ಇತ್ತೀಚಿನ ಸುದ್ದಿರಾಜ್ಯ

ರಾಜ್ಯ ಪರಿಷತ್ ಸದಸ್ಯರಾಗಿ ಸಮಾಜ ಸೇವಕ ಆರ್.ಟಿ. ಓ ಮಲ್ಲಿಕಾರ್ಜುನ್ ಅವಿರೋಧವಾಗಿ ಆಯ್ಕೆ.

ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ೨೦೨೪-೨೯ನೇ ಅವಧಿಗೆ ನಡೆದ ರಾಜ್ಯ ಪರಿಷತ್ತು ಸದಸ್ಯರ ಚುನಾವಣೆಯಲ್ಲಿ ಸಾರಿಗೆ ಇಲಾಖೆ ತಾಂತ್ರಿಕ ಮತ್ತು ಅಧಿಕಾರಿ ವೃಂದ ಕ್ಷೇತ್ರದಿಂದ ಸ್ಪರ್ಧಿಸಿದ್ದ ಆರ್.ಟಿ.ಓ ಮಲ್ಲಿಕಾರ್ಜುನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಎ.ಹನುಮನರಸಯ್ಯ ಘೋಷಿಸಿದ್ದಾರೆ.

ಕೆ.ಆರ್.ಪೇಟೆ ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಆಲಂಬಾಡಿ ಕಾವಲು ಗ್ರಾಮದ ಆರ್ ಟಿ ಓ ಮಲ್ಲಿಕಾರ್ಜುನ್ ರವರು ಪ್ರಸ್ತುತ ನಾಗಮಂಗಲ ಮತ್ತು ಬೆಂಗಳೂರು ಕಚೇರಿಗಳ ಸಹಾಯಕ ಪ್ರಾದೇಶಿಕ ಸಾರಿಗೆ ಮುಖ್ಯ ಅಧಿಕಾರಿಯಾಗಿ ಹಾಗೂ ಆರ್.ಟಿ.ಓ ಸಂಘದ ರಾಜ್ಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಾ ಕೆ.ಆರ್. ಪೇಟೆ ತಾಲ್ಲೂಕಿನಲ್ಲೂ ಕ್ರಿಯಾಶೀಲ ಸಮಾಜಸೇವೆಯ ಸಲ್ಲಿಸುತ್ತಿರುವ ಅವರು ಅವಿರೋಧವಾಗಿ ರಾಜ್ಯ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ.ರಾಜ್ಯದ ಮುಖ್ಯಮಂತ್ರಿ, ಕೇಂದ್ರ ಮತ್ತು ರಾಜ್ಯ ಸಚಿವರು,ಮಾಜಿ ಮುಖ್ಯ ಮಂತ್ರಿಗಳು ಸಚಿವರು,ವಿವಿಧ ಪಕ್ಷದ ಗಣ್ಯರು ಸಂಘಟನೆಗಳು ಪದಾಧಿಕಾರಿಗಳು ಹೃದಯಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button