ಮಲೆ ಮಹದೇಶ್ವರ ದೇವಸ್ಥಾನಕ್ಕೆ ತೆರಳುತ್ತಿದ್ದ ವ್ಯಕ್ತಿ ಮೇಲೆ ಚಿರತೆ ದಾಳಿ:ಭಕ್ತ ಸಾವು ಪಾದಯಾತ್ರೆ ದ್ವಿಚಕ್ರ ವಾಹನ ಸ್ಥಗಿತ

ಚಾಮರಾಜನಗರ: ಮಲೆಮಹದೇಶ್ವರಬೆಟ್ಟದ ತಾಳಬೆಟ್ಟಕ್ಕೆಪಾದಯಾತ್ರೆಗೆಹೊರಟ್ಟಿದ್ದಭಕ್ತರಮೇಲೆಚಿರತೆದಾಳಿ ಮಾಡಿದ್ದು, ಘಟನೆಯಲ್ಲಿಓರ್ವಯುವಕಬಲಿಯಾಗಿದ್ದಾನೆ. ಮಂಡ್ಯಮೂಲದಪ್ರವೀಣ್ ಎಂಬಾತಚಿರತೆದಾಳಿಯಿಂದಸಾವನ್ನಪ್ಪಿದ್ದಾನೆ . ಈ ಬಗ್ಗೆ ಮಾತನಾಡಿರುವ ಅರಣ್ಯ ಸಚಿವ ಈಶ್ವರ್ ಖಂಡ್ರೆ ಮಾತನಾಡಿ, ಮಾನವ ಸಂಘರ್ಷ ಜಾಸ್ತಿ ಆಗ್ತಿದೆ , ಪ್ರಾಣಿಗಳ ಸಂಖ್ಯೆಯೂ ಜಾಸ್ತಿ ಆಗ್ತಿದೆ.
ಮಲೆ ಮಹದೇಶ್ವರ ಬೆಟ್ಟದಲ್ಲಿ ಚಿರತೆ ದಾಳಿ ಪ್ರಕರಣದ ಬಗ್ಗೆ ಬೆಂಗಳೂರಿನಲ್ಲಿ ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ ಮಾತನಾಡಿದ್ರು. ಘಟನೆ ಬಗ್ಗೆ ತಿಳಿದು ಬಹಳ ದುಃಖ ಆಗ್ತಿದೆ, ಪ್ರತಿ ಜೀವ ಅಮೂಲ್ಯ, ಜೀವಕ್ಕೆ ಬೆಲೆ ಕಟ್ಟಲು ಆಗುವುದಿಲ್ಲ, ಎರಡೂ ಕಡೆ ಅರಣ್ಯ ಇದೆ, ಅರಣ್ಯದ ಮಧ್ಯೆ ದೇವಾಲಯ ಇದೆ. ಹಿರಿಯ ಅರಣ್ಯಾಧಿಕಾರಿಯನ್ನ ಕಳುಹಿಸಿದ್ದೇನೆ, ಎಲ್ಲಾದ್ರೂ ಲ್ಯಾಪ್ಸ್ ಆಗಿದ್ಯಾ ಯಾಕೆ ದಾಳಿ ಆಯ್ತು ಅಂತ ವರದಿ ನೀಡಲು ಸೂಚನೆ ನೀಡಿದ್ದೇನೆ ಅಂತ ಹೇಳಿದರು.

ಮುಂದುವರೆದು ಮಾತನಾಡಿದ ಸಚಿವ ಈಶ್ವರ್ ಖಂಡ್ರೆ, ಇಂತಹ ಘಟನೆಗಳು ಪುನರಾವರ್ತನೆ ಆಗದಂತೆ ಅಗತ್ಯ ಸಿಬ್ಬಂದಿ ನೇಮಕ ಮಾಡುತ್ತೇವೆ, ಸರ್ಕಾರದಿಂದ ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತೇವೆ, ಪ್ರಾಣಿ ಮತ್ತು ಮಾನವ ನಡುವಿನ ಸಂಘರ್ಷ ಜಾಸ್ತಿ ಆಗ್ತಿದೆ, ಪ್ರಾಣಿಗಳ ಸಂಖ್ಯೆಯೂ ಜಾಸ್ತಿ ಆಗುತ್ತಿದೆ. ಸರ್ಕಾರ, ಅರಣ್ಯ ಇಲಾಖೆ ಮೃತನ ಕುಟುಂಬದ ಜೊತೆಗಿದೆ, ಸರ್ಕಾರದಿಂದ 20 ಲಕ್ಷ ಪರಿಹಾರ ನೀಡುತ್ತೇವೆ, ಸಿಎಂ ಪರಿಹಾರದ ಮೊತ್ತವನ್ನ ಹೆಚ್ಚಿಸಿದ್ದಾರೆ ಅಂತಾ ಹೇಳಿದರು.
ಘಟನೆ ಸಂಬಂಧ ಸೂಕ್ತ ಶಾಶ್ವತ ಪರಿಹಾರಕ್ಕೆ ಪ್ರಯತ್ನ ಮಾಡುತ್ತೇವೆ, ಹಿರಿಯ ಅಧಿಕಾರಿಗಳು ಸಮಗ್ರವಾಗಿ ಅಧ್ಯಯನ ನಡೆಸಿ ವರದಿ ಕೊಡುತ್ತಾರೆ. ವರದಿಯಲ್ಲಿ ಏನೆಲ್ಲಾ ಶಿಫಾರಸ್ಸುಗಳನ್ನ ಮಾಡ್ತಾರೆ ಅದರ ಪ್ರಕಾರ ಕ್ರಮ ಕೈಗೊಳ್ಳುತ್ತೇವೆ. ಎಲ್ಲೆಲ್ಲಿ ಅಗತ್ಯ ಇದೆ ಅಲ್ಲಲ್ಲಿ ಕಾರ್ಯಪಡೆ ರಚನೆ ಮಾಡಿದ್ದೇವೆ, ಮತ್ತೆ ಅಗತ್ಯ ಇರುವ ಕಡೆ ಟಾಸ್ಕ್‌ಫೋರ್ಸ್ ರಚನೆ ಮಾಡುತ್ತೇವೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದರು
ಚಿರತೆ ದಾಳಿಯಿಂದ ಮಾದಪ್ಪನ ಭಕ್ತ ಸಾವನ್ನಪ್ಪಿರುವ ಹಿನ್ನೆಲೆ, ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆಗೆ ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ಬೆಳಗ್ಗೆ 6 ರಿಂದ ಸಂಜೆ 6 ರವರೆಗೆ ಮಾತ್ರ ಪಾದಯಾತ್ರೆಗೆ ಅವಕಾಶ ನೀಡಲು ಅರಣ್ಯ ಇಲಾಖೆ ಮುಂದಾಗಿದೆ. ಈ ಮೊದಲು ಶಿವರಾತ್ರಿ, ದೀಪಾವಳಿಗೆ ಮಾತ್ರ ಭಕ್ತರು ಪಾದಯಾತ್ರೆ ಬರುತ್ತಿದ್ದರು. ಆದ್ರೀಗ ನಿತ್ಯ ಪಾದಯಾತ್ರೆಗೆ ಭಕ್ತರು ಬರುತ್ತಿದ್ದಾರೆ.
ಮಾಡುವುದು ಸೂಕ್ತವಲ್ಲ, ಪಾದಯಾತ್ರೆ ಸಮಯ ನಿಗದಿಗೊಳಿಸಲು ಜಿಲ್ಲಾಡಳಿತ, ಪ್ರಾಧಿಕಾರದ ಜೊತೆಗೆ ಚರ್ಚೆ ಮಾಡುತ್ತೇವೆ. ಪಾದಯಾತ್ರೆ ಮಾಡುವ ಭಾಗದಲ್ಲಿ ಇತ್ತೀಚೆಗೆ ಚಿರತೆ ಕಾಣಿಸಿಕೊಳ್ಳುತ್ತಿದೆ. ಭಕ್ತರ ಸುರಕ್ಷತೆ ದೃಷ್ಟಿಯಿಂದ ಚಿರತೆ ಸೆರೆಹಿಡಿಯಲು ಕ್ರಮ ಕೈಗೊಳ್ಳಲಾಗುವುದು, ಚಿರತೆ ಸೆರೆಹಿಡಿಯಲು ಅರಣ್ಯ ಇಲಾಖೆಯಿಂದ ಬೋನು ಅಳವಡಿಸಲಾಗುವುದು ಎಂದು ಡಿಸಿಎಫ್ ಭಾಸ್ಕರ್ ಮಾಹಿತಿ ನೀಡಿದ್ರು.
ವರದಿ: ಮಹದೇವಪ್ರಸಾದ್ ಹಂಗಳ



