ರಾಧಮ್ಮ ಜನಸ್ಪಂದನ ಟ್ರಸ್ಟ್ ವತಿಯಿಂದ ಐದನೇ ವರ್ಷದ ಪ್ರತಿಭಾ ಪುರಸ್ಕಾರ.

ಆಲೂರು:ರಾಧಮ್ಮ ಜನಸ್ಪಂದನ ಅವರ ವತಿಯಿಂದ ಆಲೂರಿನ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿಂದು ಜರುಗಿದ ಆಲೂರು ತಾಲ್ಲೂಕಿನ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳಿಗೆ 5ನೇ ವರ್ಷದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಪಾಲ್ಗೊಂಡು, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು ಎಂದು ಸಂಸ್ಥೆಯ ಮುಖ್ಯಸ್ಥರಾದ ಹೇಮಂತ್ ತಿಳಿಸಿದರು.
ಕಾರ್ಯಕ್ರಮವನ್ನು ವಿಧಾನ ಸಭಾ ಉಪಸಭಾಪತಿಗಳಾದ ಪ್ರಾಣೇಶ್ ಹಾಗೂ ಮಾಜಿ ಶಾಸಕರಾದ ಏ.ಟಿ ರಾಮಸ್ವಾಮಿ ಮತ್ತು ಪುಟ್ಟೆಗೌಡ ಅವರ ಉಪಸ್ಥಿತಿಯಲ್ಲಿ ಜ್ಯೋತಿಬೆಳಗುವುದರ ಮೂಲಕ ಉದ್ಘಾಟಿಸಿದರು.ನಂತರ ಮಾತನಾಡಿದ ಉಪಸಭಾಪತಿಗಳು ಹೇಮಂತ್ ಕುಮಾರ್ ಅವರನ್ನು ನೋಡಿದರೆ ತುಂಬಾ ಸಂತೋಷವಾಗುತ್ತದೆ,ಎಲ್ಲಾ ಸಮುದಾಯದ ಮಕ್ಕಳ ಪ್ರತಿಭೆ ಆಧಾರದ ಮೇಲೆ ಗುರುತಿಸಿ ಸಮಾನವಾಗಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮೇಲು ಮತ್ತು ಕೀಳು ಎಂಬ ಭಾವನೆ ಬರದೆ ಸಮಾಜವು ಒಗ್ಗಟ್ಟಾಗಿ ಬಾಳಬೇಕೆಂದು ಆಗ ಮಾತ್ರ ಮಹಾನಿಯರ ಕನಸು ನನಸಾಗುತ್ತದೆ ಎಂದರು.
ಇದೇ ಸಂಧರ್ಭದಲ್ಲಿ ಏ.ಟಿ ರಾಮಸ್ವಾಮಿ ಅವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಹೇಮಂತ್ ಅವರ ಕಾರ್ಯಸಾಧನೆಯನ್ನ ತಾಯಿಯ ಹೆಸರಿನಲ್ಲಿ ಪ್ರಾರಂಭಿಸಿರುವುದು ಶ್ಲಾಘನೀಯ ಇವರ ಕೆಲಸಗಳು ಹಳ್ಳಿಯಿಂದ ದಿಲ್ಲಿಯವರೆಗೂ ಉತ್ತಮ ಕೆಲಸ ಮಾಡಿದೆ ಇನ್ನೂ ಮುಂದೆ ಹೆಚ್ಚಿನ ಸಮಾಜಮುಖಿ ಕೆಲಸ ಮಾಡಲಿ ಎಂದು ಆಶೀರ್ವಾಧಿಸಿದರು.
ನಂತರ ಪ್ರಾಸ್ತಾವಿಕವಾಗಿ ಮಾತನಾಡಿ ನಮ್ಮ ಸಂಸ್ಥೆಯಿಂದ ಈಗಿನ ಸಮಾಜದಲ್ಲಿ ಮಕ್ಕಳಿಗೆ ಪ್ರತಿಭೆಯ ಮುಖಾಂತರ ಗೌರವಿಸಬೇಕೆ ಹೊರತು ಸಮುದಾಯದ ಮುಖಾಂತರ ಮಹನೀಯರ ಜಯಂತಿ ಸಂದರ್ಭದಲ್ಲಿ ಸಮುದಾಯದ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸುತ್ತಿದ್ದೇವೆ,
ನಿರಂತರವಾಗಿ ಐದು ವರ್ಷಗಳಿಂದ ತಾಲೂಕಿನ ಎಲ್ಲಾ ಶಾಲೆಗಳ ವಿದ್ಯಾರ್ಥಿಗಳನ್ನು ಪ್ರಥಮ ಮತ್ತು ದ್ವಿತೀಯ ಸ್ಥಾನ ಆಧಾರದ ಮೇಲೆ ಆಯ್ಕೆ ಮಾಡಿ ಪ್ರತಿಭಾ ಪುರಸ್ಕಾರ ಮಾಡುತ್ತಿದ್ದೇವೆ ಇಂತಹ ಕಾರ್ಯಕ್ರಮಕ್ಕೆ ಸ್ಥಳೀಯ ಮುಖಂಡರು ಸ್ಥಳೀಯ ಅಧಿಕಾರಿಗಳು ಸ್ಥಳೀಯ ಶಾಸಕರು ಎಲ್ಲರೂ ಸಹಕಾರ ಕೊಡುತ್ತಿದ್ದು, ಮಾಧ್ಯಮದರ ಸಹಕಾರ ಕೂಡ ಇದ್ದು, ನಿಮ್ಮೆಲ್ಲರ ಸಹಕಾರಕ್ಕೆ ಧನ್ಯವಾದಗಳು ತಿಳಿಸದರು.
ವಿಧಾನ ಪರಿಷತ್ ಉಪ ಸಭಾಪತಿಗಳಾದ ಪ್ರಾಣೇಶ್.ಆಲೂರು ಸಕಲೇಶಪುರ ಕಟ್ಟಾಯ ಶಾಸಕರಾದ ಸಿಮೆಂಟ್ ಮಂಜು.ಬೇಲೂರು ಶಾಸಕರಾದ ಹೆಚ್.ಕೆ ಸುರೇಶ್.ಶಾಸಕರಾದ ಏ.ಟಿ ರಾಮಸ್ವಾಮಿ.ಶ್ರವಣಬೆಳಗೊಳ ಕ್ಷೇತ್ರದ ಮಾಜಿ ಶಾಸಕರರಾದ ಪುಟ್ಟೆಗೌಡ.ಒಕ್ಕಲಿಗ ಸಮುದಾಯದ ಜಿಲ್ಲಾಧ್ಯಕ್ಷರಾದ ಬಾಗೂರು ಮಂಜೇಗೌಡ.ನಿವೃತ್ತ ಜಿಪಂ.ಸಿ.ಇ.ಓ ಪರಮೇಶ್ ಭರತೂರು.ಕಾಂಗ್ರೇಸ್ ಮುಖಂಡರಾದ ಹೆಮ್ಮಿಗೆ ಮೋಹನ್.ನಾರ್ವೆ ವಿಜಯ್.ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣೇಗೌಡ.ಕಿರಣ್ ವಿಧ್ಯಾಸಂಸ್ಥೆ ಮುಖ್ಯಸ್ಥರಾದ ಆನಂದ್.ಡಾಕ್ಟರ್ ಸಾವಿತ್ರಿ.ಅಜಿತ್ ಚಿಕ್ಕಣಗಾಲು.ಬಿಜೆಪಿ ಮುಖಂಡರಾದ ಲೊಕೇಶ್ ಕಣಗಾಲ್.ಕ.ಕಾ.ಪ.ಸಂ(ನೋ) ಅಧ್ಯಕ್ಷರಾದ ಧರಣೇಂದ್ರ.ಹಿರಿಯ ಪತ್ರಕರ್ತರಾದ ಹರೀಶ್.
ವರದಿ:ಧರಣೇಂದ್ರ ಹೆಚ್.ಎಂ ಆಲೂರು



