ಇತ್ತೀಚಿನ ಸುದ್ದಿ

ವರುಣಾ ವಿಧಾನ ಸಭಾ ಕ್ಷೇತ್ರದಲ್ಲಿ ವಿಜಯ ಸಂಕಲ್ಪ ಯಾತ್ರೆ

ತಿ.ನರಸೀಪುರ. ಮಾ.05:-ವರುಣಾ ವಿಧಾನ ಸಭಾ ಕ್ಷೇತ್ರವ್ಯಾಪ್ತಿಯಲ್ಲಿ ಮಾಜಿ.ಸಚಿವ ಕೆ.ಎಸ್.ಈಶ್ವರಪ್ಪ, ಸಂಸದ ರಾಘವೇಂದ್ರ, ಮುಜರಾಯಿ ಸಚಿವ ಶ್ರೀನುವಾಸ್ ಪೂಜಾರ್ ನೇತೃತ್ವದಲ್ಲಿ ವಿಜೃಂಭಿಸಿದ ವಿಜಯ ಸಂಕಲ್ಪಯಾತ್ರೆ, ಯಾತ್ರೆಯಲ್ಲಿ ಭಾಜಪ ನಾಯಕರಿಗೆ ಸಾತ್ ನೀಡಿದ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸದಾನಂದ, ತೋಟದಪ್ಪ ಬಸವರಾಜು,ಕಾಪು ಸಿದ್ದಲಿಂಗಸ್ವಾಮಿ, ದೇವನೂರು ಪ್ರತಾಪ್ .

ವರುಣಾ ವಿಧಾನ ಸಭಾ ಕ್ಷೇತ್ರದ ಮೂಡಹಳ್ಳಿಯಲ್ಲಿ ವಿಜಯ ಸಂಕಲ್ಪ ಯಾತ್ರೆಯನ್ನು ಸುಮಂಗಲಿಯರ ಕುಂಭ ಕಳಸ,ವಾದ್ಯ ಮೇಳ ಹಾಗೂ ಕಲಾ ತಂಡಗಳ ಜೊತೆಯಲ್ಲಿ ಸ್ಥಳೀಯ ಮುಖಂಡರು ಅದ್ದೂರಿಯಾಗಿ ಸ್ವಾಗತಿಸಿಕೊಂಡರು. ವಿಜಯ ಸಂಕಲ್ಪ ಯಾತ್ರೆ ಸಾವಿರಾರು ಸಂಖ್ಯೆಯ ಬೈಕ್ ರಾಲಿಯೊಂದಿಗೆ ರೋಡ್ ಶೋ ನಡೆಯಿತು ರೋಡ್ ಶೋ ಕಾರ್ಯಕ್ರಮದಲ್ಲಿ ಜನರು ಕಿಕ್ಕಿರಿದು ಸೇರಿತು ಎಲ್ಲೆಲ್ಲೂ ನರೇಂದ್ರ ಮೋದಿ ಕೂಗು ಗಗನ ಮುಟ್ಟುವಂತಿತ್ತು.ಜನ ಸಾಗರದೊಂದಿದೆ ಮೂಡಹಳ್ಳಿಯಿಂದ ಸಾಗಿದ ವಿಜಯ ಸಂಕಲ್ಪ ಯಾತ್ರೆ ಹದಿನಾರು ಗ್ರಾಮದಲ್ಲಿ ಅಂತ್ಯಗೊಂಡಿತು.

ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಮಾಜಿ ಸಚಿವ ಈಶ್ವರಪ್ಪ ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ರವರಾಗಲಿ ಅಥವಾ ಅವರ ಮಗ ಯತೀಂದ್ರ ಆಗಲಿ ಇಬ್ಬರನ್ನು ಈ ಬಾರಿ ಸೋಲಿಸಿ ಮನೆಗೆ ಕಳುಹಿಸಿ ಎಂದು ಕರೆ ಕೊಟ್ಟರು.

ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯನಿಗೆ ಸೋಲಿನ ಸೋಲಿನ ಭೀತಿ ಎದುರಾಗಿದ್ದು ಕ್ಷೇತ್ರದ ಹುಡುಕಾಟದಲ್ಲಿ ತೊಡಗಿದ್ದಾರೆ. ಕಳೆದ ಬಾರಿ ಎರಡು ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿ ಚಾಮುಂಡೇಶ್ವರಿಯಲ್ಲಿ ಸೋತು ಬಾದಾಮಿ ಯಲ್ಲಿ ಅಲ್ಪ ಮತದಿಂದ ಗೆದ್ದರು ಈ ಬಾರಿ ಬಾದಾಮಿಯಲ್ಲಿ ನಿಂತರೆ ಅತಿ ಹೆಚ್ಚು ಅಂತರದಿಂದ ಸೋಲುತ್ತಾರೆ ಈ ಭಯದಿಂದಲೇ ಕೋಲಾರದತ್ತ ಮುಖ ಮಾಡಿದ್ದಾರೆ ಅಲ್ಲೂ ಸಹ ಅವರಿಗೆ ಸೋಲು ಖಚಿತ ಎಂದು ಭವಿಷ್ಯ ನುಡಿದರು.

ಮುಖ್ಯಮಂತ್ರಿಯಾಗಿ ಉತ್ತಮ ಆಡಳಿತ ನಡೆಸಿ ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದೇನೆ ಎಂದು ಹೇಳುವ ಸಿದ್ಧರಾಮಯ್ಯನವರು ಬೇರೆ ಬೇರೆ ಕಡೆ ಕ್ಷೇತ್ರ ಹುಡುಕುತಿದ್ದಾರೆ ಇದನ್ನ ನೋಡಿದರೆ ಇವರ ಜನಪರ ಆಡಳಿತ ಎಷ್ಟರ ಮಟ್ಟಿಗೆ ಜನರಿಗೆ ತಲುಪಿದೆ ಎಂದು ತಿಳಿಯುತ್ತದೆ. ಸಿದ್ದರಾಮಯ್ಯ ಈ ಚುನಾವಣೆಯಲ್ಲಿ ಎಲ್ಲೆ ನಿಂತರು ಸೋಲುವುದರಲ್ಲಿ ಅನುಮಾನ ವಿಲ್ಲ ಬಿಜೆಪಿಯವರು ಸೋಲಿಸುವುದಕಿಂತ್ತ ಕಾಂಗ್ರೆಸ್ ನವರೆ ಸೋಲಿಸುತ್ತಾರೆ ವರುಣಾ ಕ್ಷೇತ್ರದಲ್ಲೂ ಅಷ್ಟೇ ಅಪ್ಪ ಆದರೂ ಸರಿ ಮಗ‌ ಆದರೂ ಸರಿ ಸೋಲಿಸಬೇಕು ಎಂದು ಕರೆ ನೀಡಿದರು.

ಸಂಸದ ರಾಘವೇಂದ್ರ ಮಾತನಾಡಿ
ಈ ಬಾರಿ ವರಣಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲುವುದರಲ್ಲಿ ಸಂಶಯವಿಲ್ಲ. ಗೆಲುವಿಗೆ ಇಲ್ಲಿ ಸೇರಿರುವ ಕಾರ್ಯಕರ್ತರೇ ಸಾಕ್ಷಿಯಾಗಿದೆ ಎಂದರು.

ದೇಶದ ಕೀರ್ತಿಯನ್ನು ವಿಶ್ವದಲ್ಲಿ ಎತ್ತಿಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ರವರ ಜನಪರ ಆಡಳಿತವನ್ನು ವಿಶ್ವದ ಹಲವು ರಾಷ್ಟ್ರಗಳು ನಮ್ಮ ದೇಶದ ಕಡೆ ತಿರುಗಿ ನೋಡುವಂತೆ ಮಾಡಿದೆ ಈ ಚುನಾವಣೆ ಯನ್ನು ಸಾಧನೆ ಮೇಲೆ ಎದುರಿಸುತ್ತಿವೆ ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ಆಡಳಿತ ವ್ಯವಸ್ಥಿತವಾಗಿ ನಡೆಯುತ್ತಿದೆ ಕೇಂದ್ರ ಮತ್ತು ರಾಜ್ಯದ ಅಭಿವೃದ್ಧಿ. ಕೆಲಸ ಕಾರ್ಯವನ್ನು ಜನರ ಮುಂದಿಡುತ್ತಿದ್ದೇವೆ. ಕಾಂಗ್ರೆಸ್‌, ಜೆಡಿಎಸ್‌ ಕೇವಲ ಪ್ರಚಾರಕ್ಕಾಗಿ ಯಾತ್ರೆ ನಡೆಸುತ್ತಿದ್ದಾರೆ ಅಷ್ಟೆ. ಆದರೆ ನಾವು ನಮ್ಮ ಕಾರ್ಯಕ್ರಮ ವನ್ನು ಜನರ ಮುಂದಿಡುತಿ ದ್ದೇವೆ ಎಂದರು

ಈ ಸಂದರ್ಭದಲ್ಲಿ ಮುಜರಾಯಿ ಇಲಾಖೆ ಸಚಿವ ಶ್ರೀನಿವಾಸ್ ಪೂಜಾರಿ. ಪ್ರವಾಸೋದ್ಯಮ ನಿಗಮದ ಸಿದ್ದಲಿಂಗ ಸ್ವಾಮಿ. ಕಾಂಪೋಸ್ಟ್ ನಿಗಮ ಮಂಡ್ಯ ಅಧ್ಯಕ್ಷ ಮಹದೇವಯ್ಯ, ಜಿಲ್ಲಾ ಅಧ್ಯಕ್ಷ ಮಂಗಳ ಸೋಮಶೇಖರ್, ಜಿಲ್ಲಾ ಪಂಚಾಯತಿ ಮಾಜಿ ಉಪಾಧ್ಯಕ್ಷ ಸದಾನಂದ, ಹಿರಿಯ ಮುಖಂಡ ತೋಟದಪ್ಪ ಬಸವರಾಜು, ದೇವನೂರು ಪ್ರತಾಪ್, ಶರತ್ ಪುಟ್ಟಬುದ್ದಿ,ಹೇಮಂತ್ ಕುಮಾರ್ , ಚಿಕ್ಕಮಾದಪ್ಪ, ಶಿವಣ್ಣ, ಮಹದೇವಯ್ಯ, ಶಿವಯ್ಯ, ಬಿ ವೀರಭದ್ರಪ್ಪ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಸಂಜಯ್ ಶರ್ಮ, ವರುಣ ಯುವ ಮೋರ್ಚಾ ಅಧ್ಯಕ್ಷ ಮೋಹನ್,ರಂಗು ನಾಯಕ್,ವೆಂಕಟರಮಣ ಶೆಟ್ಟಿ ಇನ್ನು ಮುಂತಾದವರು ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button