈನಿಕರ ನೈತಿಕ ಸ್ಥೈರ್ಯವನ್ನು ಹೆಚ್ಚಿಸುವ ಕೆಲಸವನ್ನು ಮಾಡಿದ್ದಾರೆ ಎಂದು ತಿಳಿಸಿದರು.

ಹಬ್ಬದ ಸಮಯದಲ್ಲಿ ಎಲ್ಲರೂ ಕುಟುಂಬ ಸಮೇತ ತಮ್ಮ ಮನೆಗಳಲ್ಲಿ ಆಚರಿಸುತ್ತಾರೆ. ಆದರೆ ಸೇನೆಯ ಧೀರರು ಈ ಸಮಯದಲ್ಲೂ ದೇಶಕ್ಕಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅವರ ಮನೋಸ್ಥೈರ್ಯ ಮತ್ತು ಉತ್ಸಾಹವನ್ನು ಹೆಚ್ಚಿಸಲು ನಮ್ಮ ಪ್ರಧಾನಿಗಳು ಪ್ರತಿ ವರ್ಷ ಸೈನಿಕರ ನಡುವೆ ಹೋಗಿ ಅವರೊಂದಿಗೆ ದೀಪಾವಳಿ ಆಚರಿಸುತ್ತಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಈ ವರ್ಷದ ಧ್ವಜ ದಿನಾಚರಣೆಯ ಧ್ವಜಗಳನ್ನು ಬಿಡುಗಡೆಗೊಳಿಸಿದರು. ನಂತರ ಧ್ವಜ ನಿಧಿ ಸಂಗ್ರಹಿಸಿದ ವಿವಿಧ ಜಿಲ್ಲೆ ಮತ್ತು ಸಂಸ್ಥೆಗಳಿಗೆ ಪೆÇೀತ್ಸಾಹ ಪಾರಿತೋಷಕವನ್ನು ವಿತರಿಸಿದರು.
ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಮಾತನಾಡಿ, ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ ಈ ಶುಭ ಸಂದರ್ಭದಲ್ಲಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದವರಿಗೆ ಗೌರವ ಸಲ್ಲಿಸಲು ನನಗೆ ಸಂತೋಷವಾಗಿದೆ ಎಂದ ಸಚಿವರು, ಸಶಸ್ತ್ರ ಪಡೆಗಳು ತಮ್ಮ ಕರ್ತವ್ಯ ನಿರ್ವಹಿಸುವಲ್ಲಿ ಶಿಸ್ತು, ಸಮರ್ಪಣೆ ಮತ್ತು ಪ್ರಾಮಾಣಿಕತೆಗೆ ಹೆಸರುವಾಸಿಯಾಗಿದ್ದಾರೆ. ಸೈನಿಕರು ತೀವ್ರವಾದ ಹವಾಮಾನ ಹಾಗೂ ಕ್ಲಿಷ್ಟಕರ ಪ್ರದೇಶಗಳಲ್ಲಿ ಸೇವೆ ಸಲ್ಲಿಸುತ್ತಾರೆ. ರಕ್ಷಣಾ ಪಡೆಗಳು ರಾಷ್ಟ್ರೀಯ ಐಕ್ಯತೆ ಕಾಪಾಡುವುದು ಮಾತ್ರವಲ್ಲದೇ ದಂಗೆಯಂತ ಆಂತರೀಕ ಭದ್ರತೆಯನ್ನು ಖಚಿತಪಡಿಸುತ್ತದೆ. ವಿಶೇಷವಾಗಿ ನೈಸರ್ಗಿಕ ವಿಕೋಪ ಸಂದರ್ಭದಲ್ಲಿ ನಾಗರೀಕ ಆಡಳಿತಕ್ಕೆ ಅವರ ಕೊಡುಗೆ ಶ್ಲಾಘನೀಯವಾದದು ಎಂದರು.
ಸೈನಿಕರಿಗೆ ನಾವು ನೀಡುವ ಗೌರವವು, ಅವರು ದೇಶಕ್ಕಾಗಿ ಮಾಡುವ ತ್ಯಾಗಕ್ಕೆ ಸರಿದೂಗಿಸಲು ಸಾಧ್ಯವಿಲ್ಲ. ರಾಷ್ಟ್ರೀಯ ಸಮಗ್ರತೆ ಕಾಪಾಡಲು ತಮ್ಮ ಕರ್ತವ್ಯವನ್ನು ನಿರ್ವಹಿಸಲು ತೊಡಗಿಸಿಕೊಂಡಿರುವ ಸೈನಿಕರು ಹಾಗೂ ಅವರ ಕುಟುಂಬದವರ ನೆರವಿಗೆ ಸರ್ಕಾರವು ಯಾವಾಗಲೂ ಸಿದ್ಧವಿದೆ ಎಂದರು.
ಸರ್ಕಾರವು ಸೇನೆಯದ ನಿವೃತ್ತಿಯಾದ ಮಾಜಿ ಸೈನಿಕರು, ಯುದ್ಧದಲ್ಲಿ ಗಾಯಗೊಂಡವರು, ಹುತಾತ್ಮರ ಅವಂಬಿತರಿಗೆ, ಶೌರ್ಯ ಪ್ರಶಸ್ತಿ ವಿಜೇತರಿಗೆ, ಆರ್ಥಿಕ ನೆರವು ನೀಡಲು ಎಲ್ಲಾ ರೀತಿಯ ಗಮನಹರಿಸಿದೆ. ಮಾಜಿ ಸೈನಿಕರಿಗೆ ಮತ್ತು ಅವರ ಅವಲಂಬಿತರಿಗೆ ಬೆಂಗಳೂರು ಮೆಟ್ರೊದಂತ ಸಂಸ್ಥೆಯಲ್ಲಿ ಹುದ್ದೆಗಳನ್ನು ನೀಡುವುದರ ಜೊತೆಗೆ ಪೊಲೀಸ್ ಇಲಾಖೆ ಮತ್ತು ಅಗ್ನಿಶಾಮಕದಲ್ಲಿ ಮಾಜಿ ಸೈನಿಕರಿಗೆ ಮೀಸಲಾತಿಯನ್ನು ಕಲ್ಪಸಲಾಗಿದೆ ಎಂದರು.
ಮಾಜಿ ಸೈನಿಕರು ಹಾಗೂ ಅವರ ಅವಲಂಬಿತರಿಗೆ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು, ಸೈನಿಕರ ಅವಲಂಬಿತ 502 ಮಕ್ಕಳ ಶಿಕ್ಷಣ ವೇತನಕ್ಕಾಗಿ ಸುಮಾರು 12.66 ಲಕ್ಷ ರೂ.ಗಳನ್ನು ನೀಡಲಾಗಿದೆ. ವಾರ್ಷಿಕ ಪರಿಹಾರ ಅನುದಾನ, ಯುದ್ಧದಲ್ಲಿ ಮಡಿದ ಸೈನಿಕರ ಪತ್ನಿಗೆ ತೆರಿಗೆ ವಿನಾಯಿತಿ, ಭೂಮಿಗೆ ಬದಲಾಗಿ ನಗದು ನೀಡಲಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ದೇಶವನ್ನು ರಕ್ಷಿಸಲು ಗಡಿ ಪ್ರದೇಶದಲ್ಲಿ ಕರ್ತವ್ಯ ನಿರತರಾಗಿದ್ದಾಗ ಬಾಂಬ್ ಸ್ಫೋಟದಿಂದ ತೀವ್ರವಾಗಿ ಗಾಯಗೊಂಡು ಶೇ.60 ರಷ್ಟು ಅವಂಗವಿಕಲತೆಗೊಳಗಾರುವ ಮಾಜಿ ಹವಾಲ್ದಾರ್ ರಮೇಶ ಬಿ.ಸುತಗಟ್ಟಿ ಇವರಿಗೆ ರಾಜ್ಯ ಸರ್ಕಾರದಿಂದ ರೂ. 5 ಲಕ್ಷಗಳ ಅನುದಾನವನ್ನು, ಹುತಾತ್ಮರಾದ ವೀರಸೈನಿಕರಾದ ದಿವಂಗತ ಕಾಶೀರಾಯ ಬಮ್ಮನಹಳ್ಳಿ ಇವರ ಪತ್ನಿ ಶ್ರೀಮತಿ ಸಂಗೀತಾ ಕಾಶೀರಾಯ ಬಮ್ಮನಹÀಳ್ಳಿ ಇವರಿಗೆ ರಾಜ್ಯ ಸರ್ಕಾರದಿಂದ ಒಂದು ಬಾರಿ ನೀಡಲಾಗುವ ಶೌರ್ಯ ಪ್ರಶಸ್ತಿ ಅನುದಾನ 50 ಲಕ್ಷ ರೂ.ಗಳನ್ನು ಹಾಗೂ ಹುತಾತ್ಮರಾದ ನಾಯಕ್ ದಿವಂಗತ ಮುಂಜುನಾಥ ಗೌಡ ಇವರ ಪತ್ನಿ ಶ್ರೀಮತಿ ಕಲ್ಪನಾ ಸಿ.ನಿರ್ವಾಣಿ ಇವರಿಗೆ ರಾಜ್ಯ ಸರ್ಕಾರದಿಂದ ಅನುಗ್ರಹ ಪೂರ್ವಕ ಅನುದಾನ ಮತ್ತು ಉಚಿತ ಜಮೀನು ಹಾಗೂ ನಿವೇಶನ ಬದಲಿಗೆ ನೀಡಲಾಗುವ ನಗದು ಅನುದಾನದ ಒಟ್ಟು ಮೊತ್ತ 30 ಲಕ್ಷ ರೂ.ಗಳನ್ನು ನೀಡಿ, ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮೇಜರ್ ಜನರಲ್ ಪಾಲ್ ದೀಪಕ್ ನಾಯ್ಡು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ನಿರ್ದೇಶಕರಾದ ಬ್ರಿಗೇಡಿಯರ್ ಎಂ ಬಿ ಶಶಿಧರ್ (ನಿವೃತ್ತ) ಸೇರಿದಂತೆ ಮುಂತಾದ ಗಣ್ಯರು ಭಾಗವಹಿಸಿದರು.



