ರಾಜ್ಯ
Trending

ಕೆ.ಆರ್.ಪೇಟೆ ಉನ್ನತ ಮಟ್ಟದ ಕೆಲಸದಲ್ಲೂ ಮೊದಲ ಆದ್ಯತೆ ಅರ್ಹ ಸ್ಥಳೀಯರಿಗೆ ನೀಡಬೇಕು

ಕೆ.ಆರ್.ಪೇಟೆ ಉನ್ನತ ಮಟ್ಟದ ಕೆಲಸದಲ್ಲೂ ಮೊದಲ ಆದ್ಯತೆ ಅರ್ಹ ಸ್ಥಳೀಯರಿಗೆ ನೀಡಬೇಕು ಎಂದು ಜಾಕಿ ಕಾರ್ಖಾನೆಯ ಅಧಿಕಾರಿಗಳಿಗೆ ಶಾಸಕ ಹೆಚ್.ಟಿ ಮಂಜು ತಾಕೀತು

ತಾಲೂಕಿನ ಶೀಳನೆರೆ ಹೋಬಳಿಯ ಹಾದನೂರು ಸಮೀಪವಿರುವ ಜಾಕಿ ಗಾರ್ಮೆಂಟ್ಸ್ ಗೆ ಭೇಟಿ ನೀಡಿ ಕಾರ್ಖಾನೆಯಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರು ಮತ್ತು ನೌಕರರಿಗೆ ಒದಗಿಸುವ ಮೂಲಭೂತ ಸೌಕರ್ಯಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸ್ಥಳೀಯರಿಂದ ಕಾರ್ಖಾನೆಯ ಲೋಪದೋಷಗಳ ಬಗ್ಗೆಯೂ ಮಾಹಿತಿ ಪಡೆದ ನಂತರ ಮಾತನಾಡಿದ ಶಾಸಕರಾದ ಹೆಚ್.ಟಿ ಮಂಜು ನನ್ನ ಕ್ಷೇತ್ರದಲ್ಲಿ ಮಹಿಳೆಯರ ಸ್ವಾವಲಂಬಿ ಬದುಕಿಗೆ ಈ ಕಾರ್ಖಾನೆ ಸಹಕಾರಿಯಾಗಿದೆ ಆದರೆ ಪ್ರಮುಖ ಉನ್ನತ ಮಟ್ಟದ ಉದ್ಯೋಗಕ್ಕೆ ಬಹುತೇಕ ಹೊರ ರಾಜ್ಯ, ಜಿಲ್ಲೆ ನೌಕರರನೇ ತೆಗೆದುಕೊಳ್ಳುತ್ತಿದ್ದೀರಾ ಅದು ನಿಜಕ್ಕೂ ಖಂಡನೀಯ ಮುಂದಿನ ದಿನಗಳಲ್ಲಿ ಈ ವ್ಯವಸ್ಥೆ ಬದಲಾಗಬೇಕು ಏಕೆಂದರೆ ನನ್ನ ತಾಲೂಕಿನಲ್ಲಿ ಅರ್ಹ ವಿದ್ಯಾವಂತರಿದ್ದಾರೆ ಮೊದಲು ಅವರಿಗೆ ಆದ್ಯತೆ ನೀಡಬೇಕು ಎಂದು ಸೂಚಿಸಿದ ಅವರು ಕಾರ್ಖಾನೆಯ ಮೇಲ್ವಿಚಾರಕರ ಅಹಂಕಾರದ ವರ್ತನೆ ಮಿತಿಮೀರಿದೆ ಅದಕ್ಕೂ ಕಡಿವಾಣ ಬೀಳಬೇಕು ಎಂದು ಕಾರ್ಖಾನೆ ಅಧಿಕಾರಿಗಳಾದ ಬಾಬುರಾಜ್, ಶ್ರೀಧರ್, ಎಚ್ಚರಿಕೆ ನೀಡಿ ಎರಡನೇ ಘಟಕದಲ್ಲಿ ತಾಲೂಕಿನ ಮಹಿಳೆಯರಿಗೆ ಮೊದಲ ಪ್ರಾಮುಖ್ಯತೆ ನೀಡುವಂತೆ ಸೂಚಿಸಿದರು.

ಈ ಸಂದರ್ಭದಲ್ಲಿ ಕಾರ್ಖಾನೆ ಅಧಿಕಾರಿಗಳಾದ ಬಾಬುರಾಜ್, ಶ್ರೀಧರ್, ತಾ.ಪಂ ಮಾಜಿ ಸದಸ್ಯ ಮಲ್ಲೇನಹಳ್ಳಿ ಮೋಹನ್,ಪಿಡಿಓ ನವೀನ್,ಯುವ ಮುಖಂಡ ಪಿ ಬಿ ಮಂಚನಹಳ್ಳಿ ಸತೀಶ್,ಬ್ಯಾಲದಕೆರೆ ಮರೀಗೌಡ,ಶಾಸಕರ ಆಪ್ತ ಸಹಾಯಕ ಅರಳಕುಪ್ಪೆ ಪ್ರತಾಪ್, ಕಾರ್ಖಾನೆಯ ಸಿಬ್ಬಂದಿಗಳು ಸೇರಿದಂತೆ ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button