ಇತ್ತೀಚಿನ ಸುದ್ದಿ

ಭಾರತದಲ್ಲಿ 25 ವರ್ಷಗಳನ್ನು ವೈಭವದಿಂದ ಕಳೆದ ಸಂಭ್ರಮದಲ್ಲಿ ‘ವರ್ಕ್ ಬೆಟರ್ ಕಾನ್ಫರೆನ್ಸ್’ ಆಯೋಜಿಸಿದ ಸ್ಟೀಲ್‌ಕೇಸ್

ಬೆಂಗಳೂರು, ಜೂನ್ 1, 2024: ಕಚೇರಿ ಪೀಠೋಪಕರಣಗಳ ತಯಾರಿಕೆಯಲ್ಲಿ ಜಾಗತಿಕವಾಗಿ ಮುಂಚೂಣಿಯಲ್ಲಿರುವ ಸ್ಟೀಲ್‌ಕೇಸ್ ಕಂಪನಿಯು ಭಾರತದಾದ್ಯಂತ ಇರುವ ಕಚೇರಿಗಳಿಗೆ ಹೊಸ ರೂಪ ಕೊಡುತ್ತಾ, ಆ ಕ್ಷೇತ್ರದಲ್ಲಿ ನಾಯಕತ್ವ ಸಾಧಿಸುತ್ತಾ 25 ವರ್ಷಗಳನ್ನು ಪೂರೈಸಿದೆ. ಆರಂಭಿಕ ಹಂತದಲ್ಲಿ ಜಂಟಿ ಉದ್ಯವಾಗಿ ಕೆಲಸ ಶುರು ಮಾಡಿದ ಸ್ಟೀಲ್‌ಕೇಸ್ ನಿಧಾನಕ್ಕೆ ತನ್ನ ಅಸ್ತಿತ್ವವನ್ನು ಸ್ಥಿರವಾಗಿ ವಿಸ್ತರಿಸುತ್ತಾ ಬಂದಿದೆ. ಸ್ಥಳೀಯ ಅಗತ್ಯಗಳನ್ನು ಪೂರೈಸುವ ಮತ್ತು ಸ್ಥಳೀಯ ಉತ್ಪಾದನೆಯಲ್ಲಿ ಗಣನೀಯವಾಗಿ ಹೂಡಿಕೆ ಮಾಡುವ ಮೂಲಕ ಸೂಕ್ತವಾದ ಉತ್ಪನ್ನಗಳನ್ನು ನೀಡುತ್ತಾ ಬಂದಿದೆ. ಈ ಮೂಲಕ ಕಂಪನಿಯು ಭಾರತದ ಕಚೇರಿಗಳಲ್ಲಿ ಸ್ಫೂರ್ತಿದಾಯಕ ಉದ್ಯೋಗಿ ಕೇಂದ್ರಿತ ವಾತಾವರಣ ನಿರ್ಮಿಸಲು ನೆರವಾಗಿದೆ ಮತ್ತು ಅದರಿಂದ ಕೆಲಸದ ಸ್ಥಳಗಳಲ್ಲಿ ಉದ್ಯೋಗಿಗಳ ತೊಡಗಿಕೊಳ್ಳುವಿಕೆ ಮತ್ತು ಉತ್ಪಾದಕತೆ ಹೆಚ್ಚಿಸಲು ನೆರವಾಗಿದೆ.

ಈ ಮಹತ್ವದ ಮೈಲಿಗಲ್ಲು ಸಾಧಿಸಿರುವ ನೆನಪಿಗೆ ಸ್ಟೀಲ್‌ಕೇಸ್ ಏಷ್ಯಾದಲ್ಲಿ ತನ್ನ ಮೊಟ್ಟ ಮೊದಲ ವರ್ಕ್ ಬೆಟರ್ ಕಾನ್ಫರೆನ್ಸ್ ಆಯೋಜಿಸಿದ್ದು, ಈ ಸಮಾವೇಶವು ಭಾರತದ ಬೆಂಗಳೂರಿನಲ್ಲಿ ನಡೆಯಿತು.

ಸಮಾವೇಶದಲ್ಲಿ ಭಾಗವಹಿಸಿದ ಆಸಕ್ತರು ಈ ಕೆಳಗಿನ ತಜ್ಞರ ಸಮಿತಿಯ ಜೊತೆಗೆ ಸಂವಾದ ನಡೆಸುವ ಅವಕಾಶ ಪಡೆದರು:

• ಲಲಿತ್ ಅಹುಜಾ, ಎಎನ್ಎಸ್ಆರ್, ಸಿಇಓ
• ಡಾ. ಅರವಿಂದ್ ಸುಬ್ರಮಣಿಯನ್, ರಿಲಯನ್ಸ್‌ನ ಮಾನವ ಸಂಪನ್ಮೂಲ ವಿಭಾಗದ ವಿಪಿ
• ಸಲೀಂ ಭಟ್ರಿ, ಸಿಇಪಿಟಿ ವಿಶ್ವವಿದ್ಯಾಲಯದ ಡಿಸೈನ್ ಫ್ಯಾಕಲ್ಟಿ ಡೀನ್
• ಸುನಿಲ್ ಸುರೇಶ್, ಸ್ಟಾನ್ಲಿ ಲೈಫ್‌ಸ್ಟೈಲ್‌ನ ಸಿಇಓ

ಈ ತಜ್ಞರ ತಂಡವು ಅಭಿವೃದ್ಧಿ ಹೊಂದುತ್ತಿರುವ ಕೆಲಸದ ಸ್ಥಳಗಳು, ಸಹಯೋಗ ಮತ್ತು ಹೆಚ್ಚು ಉತ್ಪಾದಕತೆ ಸಾಧಿಸುವಲ್ಲಿ ವಿನ್ಯಾಸದ ಪಾತ್ರದ ಕುರಿತು ತಮ್ಮ ಒಳನೋಟಗಳನ್ನು ಹಂಚಿಕೊಂಡರು.
ಸ್ಟೀಲ್‌ಕೇಸ್‌ನ ಭಾರತದ ವ್ಯವಸ್ಥಾಪಕ ನಿರ್ದೇಶಕ ತೀರ್ಥಂಕರ ಬಸು ಅವರು ಹೊಸ ಉತ್ಪನ್ನದ ಬಗ್ಗೆ ಹರ್ಷ ವ್ಯಕ್ತ ಪಡಿಸುತ್ತಾ, “ಭಾರತದಲ್ಲಿನ ನಮ್ಮ ಗ್ರಾಹಕರಿಗೆ ಕರ್ಮನ್® ಹೈಬ್ಯಾಕ್ ಚೇರ್ ಅನ್ನು ಪರಿಚಯಿಸಲು ನಾವು ಸಂತೋಷ ಹೊಂದಿದ್ದೇವೆ. ಈ ಇತ್ತೀಚಿನ ಉತ್ಪನ್ನವು ದಕ್ಷತೆ ಮತ್ತು ಸೌಂದರ್ಯವನ್ನು ಜೊತೆಗೂಡಿಸಿ ಅಭಿವೃದ್ಧಿ ಹೊಂದುತ್ತಿರುವ ಆಧುನಿಕ ಕಚೇರಿ ಸ್ಥಳಗಳ ಅಗತ್ಯತೆಗಳಿಗೆ ತಕ್ಕಂತೆ ಸೊಗಸಾದ ಪರಿಹಾರೋತ್ಪನ್ನಗಳನ್ನು ರಚಿಸುವ ನಮ್ಮ ಬದ್ಧತೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.

ಈ ಕುರಿತು ಏಷ್ಯಾ ಪೆಸಿಫಿಕ್ ಮಾರ್ಕೆಟಿಂಗ್ ವಿಭಾಗದ ಉಪಾಧ್ಯಕ್ಷ ಸಮಂತಾ ಗಿಯಾಮ್ , “ಭಾರತದಲ್ಲಿ ವಿನ್ಯಾಸ ಜಗತ್ತಿನ ಬೆಳವಣಿಗೆಗೆ ಕೊಡುಗೆ ನೀಡಲು ನಾವು ಬದ್ಧರಾಗಿದ್ದೇವೆ. ಭಾರತದಲ್ಲಿ ಸಹಭಾಗಿತ್ವಗಳಿಂದ ನಮ್ಮ ಉತ್ಪನ್ನ ಪೋರ್ಟ್ ಫೋಲಿಯೋ ಹೊಸ ಹುರುಪು ಪಡೆಯಲಿದೆ. ಸ್ಟೀಲ್‌ಕೇಸ್ ನ ವಿಶೇಷ ಉತ್ಪನ್ನ ಸಂಗ್ರಹವಾದ ಸಿಂಪ್ಲಿಇಂಡಿಯಾ ಸಂಗ್ರಹ ಇದೀಗ ಸ್ಟ್ಯಾನ್ಲಿ ಉತ್ಪನ್ನಗಳನ್ನೂ ಒಳಗೊಂಡಿದ್ದು, ಈ ಮೂಲಕ ಅವುಗಳು ಭಾರತದಲ್ಲಿನ ಗ್ರಾಹಕರಿಗೆ ಸುಲಭವಾಗಿ ದೊರೆಯಲಿದೆ. ಜಾಗತಿಕ ಮತ್ತು ಸ್ಥಳೀಯ ಉತ್ಪನ್ನಗಳ ಈ ಕ್ರಿಯಾಶೀಲ ಮಿಶ್ರಣವು ಭಾರತೀಯ ಗ್ರಾಹಕರಿಗೆ ಸ್ಟೀಲ್ ಕೇಸ್ ನ ಉತ್ತಮ ಉತ್ಪನ್ನಗಳ ಲಭ್ಯತೆಯನ್ನು ಹೆಚ್ಚಿಸುತ್ತದೆ” ಎಂದು ಹೇಳಿದರು.

ಸಮಾವೇಶದಲ್ಲಿ ಸ್ಟೀಲ್‌ಕೇಸ್ ಕಂಪನಿಯು ಸಿಇಪಿಟಿ ವಿಶ್ವವಿದ್ಯಾನಿಲಯದೊಂದಿಗಿನ ತನ್ನ ವಿಶೇಷ ಪಾಲುದಾರಿಕೆಯನ್ನು ಘೋಷಿಸಿದೆ. ಈ ಮೂಲಕ ಭಾರತದಲ್ಲಿನ ಉದಯೋನ್ಮುಖ ಪ್ರತಿಭೆಗಳಿಗೆ ವಿಶಿಷ್ಟ ಅವಕಾಶಗಳನ್ನು ಒದಗಿಸಲು ಸಜ್ಜಾಗಿದೆ. ಈ ಸಹಯೋಗವು ಶೈಕ್ಷಣಿಕ ಜ್ಞಾನ ಮತ್ತು ಉದ್ಯಮದ ಅಗತ್ಯತೆಗಳ ನಡುವಿನ ಅಂತರವನ್ನು ಕಡಿಮೆ ಮಾಡಲು ಸೇತುವೆಯಾಗುವ ಗುರಿಯನ್ನು ಹೊಂದಿದೆ. ವಿದ್ಯಾರ್ಥಿಗಳಿಗೆ ವಿನ್ಯಾಸ ಮತ್ತು ವಾಸ್ತುಶಿಲ್ಪದ ಕ್ಷೇತ್ರದಲ್ಲಿ ಬೆಳವಣಿಗೆ ಹೊಂದಲು ಬೇಕಾಗಿರುವ ಕೌಶಲ್ಯ ಮತ್ತು ಅನುಭವವನ್ನು ಒದಗಿಸಲು ಕಂಪನಿಯು ಮುಂದಾಗಿದೆ. ಜೊತೆಗೆ, ಈ ಉಪಕ್ರಮವು ಪ್ರಾದೇಶಿಕ ಪರಿಕಲ್ಪನೆಗಳನ್ನು ಬಳಸಿಕೊಂಡು ತಮ್ಮದೇ ಮಾರುಕಟ್ಟೆಗೆ ಉತ್ಪನ್ನಗಳನ್ನು ರಚಿಸಲು ಅನುವ ಮಾಡಿಕೊಡುವ ಮೂಲಕ ಭಾರತೀಯ ವಿನ್ಯಾಸ ಪ್ರತಿಭೆಗಳಿಗೆ ಹೊಸ ಮಾರ್ಗವನ್ನು ತೆರೆಯುತ್ತದೆ.

Related Articles

Leave a Reply

Your email address will not be published. Required fields are marked *

Back to top button