ಶಾಸಕ ಎಂ.ಅಶ್ವಿನ್ ಕುಮಾರ್ ರವರು 2023 ಕ್ಕೆ ಮತ್ತೊಮ್ಮೆ
ತಿ.ನರಸೀಪುರ:- ಸರಳ ಸಜ್ಜನ ರಾಜಕಾರಣಿ ಹಾಗೂ ಕ್ಷೇತ್ರದ ಮತದಾರರ ಮನದಾಳದಲ್ಲಿ ಹೆಸರು ಮಾಡಿರುವ ಶಾಸಕ ಎಂ.ಅಶ್ವಿನ್ ಕುಮಾರ್ ರವರು 2023 ಕ್ಕೆ ಮತ್ತೊಮ್ಮೆ ತಿ.ನರಸೀಪುರ ಕ್ಷೇತ್ರಕದ ಶಾಸಕರಾಗಿ ಆಯ್ಕೆಯಾಗಲಿ ಎಂಬ ಉದ್ದೇಶದಿಂದ ನಮ್ಮ ಸೇವಾಶ್ರಯ ಫೌಂಡೇಶನ್ ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ಸೇವಾಶ್ರಯ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಆರ್.ಮಣಿ ಕಂಠ್ ರಾಜ್ ಗೌಡ ತಿಳಿಸಿದರು.
ಪಟ್ಟಣದ ಖಾಸಗಿ ನೃತ್ಯ ಶಾಲೆಯಲ್ಲಿ ಪತ್ರಿಕಾಗೋಷ್ಠಿ ನೆಡಸಿ ಮಾತನಾಡಿದ ಆರ್.ಮಣಿಕಂಠ್ ರಾಜ್ ಗೌಡ ರಾಜ್ಯದ 224 ವಿಧಾನ ಸಭಾ ಕ್ಷೇತ್ರಗಳ ಶಾಸಕರ ಪೈಕಿ ತಿ.ನರಸೀಪುರ ಕ್ಷೇತ್ರದ ಶಾಸಕ ಎಂ.ಅಶ್ವಿನ್ ಕುಮಾರ್ ವಿಭಿನ್ನವಾಗಿದ್ದಾರೆ ಅಲ್ಲದೆ ವಿನಯ ಮತ್ತು ಸರಳತೆ ಅವರ ಜೀವನದ ಜೊತೆ ಜೊತೆಯಲ್ಲಿ ಬಂದಿದೆ ಕ್ಷೇತ್ರಾದ್ಯಂತ ಜನರು ಅಶ್ವಿನ್ ಕುಮಾರ್ ನಡತೆ ಬಗ್ಗೆ ಪ್ರೀತಿ ಗೌರವ ಇಟ್ಟುಕೊಂಡಿದ್ದಾರೆ ಹಾಗಾಗಿ ಕ್ಷೇತ್ರದಲ್ಲಿ ಜನರ ಮಧ್ಯ ಇದ್ದು ಕೆಲಸ ಮಾಡುವ ವ್ಯಕ್ತಿ ಈ ಕ್ಷೇತ್ರಕ್ಕೆ ಅವಶ್ಯಕತೆ ಇದೆ ಎಂದು ನಿರ್ಧರಿಸಿ ಅವರ ಗೆಲುವಿಗೆ ನಮ್ಮ ಸಂಸ್ಥೆ ಬೆಂಬಲ ನೀಡಲಿದೆ ಎಂದರು.

ನಮ್ಮ ಸೇವಾಶ್ರಯ ಫೌಂಡೇಶನ್ ಕೋವಿಡ್ ಸಂದರ್ಭದಲ್ಲಿ ಸಾರ್ವಜನಿಕರು, ನಿರ್ಗತಿಕರ ಉಳುವಿಗಾಗಿ ಕೆಲಸ ಮಾಡಲು ಶುರುಮಾಡಿದಾಗ ಶಾಸಕರು ನಮ್ಮ ಸಂಸ್ಥೆಗೆ ಹೆಗಲು ಕೊಟ್ಟಿದ್ದಾರೆ,ಅಲ್ಲದೆ ಕ್ಷೇತ್ರದಲ್ಲಿ ಸಾವು ನೋವು, ಹಬ್ಬ ಹರಿದಿನಗಳಿಗೆ ಮನೆ ಮಗನಂತೆ ಭಾಗವಹಿಸುತ್ತಾರೆ ಇವೆಲ್ಲ ಕಾರಣದಿಂದ ಜೆಡಿಎಸ್ ಅಭ್ಯರ್ಥಿ ಅಶ್ವಿನ್ ಕುಮಾರ್ ಬೆಂಬಲಕ್ಕೆ ನಿಲ್ಲುತಿದ್ದೇವೆ ಎಂದರು.
ಕ್ಷೇತ್ರದಲ್ಲಿ ಕೋವಿಡ್ ಮತ್ತು ನೆರೆ ಆವಾಳಿಯಿಂದ ಅಭಿವೃದ್ಧಿ ಕುಂಠಿತವಾಗಿತ್ತು ತದ ನಂತರ ಕ್ಷೇತ್ರಕ್ಕೆ ಸಾಕಷ್ಟು ಅನುಧಾನ ತಂದು ಅಭಿವೃದ್ಧಿ ಮಾಡಿದ್ದಾರೆ,ಮುಂದೆ ಸಹ ಉತ್ತಮ ರೀತಿಯಲ್ಲಿ ಜನರ ಸೇವೆ ಮಾಡುತ್ತಾರೆ ಎಂಬ ನಂಬಿಕೆ ಇದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿಸೇವಾಶ್ರಯ ಫೌಂಡೇಶನ್ ಕಾರ್ಯದರ್ಶಿ ವಿ.ಚಂದ್ರು ಸಂಸ್ಥೆಯ ನಿರ್ದೇಶಕರುಗಳಾದ ಮಂಜು, ಗಿರೀಶ್,ಶಶಿ, ಮನು, ಮಂಜಣ್ಣ, ರಾಜು,ಅಭಿ, ರಾಜೇಶ್, ಸಿದ್ದರಾಜು, ಕಲ್ಯಾಣ್ ಸೇರಿದಂತೆ ಮತ್ತಿತರರು ಹಾಜರಿದ್ದರು



