ಕ್ರೈಂ
Trending

ಮಾಜಿ ಪ್ರೇಮಿಯಿಂದ ವಿಡಿಯೋ ವೈರಲ್ ಮಾಡುವುದಾಗಿ ಬ್ಲ್ಯಾಕ್ ಮೇಲ್, ಮದುವೆ ಸಂಭ್ರಮದಲ್ಲಿದ್ದ ಯುವತಿ ಆತ್ಮಹತ್ಯೆ

ಗದಗ, ಏಪ್ರಿಲ್​ 21: ಮಾಜಿ ಪ್ರೇಮಿ ಬ್ಲ್ಯಾಕ್​ ಮೇಲ್ ಮಾಡಿದ್ದಕ್ಕೆ ಮರ್ಯಾದೆಗೆ ಹೆದರಿ​ ಮದುವೆ ಸಂಭ್ರಮದಲ್ಲಿದ್ದ ಯುವತಿ (girl) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಗದಗ ತಾಲೂಕಿನ ಅಸುಂಡಿ ಗ್ರಾಮದಲ್ಲಿ ನಡೆದಿದೆ. ಸಾಯಿರಾಬಾನು ನದಾಫ್​(29) ಆತ್ಮಹತ್ಯೆ (death) ಮಾಡಿಕೊಂಡ ಯುವತಿ. ಸಾಯಿರಾಬಾನು ಡೆತ್​​ನೋಟ್​ ಬರೆದಿಟ್ಟಿದ್ದು, ಮೈಲಾರಿ ಎಂಬುತಾನ ವಿರುದ್ಧ ಬ್ಲ್ಯಾಕ್ ಮೇಲ್ ಆರೋಪ ಕೇಳಿಬಂದಿದೆ. ಗದಗ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮೇ 8ರಂದು ಸಾಯಿರಾಬಾನು ನದಾಫ್​ ಮದುವೆ ನಿಗದಿಯಾಗಿತ್ತು. ಹಾಗಾಗಿ ಇತ್ತ ಮನೆಯಲ್ಲಿ ಅದ್ಧೂರಿ ಮದುವೆಗೆ ಭರ್ಜರಿ ತಯಾರಿ ಕೂಡ ನಡೆದಿತ್ತು. ಸಾಯಿರಾಬಾನು ಖುಷಿಯಿಂದಲೇ ತಾಳಿ, ಬಟ್ಟೆ ಎಲ್ಲವನ್ನು ಖರಿಸಿದ್ದರು. ಇಂದು ಪೋಷಕರು ಮದುವೆ ವಸ್ತುಗಳ ಖರೀದಿಗೆ ಹೋದಾಗ ಸಾಯಿರಾಬಾನು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯ ಬಾಗಿಲು ತೆರೆದು ನೋಡಿದಾಗ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದು ತಿಳಿದುಬಂದಿದೆ. ಮಗಳ ಸ್ಥಿತಿ ನೋಡಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ಮದುವೆ ಸಂಭ್ರಮದಲ್ಲಿ ಇದ್ದ ಮನೆಯಲ್ಲಿ ಇದೀಗ ಸೂತಕದ ಛಾಯೆ ಆವರಿಸಿದೆ.ಐದು ವರ್ಷಗಳ ಹಿಂದೆ ಮೈಲಾರಿ ಜೊತೆ ಸಾಯಿರಾಬಾನು ನದಾಫ್​ ಲವ್​ ಬ್ರೇಕಪ್ ಆಗಿತ್ತು. ನಿನಗೆ ತೊಂದರೆ ಕೊಡಲ್ಲ ಅಂತ ಮಾಜಿ ಪ್ರೇಮಿ ಬರ್ತಡೇ ಆಚರಿಸಿದ್ದ. ಆದರೆ ಐದು ವರ್ಷಗಳ ಬಳಕ ಮತ್ತೆ ಎಂಟ್ರಿಕೊಟ್ಟ ಪಾಗಲ್ ಪ್ರೇಮಿ, ಬಳಿಕ ವಿಡಿಯೋ, ಫೋಟೋ ವೈರಲ್ ಮಾಡುವುದಾಗಿ ಬ್ಲ್ಯಾಕ್ ಮೇಲ್​​ ಮಾಡಿದ್ದಾನೆ. ಹೀಗಾಗಿ ಮರ್ಯಾದೆಗೆ ಹೆದರಿ ಸಾಯಿರಾಬಾನು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನನ್ನ ಮಗಳಿಗೆ ಆದ ಸ್ಥಿತಿ ಯಾರಿಗೂ ಆಗಬಾರದು. ಮೈಲಾರಿ ಎಂಬಾತನಿಗೆ ಗಲ್ಲು ಶಿಕ್ಷೆ ಆಗಬೇಕು ಅಂತ ತಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಸಾಯಿರಾಬಾನು ದೈಹಿಕ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಅಷ್ಟೇ ಅಲ್ಲದೆ ಪ್ರತಿಭಾನ್ವಿತ ಕ್ರೀಡಾಪಟುವಾಗಿದ್ದರು. ಕುಸ್ತಿ ಸೇರಿ ಹಲವು ಕ್ರೀಡೆಗಳಲ್ಲಿ ಸಾಧನೆ ಮಾಡಿರುವ ಸಾಯಿರಾಬಾನು, ಸಾಕಷ್ಟು ಪದಕಗಳನ್ನು ತನ್ನದಾಗಿಸಿಕೊಂಡಿದ್ದಾರೆ. ಆದರೆ ಇದೀಗ ಮುದ್ದಾಗಿ ಸಾಕಿದ್ದ ಮಗಳನ್ನು ಕಳೆದುಕೊಂಡು ಪೋಷಕರು ಕಣ್ಣೀರು ಹಾಕುವಂತಾಗಿದೆ.

Related Articles

Leave a Reply

Your email address will not be published. Required fields are marked *

Back to top button