ಇತ್ತೀಚಿನ ಸುದ್ದಿರಾಜ್ಯ

ಚಿನ್ನ ನೀಡುವುದಾಗಿ ನಂಬಿಸಿ ಹಣ ಪಡೆದು ವಂಚಿಸುತ್ತಿದ್ದ ಕಳ್ಳರ ಬಂಧನ.

ಕೊರಟಗೆರೆ :- ಮನೆ ಪಾಯ ಅಗಿಯುವಾಗ ಬಂಗಾರ ಸಿಕ್ಕಿದೆ ಕಡಿಮೆ ದರಕ್ಕೆ ಕೆಜಿಗಟ್ಟಲೆ ಬಂಗಾರ ನೀಡುತ್ತೇವೆ ಎಂದು ನಂಬಿಸಿ 5 ಲಕ್ಷ ದುಡ್ಡು ಪಡೆದು ಕ್ಷಣಾರ್ಧದಲ್ಲಿ ಸಿನಿಮೀಯ ರೀತಿಯಲ್ಲಿ ದುಡ್ಡು ಪಿಕಿಕೊಂಡು ಪರಾರಿಯಾಗಿರುವ ಘಟನೆ ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.

ಕೊರಟಗೆರೆ ತಾಲೂಕಿನ ಹೂಳವನಹಳ್ಳಿ ಹೋಬಳಿ ಅರಸಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊರಟಗೆರೆ ಗಡಿ ಭಾಗದ ಹಕ್ಕಿ ಪಿಕ್ಕಿ ಕಾಲೋನಿಯ ನಾಲ್ಕು ಜನ ಖತರ್ನಾಕ್ ಆರೋಪಿಗಳು ಆಂಧ್ರ ಮೂಲದ ಗುತ್ತಿ ಗ್ರಾಮದ ಶಾಶಾವಲಿ ಎಂಬುವನಿಂದ 5 ಲಕ್ಷ ಪಡೆದು ಕ್ಷಣಾರ್ಧದಲ್ಲಿ ತಪ್ಪಿಸಿಕೊಂಡು ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಹಕ್ಕಿ ಪಿಕ್ಕಿ ಕಾಲೋನಿಯ ಆರೋಪಿಗಳಾದ ಎ 1 ಆರೋಪಿ ಯುವರಾಜ್ ನಾಯಕ್ ಅಲಿಯಾಸ್ ಯುವರಾಜ್ ಉರುಫ್ ಗಣೇಶ (22 ವರ್ಷ), ಎ2 ಆರೋಪಿ ಕನ್ನೇಶ್ ಬಿನ್ ಪಾರಿಸ್, (45 ವರ್ಷ),ಎ3 ರಾಜ ಬಾಬು ಬಿನ್ ನಂಜಯ್,ಎ4 ಸಂದಿಲ್ ಬಿನ್ ರಮೇಶ್ ಎಂಬುವರು ಆಂಧ್ರ ಮೂಲದ ‌ ಗುತ್ತಿಯ ವಾಸಿ ಶಾಶಾವಲಿ ಎಂಬುವನನ್ನು ಬಂಗಾರ ನೀಡುವುದಾಗಿ ನಂಬಿಸಿ 8 ಲಕ್ಷ ಹಣ ತಂದರೆ 50 ಲಕ್ಷಕ್ಕೂ ಹೆಚ್ಚು ಮೌಲ್ಯದ ಬಂಗಾರ ನೀಡುವುದಾಗಿ ನಂಬಿಸಿ ಕರೆಸಿಕೊಂಡು 8 ಲಕ್ಷ ಇಲ್ಲ 5 ಲಕ್ಷವಿದೆ ಎಂದಾಗ 5 ಲಕ್ಷ ಪಡೆದು ಯಾವುದೇ ಒಡವೆ ನೀಡದೆ ದ್ವಿಚಕ್ರ ವಾಹನದಲ್ಲಿ ಸಿನಿಮಿಯ ರೀತಿಯಲ್ಲಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಜಿ ನಾಗೇನಹಳ್ಳಿ ಬಳಿ ಡೀಲ್
ಕೊರಟಗೆರೆ ತಾಲೂಕಿನ ಜಿ ನಾಗೇನಹಳ್ಳಿ ಬಳಿ ವ್ಯವಹರಿಸುವ ಡೀಲ್ ಫಿಕ್ಸ್ ಆಗಿ ಇಬ್ಬರೂ ಜಿ ನಾಗೇನಹಳ್ಳಿ ಬಳಿ ಬರುವುದು ಇವರು ಬಂಗಾರ ಕೊಡುವುದು ಅವರು ಆ ಕಡೆಯಿಂದ ಹಣ ತಂದು ಕೊಡುವುದಾಗಿ ಮಾತುಕತೆಯಾಗಿ ಹಣ ಪಡೆದು ಯಾವುದೇ ಒಡವೆ ಬಂಗಾರ ನೀಡದೆ ಕ್ಷಣಾರ್ಧದಲ್ಲಿ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ.

ಈ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,‌ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ ವೆಂಕಟ್ ಮತ್ತು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮರಿಯಪ್ಪ ,ಅಬ್ದುಲ್ ಖಾದರ್ ಮಧುಗಿರಿ ಡಿವೈಎಸ್ಪಿ ರಾಮಚಂದ್ರಪ್ಪನವರ ಮಾರ್ಗದರ್ಶನದಂತೆ ಕೊರಟಗೆರೆ ಸಿಪಿಐ ಅನಿಲ್ ಹಾಗೂ ಪಿ ಎಸ್ ಐ ಚೇತನ್ ಗೌಡ ತಂಡ ರಂಗರಾಜು ಸಿ HC, ದೊಡ್ ಲಿಂಗಯ್ಯ ಪಿಸಿ ಮೋಹನ್ ಎಂ ಎಲ್ , ರಾಮಚಂದ್ರ, ಗಣೇಶ್, ಪ್ರದೀಪ್ ಕುಮಾರ್ ಮಿಂಚಿನ ಕಾರ್ಯಚರಣೆ ನಡೆಸಿ ಘಟನೆ ನಡೆದ ಒಂದೇ ದಿನದಲ್ಲಿ 5.50 ಲಕ್ಷ ನಗದು, ಹೋಂಡಾ ಶೈನ್ ದ್ವಿಚಕ್ರ ವಾಹನ ವಶಪಡಿಸಿಕೊಂಡು ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ಕಳಿಸಿದ್ದಾರೆ ಎನ್ನಲಾಗಿದೆ.

ಹೆಗ್ಗಿಲ್ಲದೆ ನಡೆಯುತ್ತಿದೆ ದಂಧೆ

ಹಕ್ಕಿ ಪಿಕ್ಕಿ ಕಾಲೋನಿ ಕೊರಟಗೆರೆ ಗಡಿಭಾಗವಾದರೂ ರಾಜ್ಯ ವರರಾಜ್ಯದಲ್ಲೂ ಕುಖ್ಯಾತಿಯಾಗಿದೆ, ಇಲ್ಲಿ ನಡೆಯದ ದಂದೆಗಲಿಲ್ಲ, ಹತ್ತಾರು ವರ್ಷಗಳಿಂದ ರಾಜ್ಯದ ವಿವಿಧ ಮೂಲೆಗಳ ಜನರಿಗೆ ಯಾಮರಸಿದ್ದು, ಕೊರಟಗೆರೆಯಲ್ಲಿ ಇವರ ವ್ಯವಹಾರ ಇಲ್ಲದಿದ್ದರೂ ಹೊರಗಡೆ ಬಹಳಷ್ಟು ದಂದೆ ನಡೆಸುತ್ತಿದ್ದು, ನೂರಾರು ಜನರಿಗೆ ಲಕ್ಷಾಂತರ ರೂಪಾಯಿ ಮೋಸ ಮಾಡಲಾಗಿದ್ದು, ಈ ದಂದೆ ಕೋರರನ್ನ ಸಿಪಿಐ ಅನಿಲ್ ಹಾಗೂ ಪಿಎಸ್ಐ ಚೇತನ್ ಗೌಡ ಏನಾದರೂ ಮಾಡಿ ಇವರ ಕಳ್ಳಾಟಗಳಿಗೆ ಅಂತ್ಯ ಆಡಬೇಕು ಎಂದು ಕೆಲವು ಪ್ರಜ್ಞಾವಂತರ ವಾದವಾಗಿದೆ.

ಕಳ್ಳ ದಂದೆಗೆ ಮತ್ತೊಂದು ಹೆಸರೇ ಹಕ್ಕಿ ಪಿಕ್ಕಿ ಕಾಲೋನಿ

ಹತ್ತಾರು ವರ್ಷಗಳಿಂದ ಸತತ ಕಳ್ಳದಂಧೆಯಲ್ಲಿ ಮುಳುಗಿರುವ ಹಕ್ಕಿಪಿಕ್ಕಿ ಕಾಲೋನಿಯ ಬಹಳಷ್ಟು ಜನ ಮೋಜು ಮಸ್ತಿ ಯಲ್ಲಿ ಕಾಲ ಕಳೆಯುತ್ತಿದ್ದು, ಯಾವುದೇ ಆರ್ಥಿಕ ಲಾಭ ಬರುವಂತ ಲಾಭದಾಯಕ ಕೆಲಸ ಕಾರ್ಯಗಳಿಲ್ಲದಿದ್ದರೂ ಇವರ ಮನೆ ಹಾಗೂ ಪ್ರತಿದಿನದ ಜೀವನ ಶೈಲಿ ಯಾವ ಕೋಟ್ಯಾಧಿಪತಿಗೆ ಕಡಿಮೆ ಇಲ್ಲ ಎನ್ನುವ ರೀತಿಯಲ್ಲಿ ವೈಭವಯುತ ಜೀವನ ಸಾಗಿಸುತ್ತಿದ್ದು, ದಿನಂಪ್ರತಿ ಕಳ್ಳ ದಂದೆಗಳಾದ ಆರ್ ಪಿ, ಆರ್ ಆರ್ – ಎಮ್ ಆರ್ , ಕೋಟ ನೋಟು, ಚೊಂಬು,ಗೂಬೆ, ಆಮೆ, ಎರಡು ತಲೆ ಹಾವು, ಲಿಬೋ ಕಾಯಿನ್, ನಿಧಿಸಿಕ್ಕಿದೆ ಎಂದು ಬಂಗಾರದ ಅವ್ಯವಹಾರ ಸೇರಿದಂತೆ ರಾಜ್ಯದಲ್ಲಿ ನಡೆಯುವಂತಹ ಎಲ್ಲಾ ರೀತಿಯ ಅವ್ಯವಹಾರಗಳು ಇದೇ ಗ್ರಾಮದಲ್ಲಿ ಜೀವ ತುಂಬಿಕೊಂಡಿದ್ದವು ಎಂದರೂ ತಪ್ಪಾಗಲಾರದು, ಒಟ್ಟಾರೆ ಬಹಳ ನಿಷ್ಠಾವಂತ ಪೊಲೀಸ್ ಅಧಿಕಾರಿಯಾದ ಸಿಪಿಐ ಅನಿಲ್, ಕೊರಟಗೆರೆ ಜನತೆಗೆ ಆಶಾದಾಯಕವಾದ ವ್ಯಕ್ತಿತ್ವವುಳ್ಳ ಅಪರಾಧಿಗಳ ಪಾಲಿಗೆ ಸಿಂಹ ಸ್ವಪ್ನವಾದ ಪಿಎಸ್ಐ ಚೇತನ್ ಗೌಡ ಅವರು ಇಂತಹ ಬಹಳಷ್ಟು ಅಪರಾಧಿಗಳಿಗೆ ತಕ್ಕ ಶಾಸ್ತಿ ಮಾಡದಿದ್ದರೆ ಕೊರಟಗೆರೆಗೆ ಆರೋಪ ತಪ್ಪಿದ್ದಲ್ಲ ಎಂದು ಕೆಲವು ಪ್ರಜ್ಞಾವಂತರು ಪೊಲೀಸ್ ಇಲಾಖೆಗೆ ಒತ್ತಾಯಿಸುತ್ತಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button