
ಡಿ ಆರ್ ಗುರು ಶಿಷ್ಯರ ಬಳಗ. ಜಿಲ್ಲಾ ಅಂದತ್ವ ನಿಯಂತ್ರಣ ಸಂಸ್ಥೆ ಮಂಡ್ಯ,ಮೈಸೂರು ರೇಸ್ ಕ್ಲಬ್ ಚಾರಿಟೇಬಲ್ ಟೆಸ್ಟ್ ಕಣ್ಣಿನ ಆಸ್ಪತ್ರೆ, ಮೈಸೂರು ಹಾಗೂ ಹಲಗೂರು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಇವರ ಸಂಯುಕ್ತ ಆಶ್ರಯದಲ್ಲಿ. ಇದೇ ತಿಂಗಳು 24-04- 2025 ನೇ ಗುರುವಾರ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಹಲಗೂರು ಪೊಲೀಸ್ ಠಾಣೆ ಮುಂಭಾಗ ಸಭಾಭವನದಲ್ಲಿ ಕಣ್ಣಿನ ತಪಾಸಣಾ ಶಿಬಿರ ನಡೆಯಿತು. ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಡಿ ಆರ್ ಗುರು-ಶಿಷ್ಯರ ಬಳಗದ ಅಧ್ಯಕ್ಷರಾದ ನಿವೃತ್ತ ಶಿಕ್ಷಕರಾದ ಎ ಎಸ್ ದೇವರಾಜ್ ರವರು ಮಾತನಾಡಿ ನಾನು ನಿವೃತ್ತಿಯಾದ ನಂತರ ನನ್ನ ಹಳೆಯ ವಿದ್ಯಾರ್ಥಿಗಳು ಡಿಆರ್ ಗುರು ಶಿಷ್ಯರ ಬಳಗ ಎಂದು ಸಂಘವನ್ನು ಮಾಡಿ ಸಾರ್ವಜನಿಕರಿಗೆ ಅನುಕೂಲವಾಗುವ ನೆಟ್ಟಿನಲ್ಲಿ ಹಾಗೂ ಮಕ್ಕಳ ಉನ್ನತ ಶಿಕ್ಷಣಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದ್ದು. ಇಂದು ಉಚಿತ ಕಣ್ಣಿನ ತಪಾಸಣೆ ಕಾರ್ಯಕ್ರಮದಲ್ಲಿ 120ಕ್ಕೂ ಹೆಚ್ಚು ರೋಗಿಗಳು ಪರೀಕ್ಷೆಗೆ ಒಳಪಟ್ಟು ಇಂದು 25 ಮಂದಿ ಕಣ್ಣಿನ ಪೊರೆ ಚಿಕಿತ್ಸೆಗೆ ಮೈಸೂರಿಗೆ ಕಳಿಸಿದ್ದೇವೆ . ನಮಗೆ ಸಹಕರಿಸಿದ ಸಾರ್ವಜನಿಕರು ಹಾಗೂ ನನ್ನ ಶಿಷ್ಯದೊಂದಿಗೆ ನನ್ನ ಧನ್ಯವಾದಗಳು ಇದೇ ರೀತಿ ನಿಮ್ಮ ಸಹಕಾರ ನನಗಿರಲಿ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ವೈದ್ಯಾಧಿಕಾರಿ ಸೌಮ್ಯಶ್ರೀ. ಡಿಎಲ್ ಮಾದೇವೇಗೌಡ. ರಾಜೇಶ್ವರಿ. ಅಭಿಜಿತ್ ಬಸವರಾಜ್. ಮಹೇಶ್. ಶ್ರೀನಾಥ್ . ಶಿವಪ್ರಕಾಶ್. ರವಿ ಕುಮಾರ್. ಮನೋಹರ್. ಹಾಜರಿದ್ದರು.



