ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎ.ಆರ್.ಕೃಷ್ಣಮೂರ್ತಿ ಭೂಮಿ ಪೂಜೆ

ಯಳಂದೂರು. ಕೊಳ್ಳೇಗಾಲ ವಿಧಾನಸಭಾ ಕ್ಷೇತದಲ್ಲಿ ಶಾಸಕ ಎ. ಆರ್. ಕೃಷ್ಣಮೂರ್ತಿ ರವರು 20 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದರು.
ಲೋಕೋಪಯೋಗಿ ಇಲಾಖೆ ರಾಜ್ಯ ಹೆದ್ದಾರಿ ಅಭಿರುದ್ದಿ ಯೋಜನೆ ಅಡಿಯಲ್ಲಿ ಯಳಂದೂರಿನ ಬಳೇಪೇಟೆ ವೃತ್ತ ದಿಂದ ವೈ. ಕೆ. ಮೊಳೆ ಕೆರೆ ಸಂಪ್ ವರೆಗೆ 7 ಕೋಟಿ. ರೂ. ವೆಚ್ಚದಲ್ಲಿ 2 ಕಿ. ಮೀ. ಉದ್ದ ರಸ್ತೆ, ರಸ್ತೆಯ ಪಾರ್ಮೇಶನ್ ಅಗಲ 10 ಮೀಟರ್, ಡಾಂಬರು ರಸ್ತೆ 700.00 ಮೀಟರ್ (ಎರಡು ಬದಿಯಲ್ಲಿ) ಕಾಮಗಾರಿ ಹಾಗೂ 13 ಕೋಟಿ ರೂ. ವೆಚ್ಚದಲ್ಲಿ ಬಳೇಪೇಟೆ ವೃತ್ತ ದಿಂದ ಗುಂಬಳ್ಳಿ ಮಾರ್ಗ ರಂಗನಾಥ ಪುರದ ವರೆಗೆ ಆಯ್ದ ಭಾಗಗಳಲ್ಲಿ ಬಿ.ಆರ್. ಹಿಲ್ಸ್. ರಾಜ್ಯ ಹೆದ್ದಾರಿ 57 ರ ರಸ್ತೆ ಸರಪಳಿ ಹಾಗೂ ಯಳಂದೂರು ಗುಂಡ್ಲುಪೇಟೆ ರಾಜ್ಯ ಹೆದ್ದಾರಿ 81 ರ ಅಭಿವೃದ್ಧಿ ಕಾಮಗಾರಿ 5.50. ಕಿ.ಮೀ, ರಸ್ತೆಯ ಪಾರ್ಮೇಶನ್ ಅಗಲ 10 ಮೀಟರ್ ಡಾಂಬರು ರಸ್ತೆ 7.00 ಮೀಟರ್ ಕಾಮಗಾರಿ ಮತ್ತು ಗುಂಬಳ್ಳಿ ಗ್ರಾಮದಿಂದ ಯರಗಂಬಳ್ಳಿ ಗ್ರಾಮದ ವರೆಗೆ ಲೋಕೋಪಯೋಗಿ ಇಲಾಖೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅನುದಾನದ ಅಡಿಯಲ್ಲಿ ಆಯ್ದ ಭಾಗಗಳಲ್ಲಿ 75 ಲಕ್ಷ ರೂ. ವೆಚ್ಚದ ಕಾಮಗಾರಿಗೆ ಭೂಮಿ ಪೂಜೆಯನ್ನು ನಡೆಸಲಾಯಿತು.
ಈ ವೇಳೆ ಶಾಸಕ ಎ. ಆರ್. ಕೃಷ್ಣಮೂರ್ತಿ ರವರು ಮಾತನಾಡಿ ಈ ದಿನ ಯಳಂದೂರು ತಾಲೂಕಿನಲ್ಲಿ ವೈ. ಕೆ.ಮೊಳೆ,ಗುಂಬಳ್ಳಿ ಹಾಗೂ ಯರಗಂಬಳ್ಳಿ ಗ್ರಾಮದಲ್ಲಿ ಹಲವು ವರ್ಷಗಳಿಂದ ನೆನೆಗುಂದಿಗೆ ಬಿದ್ದಿದ್ದ ರಸ್ತೆ ಕಾಮಗಾರಿಗಳಿಗೆ 20 ಕೋಟಿ. ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆಯನ್ನು ನಡೆಸಿದ್ದೇನೆ, ಅದೇ ರೀತಿ ಹಲವು ಬಾರಿ ಕುಮಾರನಪುರ ಗ್ರಾಮಸ್ಥರು ರಸ್ತೆ ಕಾಮಗಾರಿಗೆ ಮನವಿ ಮಾಡಿದ್ದು ಮುಂದಿನ ದಿನಗಳಲ್ಲಿ ನಡೆಸಲಾಗುವುದು,ಮತ್ತೆ ಬಿಳಿಗಿರಿರಂಗನ ಬೆಟ್ಟದ ಮೆಟ್ಟಿಲು ಕಾಮಗಾರಿಯು ಪ್ರಾರಂಭವಾಗಿದ್ದು ಕ್ಷೇತ್ರಕ್ಕೆ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರು ಅನುದಾನಗಳನ್ನು ನೀಡಿದ್ದು ಕ್ಷೇತ್ರದಲ್ಲಿ ಕಾಮಗಾರಿ ಕೆಲಸಗಳು ಪ್ರಾರಂಭವಾಗಿದೆ, ಸಚಿವರು ಹಾಗೂ ಮುಖ್ಯಮಂತ್ರಿಗಳ ಜೊತೆೆಕ್ಷೇತ್ರದ ಹಲವು ಕೆರೆ, ನಾಲೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಬೇಡಿಕೆ ಇಟ್ಟಿದ್ದು ಮುಂದಿನ ದಿನಗಳಲ್ಲಿ ಅವುಗಳಿಗೂ ಭೂಮಿ ಪೂಜೆ ಮಾಡಿ ಕೆಲಸಗಳನ್ನು ಮಾಡಲಾಗುವುದು, ಕ್ಷೇತ್ರದ ಜನ ನನ್ನನ್ನು ಶಾಸಕನಾಗಲು ಆಶೀರ್ವಾದ ನೀಡಿದ್ದಾರೆ ಅಭಿವೃದ್ಧಿ ನನ್ನ ಮೂಲ ಮಂತ್ರ ಕ್ಷೇತ್ರದ ಜನರ ಪ್ರೀತಿ ವಿಶ್ವಾಸ ನಂಬಿಕೆ ನನಗೆ ರಕ್ಷಣೆ ಅವರಿಗಾಗಿ ಹಗಲಿರುಳು ದುಡಿದು ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಗ್ಯಾರಂಟಿ ಅನುಷ್ಠಾನದ ಯೋಜನೆಯ ಜಿಲ್ಲಾಧ್ಯಕ್ಷ ಹೊಂಗನೂರು ಚಂದ್ರು, ಜೆ. ಯೋಗೇಶ್, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಪುರುಷೋತ್ತಮ್, ಸಹಾಯಕ ಕಾರ್ಯ ಪಾಲಕರಾದ ಸುರೇಂದ್ರ, ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರು, ಮುಖಂಡರು ಹಾಗೂ ಹಾಗೂ ವಿವಿಧ ಗ್ರಾಮದ ಯಜಮಾನರುಗಳು ಮತ್ತು ಸಾರ್ವಜನಿಕರು ಹಾಜರಿದ್ದರು.



