ಮಂಜುನಾಥ್ ವೆಲ್ಫೇರ್ ಫೌಂಡೇಶನ್ ನೂತನ ಕಚೇರಿ ಉದ್ಘಾಟನೆ
ದೇವನಹಳ್ಳಿ: ಪಟ್ಟಣದ ಬೈಪಾಸ್ ರಸ್ತೆಯಲ್ಲಿರುವ ಮಂಜುನಾಥ್ ವೆಲ್ಫೇರ್ ಫೌಂಡೇಶನ್ ನೂತನ ಕಚೇರಿಯನ್ನು ಜನವರಿ 23 ಸೋಮವಾರದಂದು ಬೆಳಿಗ್ಗೆ 10.45ಕ್ಕೆ ಕಚೇರಿ ಉದ್ಘಾಟನೆ ಮತ್ತು ದೇವನಹಳ್ಳಿ ತಾಲೂಕಿನ ಜನತೆಯ ತುರ್ತು ಸೇವೆಗೆ ಎರಡು ಆಂಬುಲೆನ್ಸ್ ಸೇವೆಯನ್ನು ಬಿಡುಗಡೆ ಮಾಡಲಿದ್ದೇವೆ ಎಂದು ವೆಲ್ಫೇರ್ ಫೌಂಡೇಶನ್ ಸಂಸ್ಥಾಪಕ ಮತ್ತು ಸಮಾಜ ಸೇವಕರು ಮಂಜುನಾಥ್ ಹೇಳಿದರು.
ದೇವನಹಳ್ಳಿ ಪಟ್ಟಣದ ವೆಲ್ಫೇರ್ ಫೌಂಡೇಶನ್ ಕಚೇರಿಯಲ್ಲಿ “ಕಚೇರಿ ಉದ್ಘಾಟನೆ ಮತ್ತು ತಾಲೂಕಿನ ಜನತೆಯ ತುರ್ತು ಸೇವೆಗೆ ಎರಡು ಆಂಬುಲೆನ್ಸ್ ಸೇವೆಯನ್ನು ಬಿಡುಗಡೆ” ಮಾಡುವುದರ ಕುರಿತು
ಸುದ್ದಿಗೋಷ್ಠಿ ನಡೆಸಿದರು.
ನಮ್ಮ ತಾಲೂಕಿನಲ್ಲಿನ ಜನತೆಯ ತುರ್ತು ಸೇವೆಗೆ 24*7 ಆಂಬುಲೆನ್ಸ್ ಒದಗಿಸಲಾಗುತ್ತಿದೆ ಅದರ ಉದ್ಘಾಟನೆಯು ಸೋಮವಾರ ನಡೆಯಲಿದ್ದು, ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಸ್ಪಟಿಕಪುರಿ ಮಹಾಸಂಸ್ಥಾನದ ಶ್ರೀ ಶ್ರೀ ನಂಜೇದೂತ ಸ್ವಾಮೀಜಿಗಳು ಆಗಮಿಸಲಿದ್ದಾರೆ, ದೇವನಹಳ್ಳಿ ತಾಲೂಕಿನ ಎಲ್ಲಾ ಜನತೆಯನ್ನು ಹಾಗೂ ರಾಜ್ಯದ ಎಲ್ಲಾ ಮುಖಂಡರನ್ನು ಪಕ್ಷತೀತವಾಗಿ ಅವ್ಹಾನಿಸಲಾಗಿದೆ ಪ್ರತಿಯೊಬ್ಬರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.
ಯಾವುದೇ ರೀತಿಯ ಮತಗಳನ್ನು ಸೆಳೆಯುವ ನಿಟ್ಟಿನಲ್ಲಿ ಬಳ್ಳಾರಿಯಿಂದ ಬಂದು ಸಡನ್ನಾಗಿ ದೇವನಳ್ಳಿಯ ಜನರ ಸೇವೆಯನ್ನು ಮಾಡುತ್ತಿಲ್ಲ ನಿರಂತರವಾಗಿ 16 ವರ್ಷಗಳಿಂದ ದೇವನಹಳ್ಳಿಯಲ್ಲಿದ್ದೇನೆ ಸೇವಾ ಮನೋಭಾವದಿಂದ ಮಾಡುತ್ತಿರುವುದು ಮುಂದೆಯೂ ಸಹ ರಾಜಕೀಯವಾಗಿ ಬೆಳೆಯದೆ ಇದ್ದರೂ ತಾಲೂಕಿನ ಜನತೆಯ ಸೇವೆಯನ್ನು ಮುಂದುವರಿಸುತ್ತೇನೆ ಎಂದರಲ್ಲದೆ ತಾಲೂಕಿನ ಜನತೆಗೆ ಅಧಿಕೃತವಾಗಿ ರಾಜಕೀಯ ವಿಷಯಗಳನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದು ಹೇಳಿದರು.
ನಮ್ಮ ಏಳಿಗೆಯನ್ನು ಮತ್ತು ಸಮಾಜ ಸೇವೆಗಳನ್ನು ಸಹಿಸದ ವ್ಯಕ್ತಿಗಳು ಕಚೇರಿಯ ಮುಂಭಾಗದಲ್ಲಿ ವಾಮಾಚಾರಕ್ಕೆ ಬಳಸುವಂತಹ ಮೊಟ್ಟೆ ,ತೆಂಗಿನಕಾಯಿ, ಹೂವು ,ಅರಶಿನ ,ಕುಂಕುಮ ಇಟ್ಟು ಹೋಗಿದ್ದಾರೆ ಈ ವೈಜ್ಞಾನಿಕ ಯುಗದಲ್ಲಿ ಅಂತ ವಿಷಯಗಳಲ್ಲಿ ನಮಗೆ ನಂಬಿಕೆ ಇಲ್ಲದಿದ್ದರೂ ಇಂತಹ ಘಟನೆಗಳ ನಡೆದಿರುವುದು ವಿಷಾದನೀಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ನಂಜೇಗೌಡರು , ಮುಖಂಡರುಗಳಾದ ಸುನೀಲ್, ದೇವನಂದಿನಿ,ಚಂದ್ರೇಗೌಡ ,ಭಾಗ್ಯಮ್ಮ,ರಾಜಣ್ಣ,ಶಿವಣ್ಣಸೇರಿದಂತೆ ಮಂಜುನಾಥ್ ಫೌಂಡೇಶನ್ ಇತರ ಸದಸ್ಯರು ಉಪಸ್ಥಿತರಿದ್ದರು.



