ಇತ್ತೀಚಿನ ಸುದ್ದಿ
Trending

ಬಡಾವಣೆಯ ಅಭಿವೃದ್ದಿಗೆ ಒತ್ತು ನೀಡಲು ಪುರಸಭೆ ಮುಖ್ಯಾಧಿಕಾರಿಗೆ ಸೂಚನೆ

ಗಡಿಸೋಮನಾಳ ರಸ್ತೆಯ ಹುಡ್ಕೋ ಬಡಾವಣೆಯಲ್ಲಿ ನಾನಾ ಸಮಸ್ಯಗಳಿಂದ ಅಲ್ಲಿಯ ನಿವಾಸಿಗಳಿಗೆ ತೊಂದರೆಯಾಗುತ್ತಿದೆ ಎಂಬ ದೂರಿನ ಹಿನ್ನೇಲೆ ವಿಜಯಪುರ ಲೋಕಾಯುಕ್ತ ವರಿಷ್ಠಾಧಿಕಾರಿ ಟಿ.ಮಲ್ಲೇಶಿ ಅವರು ಮಂಗಳವಾರರಂದು ಹುಡ್ಕೋ ಬಡಾವಣೆಗೆ ಬೆಟ್ಟಿ ನೀಡಿ ನಿವಾಸಿಗಳ ತೊಂದರೆಯನ್ನು ಆಲಿಸಿದರಲ್ಲದೇ ಸ್ಥಳದಲ್ಲಿಯೇ ಉಪಸ್ಥಿತರಿದ್ದ ಪುರಸಭೆ ಮುಖ್ಯಾಧಿಕಾರಿ ಮೋಹನ್ ಜಾಧವ ಅವರಿಗೆ ಕೆಲವು ಸಲಹೆ ಸೂಚನೆಗಳನ್ನು ನೀಡಿದರು.

ಹುಡ್ಕೋ ಬಡಾವಣೆಯು ಈಗಾಗಲೇ ಪುರಸಭೆಗೆ ಹ್ಯಾಂಡೋರ್ ಆಗಿದೆ ಆದರೆ ಈ ಬಡವಾಣೆಗೆ ಕುಡಿಯುವ ನೀರಿನ ತೊಂದರೆ, ಬೀದಿ ದೀಪ ಸಮಸ್ಯೆ ಮತ್ತು ಮುಳ್ಳು ಕಂಠಿಗಳಲ್ಲಿ ಬೆಳೆದು ನಿಂತಿವೆ ಅಲ್ಲದೇ ಬಡಾವಣೆಗೆ ಸಂಬಂದಿಸಿ ಮನೆಗಳ ಉತ್ತಾರೆಯಲ್ಲಿ ಎ ಖಾತಾ ಬದಲು ಬಿ ಖಾತಾ ನೀಡುತ್ತಿದ್ದಾರೆ ಇದನ್ನು ಸರಿಪಡಿಸಬೇಕೆಂದು ಮನವಿ ಮಾಡಿದರು. ಲೋಕಾಯುಕ್ತ ಅಧಿಕಾರಿ ಟಿ.ಮಲ್ಲೇಶಿ ಅವರು ಸ್ಥಳದಲ್ಲಿಯೇ ಇದ್ದ ಮುಖ್ಯಾಧಿಕಾರಿ ಮೋಹನ್ ಜಾಧವ ಅವರಿಗೆ ವಿಚಾರಿಸಿದಾಗ ಅಧಿಕೃತವಾಗಿ ಹುಡ್ಕೋದವರಿಂದಾಗಲಿ ಅಥವಾ ಪುರಸಭೆಯಲ್ಲಿ ನೊಂದಣಿ ಮಾಡಿದ್ದರೆ ಮಾತ್ರ ಎ ಖಾತಾ ಉತ್ತಾರೆ ಕೊಡಲು ಸೂಚಿನೆ ಇದೆ ಇಲ್ಲದಿದ್ದರೆ ಬಿ ಖಾತಾ ಕೊಡಬೇಕೆಂಬ ನಿರ್ದೇಶನವಿದೆ ಹೀಗಾಗಿ ಉತ್ತಾರೆಗೆ ಸಂಬಂದಿಸಿ ತಮ್ಮ ತಮ್ಮ ಜಾಗೆಯ ಅಧಿಕೃತ ನೊಂದಣಿಯ ದಾಖಲೆಗಳನ್ನು ಸಲ್ಲಿಸಿದರೆ ಎ ಖಾತಾ ಉತ್ತಾರೆ ನೀಡುವದಾಗಿ ತಿಳಿಸಿದರು. ಬಡಾವಣೆಯ ನಾಗರಿಕರು ಎಲ್ಲ ಸರಿಯಾದ ದಾಖಲೆಗಳನ್ನು ಸಲ್ಲಿಸುತ್ತೇವೆ ಎ ಖಾತಾ ಉತ್ತಾರೆ ನೀಡಬೇಕೆಂದಾಗ ಲೋಕಾಯುಕ್ತ ಅಧಿಕಾರಿಗಳು ಜಾಗೆಯ ದಾಖಲಾತಿಗಳ ಬಗ್ಗೆ ಜನರಿಗೆ ಮಾಹಿತಿ ಕೊರತೆ ಇರುತ್ತದೆ ಅಂತವರಿಗೆ ದಾಖಲೆಗಳ ಬಗ್ಗೆ ಮಾಹಿತಿ ನೀಡಿ ಅವರಿಗೆ ಎ ಖಾತಾ ಉತ್ತಾರೆ ನೀಡಿ ಎಂದು ಸೂಚಿಸಿದರು. ಮತ್ತು ಬಡಾವಣೆಯಲ್ಲಿ ಸ್ವಚ್ಚತೆ ಆದ್ಯತೆ ನೀಡಿ ಬೀದಿ ದೀಪಗಳನ್ನು ಸರಿಪಡಿಸಿ ಮುಳ್ಳು ಕಂಠಿಗಳನ್ನು ಸ್ವಚ್ಚಗೊಳಿಸಲು ಕ್ರಮ ವಹಿಸಿರಿ ಎಂದು ಮುಖ್ಯಾಧಿಕಾರಿಗೆ ಸೂಚಿಸಿದರು.

ನಂತರ ಪಟ್ಟಣದ ಎಸ್ ಮಾರ್ಟ ಹತ್ತಿರ ಪಕ್ಕದ ರಸ್ತೆಯನ್ನು ವ್ಯಕ್ತಿಯೊಬ್ಬರು ಬಂದ್ ಮಾಡಿದ್ದರ ಕುರಿತು ಪರಿಶೀಲಿಸಿದರಲ್ಲದೇ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ಯಾರೇ ಕಟ್ಟಿಕೊಂಡಿದ್ದರೂ ಅವುಗಳನ್ನು ತೆರವುಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕೆಂದು ಮುಖ್ಯಾಧಿಕಾರಿಗೆ ಸೂಚಿಸಿದರು.

ದೇವರ ಹಿಪ್ಪರಗಿ ರಸ್ತೆಯ ಜಾನಕಿ ಹಳ್ಳವನ್ನು ಕೆಲವರು ಒತ್ತೂವರಿ ಮಾಡಿಕೊಂಡು ಮನೆಗಳನ್ನು ಕಟ್ಟಿಕೊಂಡಿದ್ದಾರೆ ಲೇಔಟ್ ಮಾಡಿದವರಿಂದಲೇ ಒತ್ತೂವರಿಯಾಗಿದೆ ಎಂಬ ದೂರಿನನ್ವಯ ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆದುಕೊಂಡು, ಈ ಕುರಿತು ಶೀಘ್ರ ಕ್ರಮ ಕೈಕೊಳ್ಳುವದಾಗಿ ತಿಳಿಸಿದರು.

ಈ ಸಮಯದಲ್ಲಿ ಲೋಕಾಯುಕ್ತ ಡಿಎಸ್‌ಪಿ ಸಿಪಿಐ ಆನಂದ ಟಕ್ಕಣ್ಣವರ, ಪುರಸಭೆ ಸದಸ್ಯ ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ಹುಡ್ಕೋ ಬಡಾವಣೆಯ ನಿವಾಸಿಗಳಾದ ಚಿಂತಪ್ಪಗೌಡ ಯಾಳಗಿ, ಬಸನಗೌಡ ಕೋಳ್ಯಾಳ, ಸಂಭಾಜಿ ವಾಡಕರ, ಬಂಡು ದಾಯಪುಲೆ, ಬಿ.ಎನ್.ಹಿಪ್ಪರಗಿ, ಮುರುಗೇಶ ಕಡಕೋಳ, ಸಿದ್ದನಗೌಡ ಪಾಟೀಲ ನಾವದಗಿ, ವೀರೇಶ ಕೋರಿ, ಹಾಗೂ ಪುರಸಭೆ ಸಿಬ್ಬಂದಿ ಇದ್ದರು.

Related Articles

Leave a Reply

Your email address will not be published. Required fields are marked *

Back to top button