ಇತ್ತೀಚಿನ ಸುದ್ದಿ

ಬಸಪ್ಪ ದೇವರ ಮೊರೆ ಹೋದ IAS ಅಧಿಕಾರಿ

ಮಂಡ್ಯ: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಬಸಪ್ಪನ ಮೊರೆ ಹೋಗಿದ್ದಾರೆ. ಮಂಡ್ಯದ ಕಾಲಭೈರವೇಶ್ವರಿನಿಗೆ ಪೂಜೆ ಸಲ್ಲಿಸಿ ನಂತರ ಪಾದ ಕೇಳುವ ವಾಡಿಕೆ ಇದೆ.

ಬಸಪ್ಪ ಪಾದ ನೀಡಿದರೆ ಇಷ್ಟಾರ್ಥ ನೆರವೇರಲಿದೆ ಅನ್ನೋದು ಭಕ್ತರ ನಂಬಿಕೆ. ರೋಹಿಣಿ ಸಿಂಧೂರಿ ಅವರು ಮದ್ದೂರು ತಾಲೂಕಿನ ಚಿಕ್ಕರಸಿನಕೆರೆ ಗ್ರಾಮದ ಕಾಲಭೈರವೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ್ದು, ಬಸಪ್ಪನ ಆಶೀರ್ವಾದ ಪಡೆದರು.

ಸಿಂಧೂರಿ ದೇವರಿಗೆ ಪೂಜೆ ಸಲ್ಲಿಸಿ ಪಾದ ಕೇಳಲು ಬಸಪ್ಪನ ಮುಂದೆ ಕುಳಿತು ಬೇಡಿಕೊಂಡರು. ಮನಸ್ಸಿನಲ್ಲಿ ಏನಾದರೂ ಬೇಡಿಕೊಂಡರಷ್ಟೇ ಬಸಪ್ಪ ಪಾದ ನೀಡುತ್ತಾನೆ ಅನ್ನೋದು ನಂಬಿಕೆ. ಮೊದಲು ಮನಸ್ಸಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಸುಮಾರು 10 ನಿಮಿಷ ಬಸಪ್ಪನ ಎದುರು ಕುಳಿತರೂ ಬಸಪ್ಪ ಆಶೀರ್ವಾದ ನೀಡಿರಲಿಲ್ಲವಂತೆ. ಆ ಬಳಿಕ ರೋಹಿಣಿ ಮನಸ್ಸಿನಲ್ಲಿ ಪ್ರಾರ್ಥನೆ ಸಲ್ಲಿಸಿ ಕುಳಿತುಕೊಂಡಿದ್ದು ಬಸಪ್ಪ ಆಶೀರ್ವಾದ ನೀಡಿತಂತೆ. ಬಸಪ್ಪನ‌ ಆಶೀರ್ವಾದ ಪಡೆದ ನಂತರ ದೇವಾಲಯಕ್ಕೆ ಬಂದು ತಮ್ಮ‌ ಕೈಲಾದ‌ ಸೇವೆ ಮಾಡುವುದಾಗಿ ಸಿಂಧೂರಿ ಹೇಳಿದ್ದಾರೆ ಎಂದು ತಿಳಿದುಬಂದಿದೆ.

Related Articles

Leave a Reply

Your email address will not be published. Required fields are marked *

Back to top button