ಮುದ್ದೇಬಿಹಾಳ ತಾಲ್ಲೂಕಿನ ನಾಗರಬೆಟ್ಟ ಆಕ್ಸಫರ್ಡ್ ಪಾಟೀಲ್ಸ್ ಶಿಕ್ಷಣ ಸಂಸ್ಥೆಯಲ್ಲಿ ಜೂನಿಯರ್ ಜೀನಿಯಸ್ ಅವಾರ್ಡ್ ಪರೀಕ್ಷೆಯ ಬಹುಮಾನ ಸಮಾರಂಭ ನಡೆಯಿತು.
ಮುದ್ದೇಬಿಹಾಳ: ತಾಲ್ಲೂಕಿನ ನಾಗರಬೆಟ್ಟ ಆಕ್ಸಫರ್ಡ್ ಪಾಟೀಲ್ಸ್ ಶಿಕ್ಷಣ ಸಂಸ್ಥೆಯಲ್ಲಿ ಭಾನುವಾರ ಜೂನಿಯರ್ ಜೀನಿಯಸ್ ಅವಾರ್ಡ್ ಪರೀಕ್ಷೆಯ ಬಹುಮಾನ ವಿತರಣಾ ಸಮಾರಂಭ ನಡೆಯಿತು.
ಈ ಕಾರ್ಯಕ್ರಮ ದಿವ್ಯ ಸಾನಿಧ್ಯ ವಹಿಸಿದ ಕೋರಿ ಸಿದ್ದೇಶ್ವರ ಶಾಖಾಮಠದ ಸಿದ್ದಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಜೂನಿಯರ್ ಜೀನಿಯಸ್ ಸ್ಟೂಡೆಂಟ್ ಅವಾರ್ಡ್ ಸ್ಪರ್ಧೆಯಲ್ಲಿ ೯ ನೇ ತರಗತಿಯ ಸೀಜಲ್ ಮಾಳಿ, ನಿಂಗರಾಜ ಹಿರೇನಿಂಗಪ್ಪನವರ ಪ್ರಥಮ, ಸಾಗರ ಪಡೆಕನೂರ, ಉಸ್ಮಾನ್ ನದಾಫ್ ದ್ವೀತಿಯ, ೩ ಸ್ಥಾನವನ್ನು ನಾಲ್ಕು ವಿದ್ಯಾರ್ಥಿಗಳು, ಐದನೇ ಸ್ಥಾನವನ್ನು ೫ ವಿದ್ಯಾರ್ಥಿಗಳು ಪಡೆದುಕೊಂಡರು.
ಅದರಂತೆ ೮ ನೇ ತರಗತಿಯಲ್ಲಿ ಸೃಷ್ಟಿ ನ್ಯಾಮಣ್ಣವರ ಪ್ರಥಮ, ಆದಿತಿ ನಾಜಮನ್ಯಾ ದ್ವೀತಿಯ, ಭೂಮಿಕಾ ಪಾಟೀಲ್ ತೃತೀಯ, ನಾಲ್ಕನೇ ಸ್ಥಾನವನ್ನು ಇಬ್ಬರು, ಐದನೇ ಸ್ಥಾನವನ್ನು ಮೂರು ಜನ ವಿದ್ಯಾರ್ಥಿಗಳು ಬಹುಮಾನ ಗಿಟ್ಟಿಸಿಕೊಂಡರು.
ರಾಜ್ಯದಲ್ಲಿ ಕಳೆದ ಮೂರು ವರ್ಷಗಳಿಂದ ನಮ್ಮ ಸಂಸ್ಥೆ ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಪ್ರಥಮ ಸ್ಥಾನ ಪಡೆಯುತ್ತಾ ಬಂದಿದೆ. ನೀಟ್ ಪರೀಕ್ಷೆಗೆ ಬೇಕಾದಂತಹ ಬುನಾದಿಯನ್ನು ೬ ನೇ ತರಗತಿಯಿಂದಲೇ ಆರಂಭಮಾಡಲಾಗುತ್ತದೆ ಇದು ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಉತ್ತೇಜಿಸುತ್ತದೆ. ಅಲ್ಲದೇ, ೯೦ ರಷ್ಟು ಫಲಿತಾಂಶ ಮಾಡಲು ವಿದ್ಯಾರ್ಥಿಗಳಿಗೆ ಸಹಾಯಕರಾಗಿ ಆಗಿದೆ ಎಂದು ಆಕ್ಸಫರ್ಡ್ ಪಾಟೀಲ್ಸ್ ಶಿಕ್ಷಣ ಸಂಸ್ಥೆಯ ಚೇರಮನ್ ಎಂ.ಎಸ್.ಪಾಟೀಲ್ ಹೇಳಿದರು.
ಪ್ರಥಮ ಬಹುಮಾನ ೨೦ ಸಾವಿರ, ದ್ವೀತಿಯ ೧೫ ಸಾವಿರ, ತೃತೀಯ ೧೦ ಸಾವಿರ, ನಾಲ್ಕನೇ ಸ್ಥಾನ ೮ ಸಾವಿರ, ಐದನೇ ಸ್ಥಾನ ೫ ಸಾವಿರ ರೂ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.
ಕೋಳೂರ ಶಾಲೆಯ ಮುಖ್ಯ ಶಿಕ್ಷಕ ರುದ್ರೇಶ್ ಕಿತ್ತೂರು, ಹುಣಚಗಿ ಶಿಕ್ಷಕರಾದ ಅಶೋಕ್ ಪೂಜಾರಿ, ಸಂಗಮೇಶ ಹೂಗಾರ ಮಾತನಾಡಿದರು. ದರ್ಶನ್ ಗೌಡ ಪಾಟೀಲ್, ಮುಖ್ಯ ಶಿಕ್ಷಕ ಇಸ್ಮಾಯಿಲ್ ಮನಿಯಾರ ನಿರೂಪಿಸಿದರು, ಗುರುರಾಜ ಕನ್ನೂರ ಸ್ವಾಗತಿಸಿ ವಂದಿಸಿದರು.



