ಜಮ್ಮುವಿನಲ್ಲಿ ವಾರ್ಷಿಕ ಬುದ್ದ ಅಮರನಾಥ ಉದ್ಘಾಟನಾ ಅಧಿವೇಶನದಲ್ಲಿ ಲೆಫ್ಟಿನೆಂಟ್ ಜನರಲ್ ಮನೋಜ್ ಸಿನ್ಹಾ ಭಾಗಿ, ಇಂದು ಚಾಲನೆ

10 ದಿನಗಳ ಕಾಲ ನಡೆಯುವ ವಾರ್ಷಿಕ ಬುದ್ಧ ಅಮರನಾಥ ಯಾತ್ರೆಗೆ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಉದ್ಘಾಟನಾ ಅಧಿವೇಶನದಲ್ಲಿ ಭಾಗಿಯಾಗಿ ಯಾತ್ರಾರ್ಥಿಗಳನ್ನು ಸ್ವಾಗತಿಸಿದರು. ಗಡಿ ಜಿಲ್ಲೆ ಪೂಂಚ್ನಲ್ಲಿರುವ ಬುದ್ಧ ಅಮರನಾಥ ದೇವಸ್ಥಾನಕ್ಕೆ ಲೆಫ್ಟಿನೆಂಟ್ ಗವರ್ನರ್ ಸೋಮವಾರ ಬೆಳಗ್ಗೆ ಜಮ್ಮುವಿನ ಭಗವತಿ ನಗರ ಮೂಲ ಶಿಬಿರದಿಂದ ಚಾಲನೆ ನೀಡಲಿದ್ದಾರೆ.
ಉದ್ಘಾಟನಾ ಅಧಿವೇಶನ ಉದ್ದೇಶಿಸಿ ಮಾತನಾಡಿದ ಲೆಫ್ಟಿನೆಂಟ್ ಗವರ್ನರ್, ಬಾಬಾ ಅಮರನಾಥ ಮತ್ತು ಬುದ್ಧ ಅಮರನಾಥ ಯಾತ್ರಿ ನ್ಯಾಸ, ವಿಶ್ವ ಹಿಂದೂ ಪರಿಷತ್, ಬಜರಂಗದಳ ಮತ್ತು ಯಾತ್ರೆಯ ಸಿದ್ಧತೆಗಳು ಮತ್ತು ನಿರ್ವಹಣೆಯಲ್ಲಿ ಭಾಗಿಯಾದವರಿಗೆ ಶುಭಾಯಶಗಳನ್ನು ತಿಳಿಸಿದರು
ಪೂಂಚ್ನಲ್ಲಿರುವ ಬುದ್ಧ ಅಮರನಾಥ ದೇವಾಲಯಕ್ಕೆ ಪವಿತ್ರ ತೀರ್ಥಯಾತ್ರೆಯು ಹೆಚ್ಚಿನ ಆಧ್ಯಾತ್ಮಿಕ ಮಹತ್ವ ಹೊಂದಿದೆ. ಪ್ರವಾಸೋದ್ಯಮ ಇಲಾಖೆ, ಜಿಲ್ಲಾ ಮತ್ತು ಪೊಲೀಸ್ ಆಡಳಿತ ವಿಭಾಗೀಯ ಆಯುಕ್ತರು ಮತ್ತು ಎಲ್ಲ ಸಹಭಾಗಿ ಇಲಾಖೆಗಳು ಮತ್ತು ಸಂಸ್ಥೆಗಳು ಭಕ್ತರಿಗೆ ಸುರಕ್ಷಿತ, ಸುಗಮ ಯಾತ್ರೆಗೆ ವ್ಯವಸ್ಥೆ ಮಾಡಿವೆ.
ದಕ್ಷಿಣ ಕಾಶ್ಮೀರದ ಹಿಮಾಲಯದ ಪಹಲ್ಗಾಂನಿಂದ ನಡೆಯುತ್ತಿರುವ ಅಮರನಾಥ ಯಾತ್ರೆಯಲ್ಲಿ ಇದುವರೆಗೆ 3.77 ಲಕ್ಷಕ್ಕೂ ಹೆಚ್ಚು ಭಕ್ತರು ಪವಿತ್ರ ಗುಹೆಗೆ ಭೇಟಿ ನೀಡಿ ಹಿಮಲಿಂಗದ ದರ್ಶನ ಪಡೆದಿದ್ದಾರೆ. ಈ ಯಾತ್ರೆಯ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವ ಬಗ್ಗೆ ತಮಗೆ ಸಂತಸ ಇದೆ ಎಂದು ಎಲ್ಜಿ ತಿಳಿಸಿದರು.
ನಮ್ಮ ಸಂಸ್ಕೃತಿ ಯಾವಾಗಲೂ ಜಾಗತಿಕ ಕಲ್ಯಾಣ ಮತ್ತು ಶಾಂತಿಗೆ ಒತ್ತು ನೀಡಿದೆ. ನಮ್ಮ ಶ್ರೀಮಂತ ಪ್ರಾಚೀನ ಸಂಪ್ರದಾಯಗಳ ಅದ್ಭುತ ಪರಂಪರೆಯನ್ನು ಜಮ್ಮು ಮತ್ತು ಕಾಶ್ಮೀರದ ಹೊಸ ಪೀಳಿಗೆಗೆ ಹಸ್ತಾಂತರಿಸುವ ಸಮಯ ಈಗ ಬಂದಿದೆ ಎಂದರು.
ಇದೇ ವೇಳೆ, ಪಹಲ್ಗಾಮ್ ಯಾತ್ರೆಯಲ್ಲಿ ಮೃತರಾದ 26 ನಾಗರಿಕರಿಗೆ ಲೆಫ್ಟಿನೆಂಟ್ ಗವರ್ನರ್ ಗೌರವ ಸಲ್ಲಿಸಿದರು. ಆಪರೇಷನ್ ಸಿಂಧೂರ್ ಇನ್ನೂ ಮುಂದುವರೆದಿದ್ದು, ನಮ್ಮ ಪೊಲೀಸರು, ಭದ್ರತಾ ಪಡೆಗಳು ಮತ್ತು ಆಡಳಿತವು ಶತ್ರುಗಳ ಪ್ರಯತ್ನವನ್ನು ವಿಫಲಗೊಳಿಸಲು ಕೆಲಸ ಮಾಡುತ್ತಿವೆ ಎಂದರು.
ಯಾತ್ರೆಗೆ ಮುನ್ನ ಭಾನುವಾರದಂದು ಉಪಮುಖ್ಯಮಂತ್ರಿ ಸುರಿಂದರ್ ಚೌಧರಿ ಭಾನುವಾರ ರಾಜೌರಿ ಜಿಲ್ಲೆಯ ತಮ್ಮ ನೌಶೇರಾ ಕ್ಷೇತ್ರದಲ್ಲಿರುವ ರಾಜಲ್ ಡಾಕ್ ಬ್ಯಾಂಗ್ಲೋಗೆ ಭೇಟಿ ನೀಡಿ, ಬುದ್ಧ ಅಮರನಾಥ ಯಾತ್ರೆಯ ಯಾತ್ರಾರ್ಥಿಗಳಿಗೆ ಒದಗಿಸಲಾಗುತ್ತಿರುವ ಸೌಲಭ್ಯಗಳನ್ನು ಪರಿಶೀಲಿಸಿದರು. ಈ ವೇಳೆ, ಯಾತ್ರಿಕರೊಂದಿಗೆ ಅವರು ಸಂವಾದ ನಡೆಸಿದರು. ವೈದ್ಯಕೀಯ ನೆರವು, ಕುಡಿಯುವ ನೀರು ಮತ್ತು ನೈರ್ಮಲ್ಯ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಅವರು ಪರಿಶೀಲಿಸಿದರು.


